Articles

ಹುಲ್ಲು ಮೆಯುತ್ತಿರುವ ಜಿಂಕೆಯ ಮೇಲೆ ಚಿರತೆ ಮಾಡಿತು ಚಾಣಾಕ್ಷದಿಂದ ಅಟ್ಯಾಕ್; ಆದರೂ ತನ್ನ ಸ್ಥಾನದಿಂದ ಒಂದಿಂಚು ಸಹ ಕದಲದ ಸ್ಮಾರ್ಟ್ ಜಿಂಕೆ! ನೋಡಿ ಈ ವೈರಲ್ ವಿಡಿಯೋ…

ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ವಿಶೇಷಗಳು ತುಂಬಿರುವ ವಿಡಿಯೋ ಮತ್ತು ಫೋಟೋ ದಿನನಿತ್ಯ ನಮ್ಮ ಕಣ್ಣಿಗೆ ಬಿದ್ದೇ ಬೀಳುತ್ತವೆ. ಅದರಲ್ಲೂ ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಜೀವನವಂತೂ ತುಂಬಾ ವಿಚಿತ್ರವಾಗಿರುತ್ತದೆ. ಇಲ್ಲಿ ಸಸ್ಯಾಹಾರಿ ಪ್ರಾಣಿಗಳಿಗೆ ಮಾಂಸಹಾರಿ ಪ್ರಾಣಿಗಳಿಂದ ಹೆಜ್ಜೆಹೆಜ್ಜೆಗೆ ಅಪಾಯ ಕಾದಿರುತ್ತದೆ. ಈಗ ಜಿಂಕೆ ಮತ್ತು ಚಿರತೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೇಟಿಜನ್ಸ್ ಗಳು ಜಿಂಕೆಯ ಜಾಣತನಕ್ಕೆ ಮತ್ತು ಅದರ ಆತ್ಮಬಲಕ್ಕೆ ಹೊಗಳುತ್ತಿದ್ದಾರೆ.

ವಿಡಿಯೋದಲ್ಲಿ ಕಾಣುವ ಹಾಗೆ ಚಿರತೆಯು ಹುಲ್ಲು ಮೇಯುತ್ತಿರುವ ಜಿಂಕೆಯ ಮೇಲೆ ತುಂಬಾ ಚಾಣಕ್ಷದಿಂದ ಅಟ್ಯಾಕ್ ಮಾಡಿದೆ. ಆದರೆ ಚಿರತೆ ಮಾಡಿದ ಅಟ್ಯಾಕ್ ಜಿಂಕೆಯ ಮೇಲೆ ಯಾವುದೇ ರೀತಿಯ ಪರಿಣಾಮವೇ ಬೀರಿಲ್ಲ. ಅದು ತನ್ನ ಜಾಗದಿಂದ ಸ್ವಲ್ಪವೂ ಕದಲದೆ ತನ್ನಷ್ಟಕ್ಕೆ ತಾನು ಮೇಯುತ್ತಿರುವುದು ಕಂಡುಬರುತ್ತಿದೆ.

ಅದೇಗೆ ಎನ್ನುತ್ತೀರಾ? ಅದಕ್ಕೆ ಇಲ್ಲಿರುವ ಈ ವಿಡಿಯೋ ನೋಡಿ ನಿಮಗೂ ಗೊತ್ತಾಗುತ್ತದೆ…

ಕ್ಲಿಪ್ ನಲ್ಲಿ ಕಂಡುಬರುವ ಜಿಂಕೆಯನ್ನು ನೋಡುತ್ತಲೇ ಚಿರತೆಯು ಚಾಣಾಕ್ಷತನದಿಂದ ಅದರ ಮೇಲೆ ಜಿಗಿಯಲು ಯತ್ನಿಸುತ್ತದೆ. ಆದರೆ ಜಿಂಕೆ ಮತ್ತು ಚಿರತೆಯ ಮಧ್ಯದಲ್ಲಿ ಸ್ಟೀಲ್ ತಂತಿಯ ಮಜಬೂತಾದ ಬೇಲಿ ಇದೆ. ಚಿರತೆಗೆ ಮೊದಲು ಇದು ಗಮನಕ್ಕೆ ಬರುವುದಿಲ್ಲ.

ಆದರೆ ಇದರ ಜ್ಞಾನ ಮಾತ್ರ ಮೊದಲಿನಿಂದಲೂ ಪರಿಪೂರ್ಣವಾಗಿ ಜಿಂಕೆಗೆ ಇದೆ ಎಂಬುದು ವಿಡಿಯೋದಿಂದ ಗೊತ್ತಾಗುತ್ತದೆ. ಕಾರಣ ಚಿರತೆಯು ತುಂಬಾನೇ ತನ್ನ ಹತ್ತಿರ ಬಂದರೂ ಸಹ ಜಿಂಕೆ ಸ್ವಲ್ಪವೂ ಕದಲದೆ ತನ್ನಷ್ಟಕ್ಕೆ ತಾನು ಹುಲ್ಲು ಮೇಯುತ್ತಾ ನಿಂತಿದೆ. ಈ ತಂತಿಯ ಬೇಲಿಯಿಂದಾಗಿ ಚಿರತೆಯು ತನ್ನನ್ನು ಏನು ಮಾಡಲು ಸಾಧ್ಯವಿಲ್ಲವೆಂಬ ಅರಿವು ಜಿಂಕೆಗೆ ಇದೆ. ಆದ್ದರಿಂದಲೇ ಅದಕ್ಕೆ ಚಿರತೆಯ ಸ್ವಲ್ಪವೂ ಭಯವಿಲ್ಲ. ಅದು ಆನಂದದಿಂದ ಹುಲ್ಲು ಮೇಯುತ್ತಿದೆ.

ವೀಡಿಯೋ ನೋಡಿ

ಈ ವಿಶೇಷವಾದ ವಿಡಿಯೋವನ್ನು ಐಎಫ್ಎಸ್ ಆಫೀಸರ್ ಆದ ಸುಸಂತ ನಂದಾ ಅವರು ಮಾರ್ಚ್ 12 ರಂದು ತಮ್ಮ ಟ್ವಿಟರ್ ಅಕೌಂಟ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕ್ಯಾಪ್ಷನ್ ನಲ್ಲಿ “ವಿಂಡೋ ಶಾಪಿಂಗ್ ಬಾಯ್ ಚೀತಾ (ಚಿರತೆ)” ಎಂದು ಬರೆದಿದ್ದಾರೆ. ತಮ್ಮ ಪ್ರತಿಕ್ರಿಯೆಗಳಲ್ಲಿ ಜಿಂಕೆಯ ಆತ್ಮವಿಶ್ವಾಸ ಮತ್ತು ಜ್ಞಾನದ ಬಗ್ಗೆ ನೇಟಿಜನ್ಸ್ ಗಳು ಕೊಂಡಾಡುತ್ತಿದ್ದಾರೆ.

Leave a Comment

Your email address will not be published. Required fields are marked *