ಯುವಕ ತನ್ನ ಗರ್ಲ್ ಫ್ರೆಂಡ್ ಗೆ ತೊರೆಯನ್ನು ದಾಟಿಸಲು ಮಾಡಿದ ಈ ಪ್ರಯತ್ನ…. ವಿಡಿಯೋ ವೈರಲ್!

ಯುವಕ ತನ್ನ ಗರ್ಲ್ ಫ್ರೆಂಡ್ ಗೆ ತೊರೆಯನ್ನು ದಾಟಿಸಲು ಮಾಡಿದ ಈ ಪ್ರಯತ್ನ…. ವಿಡಿಯೋ ವೈರಲ್!

ಸೋಶಿಯಲ್ ಮೀಡಿಯಾದಲ್ಲಿ ಸತತವಾಗಿ ಹೊಸದಾದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ವೈರಲ್ ಆಗುವ ವಿಡಿಯೋಗಳಲ್ಲಿ ಕೆಲವಂತೂ ತುಂಬಾ ತಮಾಷೆಯಾಗಿರುತ್ತದೆ. ಇನ್ನು ಕೆಲವು ವಿಡಿಯೋಗಳು ನೋಡುಗರಿಗೆ ಏನಾದರೂ ಪಾಠ ಕಲಿಸುತ್ತದೆ. ಸದ್ಯ ಈಗ ನೋಡುವ ವಿಡಿಯೋ ಒಬ್ಬ ಯುವಕ ಮತ್ತು ಆತನ ಗರ್ಲ್ ಫ್ರೆಂಡ್ ದ್ದಾಗಿದೆ. ಪ್ರೀತಿಯಲ್ಲಿ ಪ್ರೇಮಿಗಳು ತಮ್ಮ ಪಾರ್ಟ್ನರ್ ಗೆ ಖುಷಿ ನೀಡುವ ಸಲುವಾಗಿ ಅಥವಾ ತಮ್ಮ ಪ್ರೀತಿಯನ್ನು ವ್ಯಕ್ತ ಮಾಡುವ ಸಲುವಾಗಿ ಎಂತೆಂಥ ಕೆಲಸಗಳನ್ನು ಮಾಡುತ್ತಾರೆ ಎಲ್ಲರಿಗೂ ಗೊತ್ತೇ ಇದೆ.

ಈಗ ಈ ವಿಡಿಯೋದಲ್ಲಿ ಯುವಕನು ತನ್ನ ಗರ್ಲ್ ಫ್ರೆಂಡ್ ಗಾಗಿ ಮಾಡಿದ ಈ ಕೆಲಸ ನೋಡಿ ನೇಟಿಜನ್ಸ್ ಗಳು ತುಂಬಾ ಇಂಪ್ರೆಸ್ ಆಗಿದ್ದಾರೆ.

ವಿಡಿಯೋದಲ್ಲಿ ಕಾಣುವ ಹಾಗೆ ಯುವಕನು ತನ್ನ ಗರ್ಲ್ ಫ್ರೆಂಡ್ ಜೊತೆಗೆ ಬೆಟ್ಟದಿಂದ ಧುಮ್ಮಿಕ್ಕುವ ಸಣ್ಣ ಜಲಪಾತದ ಅಥವಾ ತೊರೆಯ ಬದಿಯಿಂದ ಬರುತ್ತಿದ್ದಾನೆ. ಗರ್ಲ್ ಫ್ರೆಂಡ್ ಆತನಿಗೆ ಫಾಲೋ ಮಾಡುತ್ತಿದ್ದಾಳೆ. ಮುಂದೆ ಕಲ್ಲುಗಳ ಮಧ್ಯದಿಂದ ಹರಿದುಹೋಗುವ ಹಾಗೂ ದಾಟಲು ಸ್ವಲ್ಪ ಅಂತರ ಹೆಚ್ಚಿರುವ ತೊರೆಯ ಹತ್ತಿರ ಬರುತ್ತಾರೆ. ಆಗ ಯುವಕನು ಸ್ವಲ್ಪ ಹಿಂದೆ ಮುಂದೆ ಯೋಚನೆ ಮಾಡದೆ ಎರಡು ಬದಿಯಲ್ಲಿರುವ ದೊಡ್ಡ ದೊಡ್ಡ ಕಲ್ಲುಗಳ ಆಧಾರ ತೆಗೆದುಕೊಂಡು ಹರಿಯುವ ನೀರಿನ ಮೇಲೆ ಬೋರಲಾಗಿ ಸೇತುವೆ ಹಾಗೆ ಮಲಗುತ್ತಾನೆ. ಆಗ ಗರ್ಲ್ ಫ್ರೆಂಡ್ ಆತನ ಬೆನ್ನಿನ ಮೇಲೆ ಕಾಲಿಟ್ಟು ಒಂದು ಬದಿಯಿಂದ ಇನ್ನೊಂದು ಬದಿಗೆ ಪಾಸ್ ಆಗುತ್ತಾಳೆ.

ವಿಡಿಯೋ ನೋಡಿ

ಯುವಕನು ಗರ್ಲ್ ಫ್ರೆಂಡ್ ಪ್ರತಿ ತೋರಿಸುವ ಪ್ರೀತಿಯ ಈ ಕ್ಯೂಟ್ ವಿಡಿಯೋ hepgul5 ಹೆಸರಿನ ಅಕೌಂಟ್ ಮುಖಾಂತರ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 3 ಲಕ್ಷ 75 ಸಾವಿರ ಲೈಕ್ಸ್ ಗಳನ್ನು ಪಡೆದಿದೆ. ಅಲ್ಲದೆ ಅನೇಕ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.