‘ಯೂಥ್ ಐಕಾನ್’ ನಟ ಪುನೀತ್ ಅವರ ಧಿಡೀರ್ ಎಕ್ಸಿಟ್! ಜಿಮ್ ಗೆ ಸಂಬಧಿಸಿದ ಅನೇಕ ಪ್ರಶ್ನೆಗಳಿಗೆ ಹೆಸರಾಂತ ಡಾಕ್ಟರ್ ಗಳ ಸಲಹೆಗಳು.

ಒಳ್ಳೆಯ ಆರೋಗ್ಯ ಮತ್ತು ಆಕರ್ಷಕ ದೇಹಕ್ಕಾಗಿ ಜಿಮ್ ಗೆ ಹೋಗುವವರು ಯಾವ ವಿಷಯಗಳನ್ನು ಗಮನದಲ್ಲಿಡಬೇಕು ಯಾವ ರೀತಿಯ ಕಾಳಜಿ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಈಗ ಚರ್ಚೆ ಶುರುವಾಗಿದೆ.

ನಮ್ಮ ಪುನೀತ್ ಅವರು ಸ್ಯಾಂಡಲ್ ವುಡ್ ನಟರಲ್ಲೇ ತುಂಬಾ ಫಿಟ್ ಎಂದು ತಿಳಿಯಲಾಗಿತ್ತು. ಆರೋಗ್ಯದ ಬಗ್ಗೆ ಕಾಳಜಿ ಅವರಂತೆ ಬಹುಶಃ ಯಾರೂ ತೆಗೆದುಕೊಳ್ಳುತ್ತಿರಲಿಲ್ಲ ಅನಿಸುತ್ತೆ. ಆದರೂ 46 ವಯಸ್ಸಿಗೆ ಆಕಸ್ಮಿಕವಾಗಿ ನಮ್ಮನ್ನಗಲಿದ ಪುನೀತ್ ಅನೇಕರಿಗೆ ದಿಗ್ಭ್ರಮೆ ಗೊಳಿಸಿದ್ದಾರೆ. ಇಂಥ ಫಿಟ್ ಅಂಡ್ ಫೈನ್ ಆದ ಮನುಷ್ಯ ಒಮ್ಮೆಲೆ ನಮ್ಮನ್ನು ಹೇಗೆ ಆಗಲಿ ಹೋಗಲು ಸಾಧ್ಯ ಎಂಬ ಪ್ರಶ್ನೆ ಸದ್ಯ ಎಲ್ಲರನ್ನು ಕಾಡುತ್ತಿದೆ.

ಆಕಸ್ಮಿಕವಾಗಿ ಹಾರ್ಟ್ ಅಟ್ಟ್ಯಾಕ್ ಆಗಲು ಕಾರಣವೇನು?

ಹೃದಯಾಘಾತವಾದ ನಂತರ ಮೊದಲ ಗಂಟೆ ಯಾಕೆ ತುಂಬಾ ಮಹತ್ವದ್ದಾಗಿರುತ್ತದೆ? ಇದಕ್ಕೆ ಗೋಲ್ಡನ್ ಆವರ್ ಎಂದು ಯಾಕೆ ಕರೆಯುತ್ತಾರೆ.

ಪುನೀತ್ ಅವರಿಗೆ ಜಿಮ್ ನಲ್ಲಿರುವಾಗ ಎದೆಯಲ್ಲಿ ನೋವು ಕಂಡು ಬಂದಾಗ ಮೊದಲು ಅವರು ತಮ್ಮ ಫ್ಯಾಮಿಲಿ ಡಾಕ್ಟರ್ ಹಾಗೂ ಸುಪ್ರಸಿದ್ಧ ಕಾರ್ಡಿಯೋಲಾಜಿಸ್ಟ್ ರಮನ್ ರಾವ್ ಅವರನ್ನು ಸಂಪರ್ಕಿಸಿದರು.

ಡಾಕ್ಟರ್ ರಾವ್ ಅವರು ಹೇಳುವ ಪ್ರಕಾರ ಅವರ ನಾಡೀ ಮತ್ತು ರಕ್ತದೊತ್ತಡ ಸಾಮಾನ್ಯವಾಗಿತ್ತು. ಅವರ ಮೈ ಮೇಲಿನ ಬೆವರು ನೋಡಿ ಯಾಕಿಷ್ಟು ಬೆವರು ಎಂದು ಡಾಕ್ಟರ್ ಕೇಳಿದಾಗ ಪುನೀತ್ ಅವರು ನಾನು ಜಿಮ್ ನಲ್ಲಿ ವರ್ಕ್ ಔಟ್ ಮಾಡಿದಾಗ ಇದು ಸಾಮಾನ್ಯ ಡಾಕ್ಟ್ರೇ ಎಂದು ಪುನೀತ್ ಹೇಳಿದ್ದಾರೆ. ಆದರೂ ಡಾಕ್ಟರ್ ಪುನೀತ್ ರ ಇಸಿಜಿ ಮಾಡಿ ನೋಡಿದಾಗ ಅದರಲ್ಲಿ ಸ್ಟ್ರೆನ್ ಕಂಡು ಬಂದಾಗ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ.

ಆದರೆ ವಿಕ್ರಂ ಆಸ್ಪತ್ರೆಯ ವೈದ್ಯರು ಹೇಳುವ ಹಾಗೆ, ಪುನೀತ್ ಅವರಿಗೆ ದಾರಿ ಮಧ್ಯೆದಲ್ಲಿಯೇ ಹೃದಯಾಘಾತ ಸಂಭವಿಸಿತ್ತು. ಹೀಗಾಗಿ ಅವರನ್ನು ಉಳಿಸುವ ಎಲ್ಲ ಪ್ರಯತ್ನಗಳು ವಿಫಲವಾದವು ಎಂದಿದ್ದಾರೆ.

12 ವರ್ಷಗಳ ಮೊದಲು ಎಸ್ಎಪಿ ರಂಜನ್ ದಾಸ್ ಇವರಿಗೂ ಜಿಮ್ ನಿಂದ ಮರಳಿದ ನಂತರ ಮಾರಣಾಂತಿಕ ಹಾರ್ಟ್ ಅಟ್ಯಾಕ್ ಸಂಭವಿಸಿತ್ತು. 42 ವರ್ಷದ ವಯಸ್ಸಿನವರಿಗೆ ಈ ಹೃದಯಾಘಾತ ಏಕೆ ಸಂಭವಿಸುತ್ತದೆ? ಎಂಬ ಪ್ರಶ್ನೆಗಳು ಉಪಸ್ಥಿವಾಗಿದ್ದವು.

ಜನ ಜಿಮ್ ನಲ್ಲಿ ಭಾರವನ್ನು ಎತ್ತುವ ವ್ಯಾಯಾಮ ಮಾಡುತ್ತಾರೆ. ಇದರಿಂದ ಸ್ನಾಯುಗಳು ಸೆಳೆತಕ್ಕೆ ಒಳಗಾಗುತ್ತವೆ. ಭಾರ ಎತ್ತುವದರಿಂದ ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಅತಿಯಾದ ಮತ್ತು ಅಮಾರ್ಯಾದಿತ ವ್ಯಾಯಾಮ ಹೃದಯದ ವಾಲ್ವ್ ಸಲುವಾಗಿ ತುಂಬಾ ಅಪಾಯಕಾರಿಯಾಗಿದೆ ಎಂದು ಜಯದೇವ್ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋ ವ್ಹಸ್ಕುಲರ್ ಸಾಯನ್ಸ್ ಅಂಡ್ ರೀಸರ್ಚ್ (SJICSR) ನ ಸಂಚಾಲಕರಾದ ಡಾ. ಮಂಜುನಾಥ್ ಬಿಬಿಸಿ ಜೊತೆ ಮಾತನಾಡುವಾಗ ಹೇಳುತ್ತಾರೆ.

2017 ರಲ್ಲಿ ಮಾಡಿದ ಸಮೀಕ್ಷೆ ಪ್ರಕಾರ 25-40 ವಯಸ್ಸಿನವರಲ್ಲಿ ಅಟ್ಯಾಕ್ ಪ್ರಮಾಣ ಹೆಚ್ಚಾಗಿದೆ ಎಂಬ ವರದಿ ಮುಂದೆ ಬಂದಿದೆ. ಕಳೆದ 5 ವರ್ಷಗಳಲ್ಲಿ ಈ ರೀತಿಯ ಕೇಸ್ ಗಳಲ್ಲಿ 22 ಪ್ರತಿಶತ ಪ್ರಮಾಣ ಹೆಚ್ಚಾಗಿದೆ. ಈ ಸಮೀಕ್ಷೆಯಲ್ಲಿ 1500 ರೋಗಿಗಳು ಕರ್ನಾಟಕದವರಾಗಿದ್ದರೆ 500 ಜನರು ದೇಶದ ವಿವಿಧ ರಾಜ್ಯದವರಾಗಿದ್ದರು.

ಡಾ. ಮಂಜುನಾಥ್ ಅವರ ಪ್ರಕಾರ ಈ ಜನರಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಇತರ ಯಾವುದೇ ರೋಗಗಳು ಇರಲಿಲ್ಲ. ಅತೀ ಹೆಚ್ಚು ಜನರಲ್ಲಿ ಅಂತೂ ಅಟ್ಯಾಕ್ ಕ್ಕೆ ಕಾರಣವಾಗುವ ಧೂಮಪಾನ, ಕೌಟುಂಬಿಕ ಹಿನ್ನೆಲೆ, ಮಧುಮೇಹ, ಹೈಪರ್ ಟೆನ್ಶನ್ ಮತ್ತು ಹಾಯ್ ಕೊಲೆಸ್ಟ್ರಾಲ್ ಸಹಿತ ಇರಲಿಲ್ಲ.

ಆದರೆ ಪುನೀತ್ ಅವರ ಇಬ್ಬರೂ ದೊಡ್ಡ ಸಹೋದರರಿಗೆ ಹಾರ್ಟ್ ಅಟ್ಯಾಕ್ ಬಂದಿತ್ತು.

ಜಿಮ್ ಗೆ ಹೋಗುವ ಹುಚ್ಚು…

ಈಗಿನ ಯುವ ಪೀಳಿಗೆಗೆ ಜಿಮ್ ಗೆ ಹೋಗಿ ತಮ್ಮ ಮಸಲ್ಸ್ ಗಳನ್ನು ತಯಾರಿಸಿಕೊಳ್ಳುವ ಹುಚ್ಚು ನಿರ್ಮಾಣವಾಗಿರುವುದು ಕಂಡು ಬರುತ್ತಿದೆ.

ಸದ್ಯದ ಸಮಯದಲ್ಲಿ ತರುಣರು ಯಾವುದೇ ರೀತಿಯ ಟೆಸ್ಟ್ ಗಳನ್ನು ಮಾಡಿಕೊಳ್ಳದೆ ಜಿಮ್ ಹೋಗುವದು ಮತ್ತು ಪ್ರೊಟೀನ್ ಸಪ್ಲಿಮೆಂಟ್ ಪಾವಡರ್ ಹಾಗೂ ಪ್ರೊಟೀನ್ ಶೇಕ್ ತೆಗೆದುಕೊಳ್ಳುವ ಪ್ರಮಾಣ ತುಂಬಾ ಹೆಚ್ಚಾಗಿದೆ. ತರುಣರು ಸಾಕಷ್ಟು ಮಾಹಿತಿ ಏನನ್ನೂ ಗೊತ್ತಿಲ್ಲದವರ ಕಡೆಯಿಂದ ಪಡೆದು ಕೊಳ್ಳುತ್ತಾರೆ.

ಅನೇಕ ಜಿಮ್ ಗಳಲ್ಲಿ ಯುವಕರಿಗೆ ಸ್ಟೇರಾಯಿಡ್ ತೆಗೆದುಕೊಳ್ಳುವ ಸಲಹೆ ನೀಡಲಾಗುತ್ತದೆ. ಈ ಸ್ಟೇರಾಯಿಡ್ ದೇಹಕ್ಕೆ ಒಳ್ಳೆಯದಲ್ಲ ಎಂದು ಅಸೋಸಿಯೇಷನ್ ಆಫ್ ಹೆಲ್ತ್ ಪ್ರೊವೈಡರ್ಸ್ ನ ಅಧ್ಯಕ್ಷ ಡಾಕ್ಟರ್ ಅಲೆಕ್ಸಾಂಡರ್ ಥಾಮಸ್ ಹೇಳುತ್ತಾರೆ.

ನಿಯಮಿತವಾಗಿ ಜಿಮ್ ಗೆ ಹೋಗುವವರು ಪ್ರೋಟೀನ್ಸ್ ತೆಗೆದುಕೊಳ್ಳಬೇಕು ಎಂಬ ನಂಬಿಕೆಯಿದೆ. ಆದರೆ ಅದಕ್ಕೆ ಯಾವುದೇ ಆಧಾರವಿಲ್ಲ. ಈ ರೀತಿ ಮಾಡುವುದು ಶುದ್ಧ ತಪ್ಪು. ಡಯಟ್ ನಲ್ಲಿ ಪ್ರೊಟೀನ್ ಕಡಿಮೆ ಇಲ್ಲದಿದ್ದರೆ ಸಪ್ಲಿಮೆಂಟ್ ತಗೆದುಕೊಳ್ಳುವ ಅವಶ್ಯಕತೆ ಇಲ್ಲ. ಕ್ರೀಡಾ ಕ್ಷೇತ್ರಕ್ಕೆ ಸಂಬಂಧವಿರುವ ಅನೇಕ ಆಟಗಾರರು ಸಹ ಡಾಕ್ಟರ್ ಹಾಗೂ ಆಹಾರ ತಜ್ಞರ ಸಲಹೆಯಂತೆ ಪ್ರೋಟೀನ್ ತೆಗೆದುಕೊಳ್ಳುತ್ತಾರೆ ಎಂದು ಪ್ರಸಿದ್ಧ ಫುಡ್ ಎಕ್ಸ್ಪರ್ಟ್ ಶೀಲಾ ಕೃಷ್ಣಸ್ವಾಮಿ ಹೇಳುತ್ತಾರೆ.

ವ್ಯಾಯಾಮ ಎಷ್ಟು ಮಾಡಬೇಕು?

ಡಾಕ್ಟರ್ ಮಂಜುನಾಥ ಅವರು ಹೇಳುವ ಪ್ರಕಾರ, ಹಾಯ್ ಇಂಟೆನ್ಸಿಟಿ ಎಕ್ಸರ್ಸೈಜ್ (ಹೆಚ್ಚಿನ ಒತ್ತಡವನ್ನು ನಿರ್ಮಾಣ ಮಾಡುವ ವ್ಯಾಯಾಮ) ಮಾಡುವ ಮೊದಲು ಹೃದಯದ ಟೆಸ್ಟ್ ಮಾಡಿಕೊಳ್ಳುವುದು ಅಗತ್ಯವಾಗಿದೆ. ಹೊರಗಿನಿಂದ ಆರೋಗ್ಯವಂತರಾಗಿ ಕಂಡುಬಂದರೂ ಒಳಗಿನಿಂದ ನಿಮ್ಮ ಹೃದಯ ನಿರೋಗಿಯಾಗಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಮೊದಮೊದಲು ಹಾಯ್ ಇಂಟೆನ್ಸಿಟಿ ವರ್ಕಔಟ್ ಮಾಡುವ ಮೊದಲು ತಜ್ಞರ ಯೋಗ್ಯ ಮಾರ್ಗದರ್ಶನ ಮತ್ತು ಕಾಳಜಿ ತೆಗೆದುಕೊಳ್ಳುವುದು ಅಗತ್ಯವಾಗಿದೆ.

ಜಿಮ್ ಪ್ರಾರಂಭಿಸಿದ ನಂತರ ಮೊಟ್ಟಮೊದಲೇ ಅತಿಯಾದ ವ್ಯಾಯಾಮವನ್ನು ಮಾಡಬಾರದು. ವ್ಯಾಯಾಮ ಮಾಡುವ ಮೊದಲು ವಾರ್ಮಪ್ ಎಕ್ಸರ್ಸೈಜ್ ಮಾಡಲೇಬೇಕು. ಹಾಯ್ ಇಂಟೆನ್ಸಿಟಿ ವರ್ಕೌಟ್ ಪ್ರಾರಂಭಿಸಿದ ನಂತರ ಅದನ್ನು ಪ್ರತಿನಿತ್ಯ ಮಾಡಬಾರದು. ಇದಕ್ಕೆ ಸಂಬಂಧಿಸಿದ ಕಾಯಿಲೆಗಳು ಶುರುವಾಗುತ್ತವೆ ಎನ್ನುತ್ತಾರೆ. ಜಿಮ್ ನಲ್ಲಿ ಟ್ರೈನಿಂಗ್ ಪ್ರಾರಂಭಿಸಿದ ನಂತರ ಒಂದು ರೂಟೀನ್ ನಿಶ್ಚಿತ ಮಾಡಿ ಅದರ ಪಾಲನೆಯನ್ನು ಮಾಡಬೇಕು ಎಂದು ಫಿಜಿಯೋಥೆರಪಿಸ್ಟ್ ಹೇಳುತ್ತಾರೆ.

ಒಂದೇ ಸ್ಥಳದಲ್ಲಿ ಮತ್ತು ಸದಾ ಕುಳಿತುಕೊಂಡು ಕೆಲಸ ಮಾಡುವ ಲೈಫ್ ಸ್ಟೈಲ್ ಉಳ್ಳವವರು ತಮ್ಮ ದೇಹದ ಅನೇಕ ತಪಾಸಣೆಗಳನ್ನು ಮಾಡಿಕೊಳ್ಳಬೇಕು. ಅವರಿಗೆ ಬೇಗನೆ ಆಯಾಸ ಕಂಡುಬರುತ್ತದೆಯೋ ಅಥವಾ ಇಲ್ಲವೆಂಬ ಅಂಶಗಳನ್ನು ನೋಡಬೇಕಾಗಿರುತ್ತದೆ. ಯಾವುದೇ ವ್ಯಕ್ತಿ ಈ ರೀತಿಯ ವ್ಯಾಯಾಮಕ್ಕಾಗಿ ಫಿಟ್ ಇದ್ದಾನೆ ಅಥವಾ ಇಲ್ಲ ಎಂಬುದರ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಮಂಗಳೂರಿನ ಪಿ ಎ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಪ್ರಾಧ್ಯಾಪಕರಾದ ಸಜೀಶ್ ರಘುನಾಥನ್ ಹೇಳುತ್ತಾರೆ.

ಜಿಮ್ ನಲ್ಲಿ ಬರುವ ಜನರ ಆರೋಗ್ಯದ ಮೇಲೆ ಗಮನ ನೀಡುವ ಸಲುವಾಗಿ ಅಲ್ಲಿ ಡಾಕ್ಟರ್ ಇರುವುದು ಅವಶ್ಯಕವಾಗಿದೆ ಎಂಬ ಕುಮಾರಸ್ವಾಮಿಯವರು ಹೇಳಿದ ಮಾತಿಗೆ ಡಾಕ್ಟರ್ ಮಂಜುನಾಥ್ ಅವರು ಸಮ್ಮತಿಸಿದ್ದಾರೆ. ಜಿಮ್ ನಲ್ಲಿ ತುರ್ತುಪರಿಸ್ಥಿತಿಯನ್ನು ಎದುರಿಸುವ ಸಲುವಾಗಿ ತರಬೇತಿ ಪಡೆದವರು ಇರಬೇಕು. ಅವರಿಗೆ ಪುನರ್ಜೀವನ ಯಂತ್ರಗಳನ್ನು ಹ್ಯಾಂಡಲ್ ಮಾಡಲು ಬರಬೇಕು. ಹಾಗೆಯೇ ತುರ್ತುಪರಿಸ್ಥಿತಿಯಲ್ಲಿ ಹೃದಯವನ್ನು ಮತ್ತೆ ಕಾರ್ಯರೂಪಕ್ಕೆ ತರುವ ಡೆಫೀಬ್ರಿಲೇಟರ್ ಶಾಕ್ ನೀಡಲು ಬರಬೇಕು ಎಂದು ಡಾಕ್ಟರ್ ಮಂಜುನಾಥ್ ಅವರು ಹೇಳುತ್ತಾರೆ.

ಪುನೀತ್ ರಾಜಕುಮಾರ್ ಅವರು ನಮ್ಮ ಕಡೆಗೆ ಹತ್ತು ನಿಮಿಷ ಮೊದಲೇ ಬಂದಿದ್ದರೆ ಬಹುಶಃ ನಾವು ಅವರನ್ನು ಉಳಿಸಬಹುದಿತ್ತು. ಎಷ್ಟೋ ಪೇಷಂಟ್ ಗಳು ನಮ್ಮ ಕಡೆಗೆ ಲೈನ್ ನಲ್ಲಿ ನಿಂತು ವೇಟ್ ಮಾಡಿ ಬಂದು ಟ್ರೀಟ್ಮೆಂಟ್ ತೆಗೆದುಕೊಂಡಿದ್ದಾರೆ. ಆಮೇಲೆ 20-30 ವರ್ಷ ಸಹಜವಾಗಿ ಜೀವಿಸಿದ್ದಾರೆ ಮತ್ತು ಜೀವಿಸುತ್ತಿದ್ದಾರೆ ಎಂದೂ ಮಂಜುನಾಥ ಅವರು ಹೇಳುತ್ತಾರೆ.