Articles

ವಿಡಿಯೊ : ಪಂಜಾಬ್ ನ ಕಾಲುವೆಯಲ್ಲಿ ಸಾವಿರಾರು ರೆಮೆಡಿಸ್ವಿರ್ ಇಂಜೆಕ್ಷನ್ : ವಿಡಿಯೊ ಟ್ವೀಟ್ ಮಾಡಿ ಪ್ರಶ್ನಿಸಿದ ಬಿಜೆಪಿ ನಾಯಕ

ಪಂಜಾಬ್‌ ನ ಭಕ್ರ ಕಾಲುವೆಯಲ್ಲಿ ತೇಲುತ್ತಿರುವ ಇಂಜೆಕ್ಷನ್ ಬಾಟಲುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ವಿಡಿಯೋ ಟ್ವೀಟ್ ಮಾಡಿ ಪಂಜಾಬ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಭಕ್ರ ಕಾಲುವೆಯಲ್ಲಿ ಸಾಕಷ್ಟು ಎಂಜೆಕ್ಷನ್ ವಾಯ್ಲ್ ಗಳು ತೇಲುತ್ತಿರುವ ವಿಡಿಯೊವನ್ನು ಕೂಡ ಅವರು ಟ್ವೀಟ್ ಮಾಡಿದ್ದಾರೆ.

“ಗೌರವಾನ್ವಿತ ಪಂಜಾಬ್ ಮುಖ್ಯಮಂತ್ರಿಗಳೇ…ರೋಗಿಗಳು ಈ ಅಗತ್ಯ ಔ’ಷ’ಧಿಗಳಿಗಾಗಿ ಹೋರಾಡುತ್ತಿದ್ದಾರೆ. ಆದರೆ ರೆಮೆಡಿಸ್ವೀರ್ ಇಂಜೆಕ್ಷನ್ ಬಾಟಲುಗಳನ್ನು ಕಾಲುವೆಗೆ ಎಸೆಯಲಾಗುತ್ತಿದೆ! ಈ ಅ’ಪ’ರಾ’ಧ ಕೃತ್ಯಕ್ಕೆ ಯಾರು ಹೊಣೆ? ಪಂಜಾಬ್ ಸರ್ಕಾರ ಏಕೆ ಮೌನವಾಗಿದೆ?” ಎಂದು ಬಿಜೆಪಿ ನಾಯಕ ಪ್ರಶ್ನಿಸಿದ್ದರು.

ಆದರೆ ಪಂಜಾಬಿನ ಔಷಧ ನಿಯಂತ್ರಣ ಅಧಿಕಾರಿ ಈ ಬಾಟಲಿಗಳು ನಕಲಿ ಎಂದು ಹೇಳಿದ್ದಾರೆ. ಟ್ರಿಬ್ಯೂನ್ ವರದಿ ಪ್ರಕಾರ ಭಕ್ರ ಕಾಲುವೆಯಲ್ಲಿ ತೇಲಿದ್ದು ನಕಲಿ ರೆಮ್ಡೆಸಿವಿರ್ ಬಾಟಲುಗಳು. ಡಿಎಸ್ಪಿ ನೇತೃತ್ವದ ಪೊಲೀಸ್ ತಂಡವು ನೂರಾರು ಸಿಪೊಪ್ರಜೋನ್ ಇಂಜೆಕ್ಷನ್ ಬಾಟಲುಗಳನ್ನು ವಶಪಡಿಸಿಕೊಂಡಿದೆ, ಅವರೊಂದಿಗೆ ಆರೋಗ್ಯ ಅಧಿಕಾರಿಗಳು ಇದ್ದರು.

ಒಟ್ಟಾರೆಯಾಗಿ, 621 Remdesivir ಮತ್ತು 1,456 ಸಿಪೊಪ್ರಜೋನ್ ಬಾಟಲುಗಳನ್ನು ಎರಡು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗಿದೆ. ಡ್ರ'”ಗ್ ಕಂಟ್ರೋಲ್ ಆಫೀಸರ್ ತೇಜಿಂದರ್ ಸಿಂಗ್ ಮಾತನಾಡಿ, ಬಾಟಲುಗಳ ಲೇಬಲ್‌ ಗಳು ಕಂಪನಿಯ ಮೂಲ ಬಾಟಲುಗಳೊಂದಿಗೆ ಹೊಂದಿಕೆಯಾಗುವುದಿಲ್ಲ, ಇವು ನಕಲಿ ಎಂದಿದ್ದಾರೆ.

ವಶಪಡಿಸಿಕೊಂಡ ಔ’ಷ’ಧಿಗಳ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಗಿದೆ. ಎಫ್‌ಐಆರ್ ದಾಖಲಿಸಲಾಗಿದೆ. ನಾವು ಪ್ರಕರಣದ ಎಲ್ಲಾ ಅಂಶಗಳನ್ನು ತನಿಖೆ ಮಾಡುತ್ತಿದ್ದೇವೆ. ಎಸ್ಪಿ ಮಟ್ಟದ ಅಧಿಕಾರಿ ತನಿಖೆ ನಡೆಸುತ್ತಾರೆ ಎಂದು ಪಂಜಾಬ್ ಸರ್ಕಾರದ ಮೂಲಗಳು ಹೇಳಿವೆ. ವಿಡಿಯೊ ಮೇಲಿದೆ ನೋಡಿ.
-Team Infotrend

Leave a Comment

Your email address will not be published. Required fields are marked *