ರಾಹುಲ್ ಗಾಂಧಿ ಎಷ್ಟು ಕೋಟಿ ರೂಪಾಯಿಗಳ ಒಡೆಯರಿದ್ದಾರೆ? ಮತ್ತು ಕಳೆದ ಐದು ವರ್ಷಗಳಲ್ಲಿ ಆದ ಹೆಚ್ಚಳವೆಷ್ಟು?

ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ದೇಶದ ರಾಜಕಾರಣದಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸಿದ್ದಾರೆ. ಗಾಂಧಿ ಕುಟುಂಬದ ಕಾರಣದಿಂದ ಅನ್ನಿ ಅಥವಾ ಅವರ ವೈಯಕ್ತಿಕ ವಿಚಾರಗಳಿಂದ ಆಗಬಹುದು ದೇಶದ ದೊಡ್ಡ ನಾಯಕರ ಪಟ್ಟಿಯಲ್ಲಿ ತಮ್ಮನ್ನು ಕೂಡಿಸಿದ್ದಾರೆ. ಇವತ್ತು ಕೇರಳದ ವೈನಾಡ್ ಕ್ಷೇತ್ರದಿಂದ ಆರಿಸಿ ಬಂದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಹೆಸರಿನಲ್ಲಿದ್ದ ಸಂಪತ್ತು ಎಷ್ಟು ಎಂಬುದನ್ನು ತಿಳಿಯೋಣ.

ಕಳೆದ ವರ್ಷ ಕೇರಳದಿಂದ ಲೋಕಸಭೆಯ ಸಲುವಾಗಿ ನಾಮಪತ್ರ ಸಲ್ಲಿಸುವಾಗ ತಮ್ಮ ಒಟ್ಟು ಸಂಪತ್ತಿನ ವಿವರಣೆಯನ್ನು ಘೋಷಿಸಿದ್ದರು. ಅದರ ಪ್ರಕಾರ ಅವರ ಒಟ್ಟು ಸಂಪತ್ತು 15.88 ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿತ್ತು. 2014 ರ ವೇಳೆಯಲ್ಲಿ ರಾಹುಲ್ ಗಾಂಧಿ ಘೋಷಿಸಿದ ಸಂಪತ್ತು 9.4 ಕೋಟಿ ರೂಪಾಯಿಗಳಷ್ಟಿತ್ತು.

ಕಳೆದ ವರ್ಷ ಲೋಕಸಭೆಯ ಚುನಾವಣೆ ಸಮಯದಲ್ಲಿ ರಾಹುಲ್ ಗಾಂಧಿ 5 ಕೋಟಿ 80 ಲಕ್ಷ 58 ಸಾವಿರದ 799 ರೂಪಾಯಿಗಳ ನಗದು ಹಾಗೂ 10 ಕೋಟಿ 8 ಲಕ್ಷ 18 ಸಾವಿರದ 284 ರೂಪಾಯಿಗಳ ಸ್ಥಿರಾಸ್ತಿ ಹೊಂದಿದ್ದರು.

ಈ ರೀತಿ ರಾಹುಲ್ ಗಾಂಧಿಯವರ ಆಸ್ತಿ
ಕಳೆದ ವರ್ಷ ಒಟ್ಟು 15 ಕೋಟಿ 88 ಲಕ್ಷ 77 ಸಾವಿರದ 83 ರೂಪಾಯಿಗಳಷ್ಟಿತ್ತು. ಈಗ ಕಳೆದ ಒಂದು ವರ್ಷದಲ್ಲಿ ಆದ ಹೆಚ್ಚಳದ ಬಗ್ಗೆ ಮಾತ್ರ ಮಾಹಿತಿ ಲಭ್ಯವಿಲ್ಲ.