ಯೋಗ್ಯ ವ್ಯಕ್ತಿಯ ಶೋಧದಲ್ಲಿ 10 ಬಾರಿ ಮದುವೆಯಾದ ಮಹಿಳೆ! ಆದರೂ ಇನ್ನೂ ಸಿಕ್ಕಿಲ್ಲ ಅಂತೆ ‘ಮಿಸ್ಟರ್ ಪರ್ಫೆಕ್ಟ್!’

ತಮಗನಿಸಿದ್ದನ್ನು ಯಾವುದೇ ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳಿಬಿಡುವ ಜಾಯಮಾನದವರು ಕೆಲವರು ಇರುತ್ತಾರೆ. ಇದರಲ್ಲಿ ಹೆಚ್ಚಾಗಿ ಮುಂದುವರೆದ ರಾಷ್ಟ್ರಗಳ ನಿವಾಸಿಗಳು ಜಾಸ್ತಿ.

ಅಮೆರಿಕೆಯ ಮಹಿಳೆಯೊಬ್ಬಳು ಹೀಗೆ ತಮ್ಮ ಅನುಭವವನ್ನು ಮೀಡಿಯಾದಲ್ಲಿ ಶೇರ್ ಮಾಡಿದ್ದಕ್ಕಾಗಿ ತುಂಬಾ ಸುದ್ದಿಯಲ್ಲಿ ಬಂದಿದ್ದಾರೆ. Cassey ಹೆಸರಿನ ಈ ಮಹಿಳೆಯು ತಮ್ಮ ವೈವಾಹಿಕ ಜೀವನದ ವಿಷಯವನ್ನು ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಷಯ ತುಂಬಾ ಚರ್ಚೆಯಲ್ಲಿದೆ.

ಇವರು ಇಲ್ಲಿಯವರೆಗೆ ಒಟ್ಟು ಹತ್ತು ಬಾರಿ ಮದುವೆಯನ್ನು ಮಾಡಿಕೊಂಡಿದ್ದಾರೆ. ಇವರು ಹೇಳುವ ಪ್ರಕಾರ ಜೀವನದಲ್ಲಿ ಒಂದು ವ್ಯಕ್ತಿ ಬಂದರೆ ಆ ವ್ಯಕ್ತಿ ಪರಿಪೂರ್ಣವಾಗಿ ಸುಖವನ್ನು ನೀಡುವ ಪರ್ಫೆಕ್ಟ್ ವ್ಯಕ್ತಿಯಾಗಿರಬೇಕು. ಇಲ್ಲವಾದರೆ ಮದುವೆಗೆ ಅರ್ಥವಿಲ್ಲ ಅಥವಾ ಮದುವೆಯನ್ನೇ ಮಾಡಿಕೊಳ್ಳಬಾರದು ಎನ್ನುತ್ತಾರೆ.

ಸದ್ಯಕ್ಕಂತೂ ಹುಡುಗ ಹುಡುಗಿಯರು ತಮ್ಮ ಜೊತೆಗಾರ ತುಂಬಾ ಒಳ್ಳೆಯವನಾಗಿರಬೇಕು ಮತ್ತು ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಬೇಕು ಎಂಬ ವಿಚಾರದಿಂದ ಶೋಧಿಸುತ್ತಲೇ ಇರುತ್ತಾರೆ. ಈ ಕಾರಣದಿಂದ ಅವರು ತಡವಾಗಿಯೂ ಲಗ್ನ ವಾಗುತ್ತಾರೆ.

ಈ ಮಹಿಳೆಯು ಇಲ್ಲಿಯವರೆಗೆ ಒಂದರ ನಂತರ ಒಂದು ಹೀಗೆ 10 ಮದುವೆಯಾಗಿದ್ದಾರೆ. ಆದರೂ ಸಹಿತ ತಮ್ಮ ಪಾರ್ಟ್ನರ್ ಮನಸ್ಸಿನಂತೆ ಸರಿಯಾಗಿ ಪರಿಪೂರ್ಣವಾಗಿ ಸಿಕ್ಕಿಲ್ಲವೆಂದು ಇವರು ಹೇಳುತ್ತಾರೆ. ಇವರು ಮಾಡಿಕೊಂಡ 10 ಮದುವೆಗಳಲ್ಲಿ ಹೆಚ್ಚೆಂದರೆ ಒಂದು 8 ವರ್ಷ ಮತ್ತು ಕಡಿಮೆಯೆಂದರೆ ಒಂದು 6 ತಿಂಗಳುಗಳ ಕಾಲಾವಧಿಯ ವರೆಗೆ ಸಂಬಂಧ ಉಳಿದುಕೊಂಡಿತ್ತು. ಈಗ ಸದ್ಯದಲ್ಲೇ ಇವರು ತಮ್ಮ ಹತ್ತನೆಯ ಮದುವೆಯಿಂದಲೂ ಮುಕ್ತರಾಗುವವರಿದ್ದಾರೆ.

56 ವರ್ಷದ Cassey ಇವರು ಒಂದು ಚಾಟ್ ಶೋ ಕಾರ್ಯಕ್ರಮವನ್ನು ನಡೆಸುತ್ತಾರೆ. ಅವರು ಅದರಲ್ಲಿ ರಿಲೇಶನ್ ಗಳ ಬಗ್ಗೆ ಸಲಹೆಗಳನ್ನು ಕೊಡುತ್ತಾರೆ.

ಅವರು ನಡೆಸಿ ಕೊಡುವ ಕಾರ್ಯಕ್ರಮದಲ್ಲಿ ಒಬ್ಬನು ಇವರಿಗೆ ಕೇಳಿದ, ಇಷ್ಟೆಲ್ಲವನ್ನು ನೀವೂ ಹೇಳುತ್ತೀರಿ, ನೀವೇ 10 ಬಾರಿ ಮದುವೆಯನ್ನಾಗಿದ್ದಿರಿ. ನಿಮಗೆ ಏನು ಅನಿಸುತ್ತೆ ಹೇಳಿ ಎಂದಾಗ Cassey ಅವರು ಈ ಪ್ರಶ್ನೆಗೆ ಹೀಗೆ ಉತ್ತರಿಸಿದರು, ನಾನು ಈ ಬಗ್ಗೆ ಕೆಲವು ಸಲ ನಗುತ್ತೇನೆ ಮತ್ತು ಇನ್ನು ಕೆಲವು ಸಲ ಅತ್ತಿದ್ದೇನೆ ಎನ್ನುತ್ತಾರೆ.

ಮುಂದೆ ಹೀಗೂ ಹೇಳುತ್ತಾರೆ, ನಾನು ವೈವಾಹಿಕ ಜೀವನ ನಡೆಸುತ್ತಿರುವಾಗ ನನ್ನ ಮನಸ್ಸಿಗೆ ಸಾಕೆನಿಸಿತು ಎಂದರೆ ಆಗ ನಾನು ನನ್ನ ಪತಿಗೆ ವಿಚ್ಛೇದನ ಯನ್ನು ಕೊಟ್ಟುಬಿಡುತ್ತೇನೆ. ಇದರಿಂದ ನನಗೆ ವಿಶೇಷವೇನು ವ್ಯತ್ಯಾಸವಾಗುವುದಿಲ್ಲ. ಯಾಕೆಂದ್ರೆ ಎಲ್ಲಿಯವರೆಗೆ ನನ್ನನ್ನು ಪ್ರೀತಿ ಮಾಡುವ ಪರ್ಫೆಕ್ಟ್ ಪತಿ ಸಿಗುವುದಿಲ್ಲವೋ ಅಲ್ಲಿಯವರೆಗೆ ಹೊಸ ಮದುವೆಗಳನ್ನು ಮಾಡಿಕೊಳ್ಳುತ್ತಲೇ ಹೋಗುತ್ತೇನೆ. ಹಾಗೆ ನೋಡಲಾಗಿ ಅಮೆರಿಕೆಯಲ್ಲಿ ಹಳೆಯದನ್ನು ಬಿಟ್ಟು ಹೊಸಬನ ಜೊತೆಗೆ ಕೂಡಿಕೊಳ್ಳುವುದು ತುಂಬಾ ಕಾಮನ್ ವಿಷಯವಾಗಿದೆ.

ಒಂದು ಪರ್ಫೆಕ್ಟ್ ಮ್ಯಾಚ್ ಅಪೇಕ್ಷೆ ಮಾಡುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಯೋಗ್ಯವಾದ ವ್ಯಕ್ತಿಗೆ ಮಾತ್ರ ತನ್ನ ಜೀವನದಲ್ಲಿ ಸ್ಥಾನವನ್ನು ಕೊಡಬೇಕು, ಇದರ ಬಗ್ಗೆ ಸ್ವಲ್ಪವೂ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ Cassey.