Articles

ಅಬ್ಬಾ! ಹಾವಿನ ಜೊತೆಗೆ ಮೊಲದ ಅಪರೂಪದ ಜಟಾಪಟಿ! ಈ ವೈರಲ್ ವಿಡಿಯೋದಲ್ಲಿ ನೋಡಿ ಕೊನೆಗೆ ಗೆದ್ದದ್ದು ಯಾರು?

ಹಾವು ಎಷ್ಟೊಂದು ಭಯಾನಕವಾದ ಸರಿಸೃಪವಿದೆ ಎಂಬುದು ಎಲ್ಲರಿಗೂ ಗೊತ್ತು, ಅಷ್ಟೇ ಏಕೆ ಇನ್ನಿತರ ಪ್ರಾಣಿಗಳಿಗೂ ಇದು ಗೊತ್ತು. ಹಾವಿನ ಜೊತೆಗೆ ಅನೇಕ ಪ್ರಾಣಿಗಳು ಹೋರಾಟ ಮಾಡಿದ್ದನ್ನು ಕೇಳಿದ್ದೇವೆ, ಆದರೆ ಶಾಂತವಾಗಿರುವ ಮತ್ತು ಜಗಳ, ಕದನದಿಂದ ದೂರವಿರುವ ಮೊಲದ ಜಟಾಪಟಿ ಕೇಳಿದ್ದೀರಾ? ಒಂದು ವೇಳೆ ಇಲ್ಲವಾದರೆ ಇಲ್ಲಿ ನಿಮಗಾಗಿ ವಿಡಿಯೋ ಒಂದನ್ನೇ ತಂದಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಇವೇ ಎರಡು ಪ್ರಾಣಿಗಳ ವಿಡಿಯೋ ಒಂದು ಸದ್ಯಕ್ಕೆ ಸುತ್ತಾಡುತ್ತಿದೆ.

ಈ ವಿಡಿಯೋದಲ್ಲಿ ಚೆಂದಾದ ಮತ್ತು ಶಾಂತಿಯುತವಾದ ಪ್ರಾಣಿ ಮೊಲ ಹಾವಿನ ಜೊತೆಗೆ ಹೋರಾಡುತ್ತಿದೆ ಎಂದರೆ ನಂಬಲಸಾಧ್ಯ. ಯಾವ ಕಾರಣದಿಂದ ಗೊತ್ತಿಲ್ಲ ಈ ಎರಡು ಪ್ರಾಣಿಗಳು ಜಗಳ ಮಾತ್ರ ಜೋರಾಗಿಯೇ ಕಾಯ್ದಿವೆ. ಇದನ್ನು ನೋಡಿದ ನಂತರ ನೀವು ಆಶ್ಚರ್ಯ ವ್ಯಕ್ತ ಮಾಡುವಿರಿ.

ಇವೆರಡು ಪ್ರಾಣಿಗಳಲ್ಲಿ ಮೊಲ ಸ್ವಲ್ಪ ಚಿಕ್ಕದಾಗಿದ್ದು ಹಾವು ಮಾತ್ರ ದೊಡ್ಡದಾಗಿಯೇ ಇದೆ. ಮೊಲದ ಹೋರಾಟದ ಮುಂದೆ ಹಾವು ಮಾತ್ರ ಸ್ವಲ್ಪ ಸಪ್ಪೆಯಾಗಿದ್ದು ಕಂಡು ಬರುತ್ತಿದೆ. ಮೊಲ ಇಲ್ಲಿ ಅಗ್ರೆಸಿವ್ ಆಗಿ ಕಂಡು ಬರುತ್ತಿದ್ದು ಹಾವನ್ನು ಬಾಯಿಯಲ್ಲಿ ಹಿಡಿದು ಬಿಸಾಡಿ ಒಗೆಯುವ ಪ್ರಯತ್ನ ಮಾಡುತ್ತಿದೆ. ಮತ್ತು ಹಾವು ಮೊಲದಿಂದ ರಕ್ಷಿಸಿಕೊಳ್ಳಲು ಹೇಗಾದರೂ ಮಾಡಿ ಅತ್ತಿತ್ತ ನುಸುಳಿ ಹೋಗುವ ಯತ್ನ ಮಾಡುತ್ತಿದೆ. ಈ ರೀತಿಯ ಮೊಲ ಮತ್ತು ಹಾವಿನ ಜಟಾಪಟಿ ಮೊದಲ ಸಲವೇ ನೋಡಿರಬೇಕು. ಅದರಲ್ಲಿ ಮೊಲ ಮೇಲುಗೈ ಸಾಧಿಸುತ್ತಿದೆ.

ವಿಡಿಯೋ ನೋಡಿ

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ predator.unity ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಎರಡು ಪ್ರಾಣಿಗಳ ಕದನ ನೋಡಿದಾಗ ನೋಡುಗರ ಮೈ ನವಿರೇಳುವುದು. ಈ ವೀಡಿಯೋವನ್ನು ಇಲ್ಲಿಯವರೆಗೆ 35 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ಅನೇಕ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಮಾಡಿದ್ದಾರೆ. ಒಬ್ಬನು ಈ ಮೊಲಕ್ಕೆ ‘ಕಿಲ್ಲರ್ ರ್ಯಾಬಿಟ್’ ಎಂದು ಹೆಸರಿಸಿದರೆ, ಇನ್ನೊಬ್ಬ ಮೊಲದ ಈ ಜಗಳವನ್ನು ನೋಡಿದಾಗ ನನ್ನ ಕಣ್ಣುಗಳ ಮೇಲೆ ವಿಶ್ವಾಸವೇ ಕೊಡುತ್ತಿಲ್ಲ ಎಂದಿದ್ದಾನೆ.

Leave a Comment

Your email address will not be published. Required fields are marked *