ಯೂಟ್ಯೂಬ್ ನಲ್ಲಿ ಪ್ರಾಂಕ್ ಹೆಸರಿನಲ್ಲಿ ಅಪ್ಲೋಡ್ ಆಗುತ್ತಿವೆ ಅಸಹ್ಯಕರವಾದ ಹಾಗೂ ಅಶ್ಲೀಲ ವಿಡಿಯೋಗಳು; ನಾವು ವಿರೋಧ ಮಾಡುವುದು ಯಾವಾಗ?

ದಿನದಿನಕ್ಕೆ ಸೋಶಿಯಲ್ ಮೀಡಿಯಾ ಉಪಯೋಗ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಖಾಸಗಿ ಜೀವನವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾನೆ. ತಾನು ಎಲ್ಲಿ ಹೋಗುತ್ತಿದ್ದಾನೆ? ಏನು ಮಾಡುತ್ತಿದ್ದಾನೆ? ಎಂಬುದರ ಬಗ್ಗೆ ವಿಸ್ತೃತ ಮಾಹಿತಿಯನ್ನು ವ್ಯವಸ್ಥಿತವಾಗಿ ನೀಡುತ್ತಿದ್ದಾನೆ. ಈ ರೀತಿ ತನ್ನೆಲ್ಲ ವೃತ್ತಾಂತವನ್ನು ವ್ಯಕ್ತಿ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಂತಹ ಮಾಧ್ಯಮಗಳಿಂದ ಶೇರ್ ಮಾಡುತ್ತಿರುತ್ತಾನೆ.

ಕೆಲವೊಂದು ಸಲ ಇವುಗಳಿಂದ ತುಂಬಾ ಹಾನಿಯುಂಟಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇವುಗಳನ್ನು ಬಿಟ್ಟು ಇನ್ನು ಯೂಟ್ಯೂಬ್ ಕಡೆಗೆ ಬಂದರೆ ಜಗತ್ತಿನ ಎಲ್ಲ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಉಚಿತವಾಗಿ ತೋರಿಸುವ ಮಾಧ್ಯಮ. ಇದನ್ನು ಬರೀ ನಮ್ಮ ಜಿಮೇಲ್ ಅಕೌಂಟ್ ಸಹಾಯದಿಂದ ನೋಡಬಹುದು. ಈ ಯೂಟ್ಯೂಬ್ ವಿಡಿಯೋಗಳಿಂದಲೇ BYN, ಅಶಿಷ್ ಚಂಚಲಾನಿ, ಬಿಬಿಕಿ ವೈನ್ಸ್, ಕ್ಯಾರಿಮಿನತಿ ಅವರಂತಹ ಅನೇಕ ತರುಣರು ತಮ್ಮ ಕರಿಯರ್ ಮಾಡಿಕೊಂಡು ಯಶಸ್ಸು ಸಾಧಿಸಿದ್ದಾರೆ. ಇನ್ನೂ ಕೆಲವರು ಯಶಸ್ಸಿನ ಶಿಖರವನ್ನು ಏರುತ್ತಿದ್ದಾರೆ. ಈ ಕಂಟೆಂಟ್ ಗಳ ಜೊತೆಗೆ ಅನೇಕ ಪ್ರಸಿದ್ಧ ಚಲನಚಿತ್ರಗಳು, ಹಾಡುಗಳು, ಸಂದರ್ಶನ, ಮತ್ತು ಪ್ರಸಿದ್ಧ ನ್ಯೂಸ್ ಚಾನೆಲ್ ಇವುಗಳ ಜೊತೆಗೆ ಇನ್ನು ಮಹತ್ವದ್ದೆಂದರೆ ಎಜುಕೇಶನ್ ವಿಡಿಯೋಸ್ ನಂತಹ ಖಜಾನೆ ಇವೆಲ್ಲವುಗಳು ಯೂಟ್ಯೂಬ್ನಲ್ಲಿ ಉಚಿತವಾಗಿ ನೋಡಲು ಸಿಗುತ್ತವೆ.

ನಮಗೆ ಬೇಕಾಗುವ ವಿಷಯಗಳ ಜೊತೆಗೆ ಯೂಟ್ಯೂಬ್ನಲ್ಲಿ ಬೇಡವಾದ ಮತ್ತು ಅಷ್ಟೇ ತುಂಬಾ ಅತಿರೇಕದ ವಿಡಿಯೋಗಳು ಸಹ ಸಾಕಷ್ಟು ನಮ್ಮ ಮುಂದೆ ಹಾಗೆಯೇ ಬರುತ್ತವೆ. ಇವುಗಳಿಗೆ ಪ್ರಾಂಕ್ ಅಥವಾ ತಮಾಷೆಯ ಹೆಸರಿನಲ್ಲಿ ಚಿತ್ರೀಕರಿಸಿ ನೋಡುಗರ ಮುಂದೆ ತರಲಾಗುತ್ತದೆ. ಈ ರೀತಿಯ ಅಸಭ್ಯ ವಿಡಿಯೋಗಳನ್ನು ಹೆಚ್ಚಾಗಿ ಬೆಂಗಳೂರು, ಮುಂಬೈ, ದೆಹಲಿ, ಪುಣೆಗಳಂತಹ ಮೆಟ್ರೋ ಪಟ್ಟಣಗಳಲ್ಲಿಯ ರಸ್ತೆಗಳ ಮೇಲೆ ತರುಣ-ತರುಣಿ ಕೈಯಲ್ಲಿ ಒಂದು ಮೈಕ್ ಹಿಡಿದುಕೊಂಡು ಯುವಕ-ಯುವತಿಯರಿಗೆ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುವುದು, ಅವರ ಖಾಸಗಿ ಜೀವನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳುವುದು, ಇಲ್ಲ ಅವರ ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿರುವ ವಿಡಿಯೋಗಳನ್ನು ನೀವು ನೋಡಿರಬಹುದು.

ಅದರ ಜೊತೆಗೆ ಜನನಿಬಿಡ ಮತ್ತು ಸಂಚಾರದ ರಸ್ತೆಯ ಮಧ್ಯದಲ್ಲಿ ಅಥವಾ ರಸ್ತೆಯ ಬದಿಗೆ ಹುಡುಗನೊಬ್ಬ ಮೂತ್ರ ಮಾಡುತ್ತಿರುತ್ತಾನೆ. ಆತನ ಹಿಂದಿನಿಂದ ಬರುವ ಹುಡುಗಿಯರು ಆತನನ್ನು ನೋಡಿ ನಗುವ ಅಥವಾ ಆತನ ಬಗ್ಗೆ ಮಾತನಾಡುವ ವಿಚಿತ್ರವಾದ ಹಾಗೂ ನೋಡಲು ಅಸಭ್ಯವಾಗಿ ವಿಡಿಯೋಗಳು ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ನೋಡಲು ಸಿಗುತ್ತದೆ. ಮನೋರಂಜನೆ, ತಮಾಷೆ ಹೆಸರಿನಲ್ಲಿ ನಡೆಯುವ ಅಶ್ಲೀಲವಾದ ಆಟಗಳು ಸಮಾಜವನ್ನು ಮುಂದೆ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತವೆ ಎಂದು ವಿಚಾರ ಮಾಡಿದರೆ ತುಂಬಾ ಭಯವಾಗುತ್ತದೆ.

Youth Against Rape ಹೆಸರಿನ ಟ್ವಿಟರ್ನಲ್ಲಿ ಆಫೀಸಿಯಲ್ ಅಕೌಂಟ್ ನಿಂದ ಮೊನ್ನೆ ಒಂದು ವಿಡಿಯೋ ಶೇರ್ ಮಾಡಲಾಗಿತ್ತು. ಈ ವಿಡಿಯೋದಲ್ಲಿ ಒಂದು ಹುಡುಗ ಒಬ್ಬಳು ಹುಡುಗಿಯ ಮೇಲೆ ಯಾವುದೇ ಭೀತಿಯಿಲ್ಲದೆ ಲೈಂಗಿ ಕ ಅತ್ಯಾ ಚಾರ ಮಾಡಲು ಪ್ರಯತ್ನಿಸುತ್ತಾನೆ. ಇದು ಒಂದು ಫ್ರಾಂಕ್ ವಿಡಿಯೋ ಎಂದು ಹುಡುಗಿಗೆ ನಂತರ ಗೊತ್ತಾಗುತ್ತದೆ.

ಸಮಾಜವನ್ನು ಮತ್ತು ಯುವಕರನ್ನು ದುರ್ಮಾರ್ಗಕ್ಕೆ ಒಯ್ಯುವ ಈ ರೀತಿಯ ಅಸಭ್ಯವಾದ, ಅತಿರೇಕದ ವಿಡಿಯೋಗಳನ್ನು ಮಾಡುವಲ್ಲಿ ಹುಡುಗಿಯರು ಸಹ ಹಿಂದೆ ಇಲ್ಲ. ಹುಡುಗಿಯರು ಬಿಂದಾಸ್ ಆಗಿ ಹುಡುಗಿಯರ ಹಿಂದೆಯೇ ಬಿದ್ದು ಅವರಿಗೆ ಬೇಕಾದ ಪ್ರಶ್ನೆಗಳನ್ನು ಕೇಳಲು ಹಿಂದೆಮುಂದೆ ನೋಡುವುದಿಲ್ಲ. ಇಂಥ ಎಲ್ಲ ಅಸಭ್ಯವಾದ ವರ್ತನೆಗಳನ್ನು ಈ ವಿಡಿಯೋಗಳಲ್ಲಿ ನೋಡಬಹುದು.

ಈ ರೀತಿಯ ವಿಡಿಯೋಗಳು ಈಗಷ್ಟೇ ಪ್ರಾರಂಭವಾಗಿಲ್ಲ.

ಇಂಥ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದರೆ ಯೂಟ್ಯೂಬ್ ಸಹಜವಾಗಿ ನಿಮ್ಮ ಮುಂದೆ ನೂರಾರು ವಿಡಿಯೋಗಳನ್ನು ತಂದಿಡುತ್ತದೆ. ಇಂತಹ ವಿಡಿಯೋಗಳಲ್ಲಿ ಕೆಲವೊಂದು ಸಲ ಪಬ್ಲಿಕ್ ಪ್ಲೇಸ್ ಗಳಲ್ಲಿ ಹುಡುಗ-ಹುಡುಗಿಯರ ಪ್ರೈವೇಟ್ ಪಾರ್ಟ್ಸ್ ಗಳಿಗೆ ಸ್ಪರ್ಶ ಮಾಡುವುದು, ಮತ್ತು ಆಕೆಯ ಜೊತೆಗೆ ಶಾರೀರಿಕವಾಗಿ ಸಂಬಂಧ ವಿಡುವದರ ಬಗ್ಗೆ ಕೇಳುವುದು, ಹೀಗೆಲ್ಲ ಮಾಡಿದ ನಂತರ ಇದೊಂದು ತಮಾಷೆಯಾಗಿತ್ತು ಅಲ್ಲಿ ನೋಡಿ ಕ್ಯಾಮೆರಾ ಇದೆ ಮತ್ತು ನಿಮ್ಮ ಶೂಟಿಂಗ್ ಆಗುತ್ತಿದೆ ಎಂದು ಹೇಳುವುದು.

ಈ ರೀತಿಯ ವಿಡಿಯೋಗಳು ಭವಿಷ್ಯದ ಸಮಾಜಕ್ಕಾಗಿ ತುಂಬಾ ಭ ಯಾನಕವಾಗಿದೆ. ಇದಕ್ಕೆ ಎಲ್ಲಿಯಾದರೂ ಮರ್ಯಾದೆ ಬೇಡವೇ? ಇಂತಹ ವಿಚಿತ್ರ ಮತ್ತು ಸಮಾಜಕ್ಕೆ ಘಾತಕವಾದ ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ಮುಕ್ತವಾಗಿ ಅಪ್ಲೋಡ್ ಮಾಡಲಾಗುತ್ತದೆ. ಅಪ್ಲೋಡ್ ಮಾಡುವವರು ಇಂತ ವಿಡಿಯೋಗಳ ಮುಖಾಂತರ ಹಣ ಗಳಿಸುತ್ತಾರೆ. ಈ ರೀತಿಯ ವಿಡಿಯೋಗಳನ್ನು ನೋಡುವ ಜನರು ಕಡಿಮೆ ಇಲ್ಲ ಎನ್ನಬಹುದು. ಇದೇ ರೀತಿ ನಡೆದರೆ ಸಮಾಜದ ಮೇಲೆ ಅಡ್ಡಪರಿಣಾಮಗಳಾಗುವುದು ನಿಶ್ಚಿತ. ಆದ್ದರಿಂದ ಇಂಥವರಿಗೆ ಬ್ಯಾನ್ ಮಾಡುವುದು ಮತ್ತು ಈ ರೀತಿಯ ವಿಡಿಯೋಗಳನ್ನು ಅಪ್ಲೋಡ್ ಮಾಡುವವರ ಮೇಲೆ ಕಠೋರವಾದ ಶಿಕ್ಷೆ ವಿಧಿಸಲೇಬೇಕು. ಅಂದರೇನೆ ಈ ರೀತಿಯ ವಿಡಿಯೋಗಳನ್ನು ಮಾಡುವವರಿಗೆ ಎಲ್ಲಿಯಾದರೂ ಸ್ವಲ್ಪ ಭಯ, ಭೀತಿ ನಿರ್ಮಾಣವಾಗುತ್ತದೆ.

ಮೊದಮೊದಲು ಪಾಶ್ಚಾತ್ಯ ದೇಶಗಳಲ್ಲಿ ಈ ರೀತಿಯ ವಿಡಿಯೋಗಳನ್ನು ಶೂಟ್ ಮಾಡಿ ಮಾಧ್ಯಮಗಳಲ್ಲಿ ಹರಿ ಬಿಡಲಾಯಿತು. ಅವುಗಳನ್ನು ನೋಡಿ ಈಗ ಭಾರತದ ದೊಡ್ಡ ಪಟ್ಟಣಗಳಿಂದ ಹಿಡಿದು ಚಿಕ್ಕಪುಟ್ಟ ನಗರಗಳಲ್ಲಿ ಈ ರೀತಿಯ ವೀಡಿಯೋಗಳನ್ನು ಚಿತ್ರೀಕರಿಸುವುದು ಕಂಡುಬರುತ್ತಿದೆ. ಸೆನ್ಸರ್ ಬೋರ್ಡ್ ಚಲನಚಿತ್ರಗಳಿಗೆ ಕೆಲಸ ಮಾಡುವ ಹಾಗೆ ಯೂಟ್ಯೂಬ್ ಮೇಲೂ ಸಹ ಈ ರೀತಿಯ ಮರ್ಯಾದೆಯನ್ನು ತರುವ ಯಾವುದಾದರೂ ಉಪಾಯ ಯೋಜನೆಗಳನ್ನು ಸರಕಾರ ಮಾಡಬೇಕೆಂದು ವಿನಂತಿಸಿಕೊಳ್ಳೋಣ.