ಯುವರಾಜ್ ಸಿಂಗ್ ವಿರುದ್ಧ FIR, ಐದು ವರ್ಷದವರೆಗೆ ಜೈಲು ಶಿಕ್ಷೆಯ ಸಾಧ್ಯತೆ!

ಭಾರತದ ಪೂರ್ವ ಕ್ರಿಕೆಟರ್ ಯುವರಾಜ್ ಸಿಂಗ್ ಸಂಕಟದಲ್ಲಿ ಸಿಲುಕುತ್ತಿರುವದು ಕಂಡು ಬರುತ್ತಿದೆ. ಹಿಸಾರ್ ದ ಒಬ್ಬ ವಕೀಲ ಮತ್ತು ದಲಿತ ಮುಖಂಡ ಯುವರಾಜರ ವಿರುದ್ಧ ಕೇಸು ದಾಖಲಿಸಿದ್ದಾನೆ. ಯುವರಾಜರ ವಿರುದ್ಧ ಈ ಕೇಸು ರೋಹಿತ್ ಶರ್ಮಾರ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಚಾಟ್ ಮಾಡುವ ಸಂದರ್ಭದಲ್ಲಿ ಯಜರ್ವೇಂದ್ರ ಚಹಲ್ ಅವರ ಬಗ್ಗೆ ಜಾತಿಯ ಬಗ್ಗೆ ಮಾಡಿದ ಟಿಪ್ಪಣಿ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಲೈವ್ ಚಾಟಿಂಗ್ ನಲ್ಲಿ ಯುವರಾಜ್ ಸಿಂಗ್ ಅವರು ಚಹಲ್ ಮತ್ತು ಕುಲದೀಪ್ ಯಾದವ ಅವರುಗಳ ಬಗ್ಗೆ ಅವರವರ ಜಾತಿಯ ಉಲ್ಲೇಖ ಮಾಡಿ ಟಿಪ್ಪಣಿಯನ್ನು ಮಾಡಿದ್ದರು. ಇದರ ನಂತರ ನೆಟ್ಟಿಗರು ಟ್ವಿಟ್ಟರ್ ನಲ್ಲಿ #ಯುವರಾಜ್ಸಿಂಗ್ಮಾಫಿ_ಮಾಂಗೋ (ಯುವರಾಜ್ ಸಿಂಗ್ ಕ್ಷಮೆ ಕೇಳಿ) ಎಂದು ಒಂದು ಕ್ಯಾಂಪೇನ್ ಸಹ ನಡೆಸಿದ್ದಾರೆ. ಈಗ ಹಿಸ್ಸಾರದ ಒಬ್ಬ ದಲಿತ ಮುಖಂಡ ಮತ್ತು ವಕೀಲನೂ ಆದ ರಜತ ಕಲಸನ್ ಹೆಸರಿನ ವ್ಯಕ್ತಿ ಪ್ರಸ್ತುತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹಿಸಾರ್ ದ ಹಾಂಸಿಯಲ್ಲಿ ಯುವರಾಜರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ನೆಟ್ಟಿಗರು ಯುವರಾಜರಿಗೆ ಕ್ಷಮೆ ಯಾಚಿಸಲು ಆಗ್ರಹಿಸುತ್ತಿದ್ದಾರೆ, ಇನ್ನು ಕೆಲವರು ಅವರನ್ನು ಉಳಿಸುವ ಪಕ್ಷದಲ್ಲಿಯೂ ಇದ್ದಾರೆ. ಆದರೀಗ ವಿಷಯ ಸೋಶಿಯಲ್ ಮೀಡಿಯಾದಿಂದ ಒಂದು ಮೆಟ್ಟಿಲು ಮುಂದೆ ಹೋಗಿದೆ. ಕೇಸು ದಾಖಲಿಸಿದ ನಂತರ ಅವರು ರೋಹಿತ್ ಶರ್ಮಾರ ಮೇಲೂ ಕೆಂಡ ಕಾರಿದ್ದಾರೆ. ಯುವರಾಜ್ ಕಾಮೆಂಟ್ ಮಾಡಿದ ನಂತರ ರೋಹಿತ್ ಶರ್ಮಾ ಅವರು ತಮ್ಮ ಅಸಮಾಧಾನವನ್ನು ತೋರದೆ ಹಾಗೆ ನಗುತ್ತ ನಿಂತರು. ಅಷ್ಟೇ ಅಲ್ಲ ವಕೀಲ ರಜತ ಅವರು ಯುವರಾಜ್ ಅವರಿಗೆ ಅರೆಸ್ಟ್ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.

I

ರಜತ ಅವರು ತಮ್ಮ ದೂರಿನಲ್ಲಿ, ಯುವರಾಜ ಅವರು ತಮ್ಮ ವಿಡಿಯೋ ಚಾಟಿಂಗ್ ನಲ್ಲಿ ದಲಿತರ ಬಗ್ಗೆ ಅಸಭ್ಯವಾದ ಮತ್ತು ಅಪಮಾನಜನಕ ಶಬ್ದಗಳ ಟಿಪ್ಪಣಿಯನ್ನು ಮಾಡಿದ್ದಾರೆ ಅದನ್ನು ಭಾರತ ಸಹಿತ ಸಂಪೂರ್ಣ ಜಗತ್ತಿನ ಜನರು ನೋಡಿದ್ದಾರೆ. ಇದರಿಂದ ಭಾರತದ ದಲಿತರ ಭಾವನೆಗಳಿಗೆ ಪೆಟ್ಟಾಗಿದೆ. ರಜತ ಅವರು ತಮ್ಮ ದೂರಿನ ಜೊತೆಗೆ ವಿವಾದ ಹುಟ್ಟಿಸಿದ ಒಂದು ಡಿವಿಡಿ ಸಹಿತ ಒಪ್ಪಿಸಿದ್ದಾರೆ.

ಲೋಕಲ್ ನ್ಯೂಜ್ ಪ್ರಕಾರ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗವು ಸಹಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಆಯೋಗದ ವಿಭಾಗೀಯ ಕಾರ್ಯಾಗಾರದ ನಿರ್ದೇಶಕರಾದ ರಾಜಕುಮಾರ ಚನೆನಾ ಅವರು ಹಾಂಸಿಯ SP ಯವರಿಗೆ ನೋಟಿಸ್ ತೆಗೆದು 15 ದಿನಗಳಲ್ಲಿ ಸಂಬಂಧಪಟ್ಟ ವಿಷಯದ ರಿಪೋರ್ಟ್ ಕೇಳಿದ್ದಾರೆ. SP ಲೋಕೇಂದ್ರ ಸಿಂಹ ಅವರು ಆಜ್ ತಕ್ ರಿಪೋರ್ಟರ್ ಮನಜೀತ್ ಸೆಹಗಲ್ ಅವರಿಗೆ, ದೂರಿನ ಬಗ್ಗೆ DSP ತನಿಖೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.

ಈ ರೀತಿ ಟೀಕೆ ಅಥವಾ ಟಿಪ್ಪಣಿ ಮಾಡುವದು SC/ST ಎಕ್ಟ್ ಪ್ರಕಾರ 3(1)(X) ಅಂತರ್ಗತ ದಂಡನೀಯ ಅಪರಾಧವಾಗಿದೆ ಮತ್ತು ಇದರಲ್ಲಿ ಆರು ತಿಂಗಳಿಂದ 5 ವರ್ಷಗಳವರೆಗೆ ಜೈಲುವಾಸವೂ ಆಗಬಹುದು.

ಚಹಲ್ ಮತ್ತು ಕುಲದೀಪ್ ಬಗ್ಗೆ ಜಾತಿಯ ಆಧಾರದ ಶಬ್ದಗಳನ್ನು ಉಪಯೋಗಿಸಿದ ಯುವರಾಜ ಅವರಿಗೆ ದುಬಾರಿ ಬೆಲೆಯನ್ನೇ ಕಟ್ಟಬೇಕಾಗಬಹುದೇನೋ?