ರೂಲ್ಸ್ ಆಫ್ ರೈಲ್ವೆ; ಬೋರ್ಡಿಂಗ್ ಸ್ಟೇಷನ್ ಮಿಸ್ ಆದ್ಮೇಲೆ ನೀವು ಕಾಯ್ದಿರಿಸಿದ ಸೀಟ್ ಎಲ್ಲಿಯವರೆಗೆ ನಿಮಗಾಗಿ ಕಾದಿರುತ್ತದೆ?

ಪ್ರವಾಸ ಮಾಡುವಾಗ ಆಕಸ್ಮಿಕವಾಗಿ ಅನೇಕ ಸಮಸ್ಯೆಗಳು ಪ್ರವಾಸಿಗರಿಗೆ ಉದ್ಭವಿಸುತ್ತವೆ. ಅದರಲ್ಲೂ ರೈಲಿನಿಂದ ಪ್ರವಾಸ ಮಾಡುವವರಿಗೆ ರೈಲಿನ ಅನೇಕ ನಿಯಮಗಳು ಗೊತ್ತಿರುವುದಿಲ್ಲ, ಅಥವಾ ಸಮಯ ಸಮಯಕ್ಕೆ ಅವುಗಳಲ್ಲಿ ಬದಲಾವಣೆಯಾಗಿರುವುದು ಪ್ರವಾಸಿಗರ ಗಮನಕ್ಕೆ ಬಂದಿರುವುದಿಲ್ಲ. ಹೀಗಾಗಿ ಪ್ರವಾಸಿಗರು ಪ್ರವಾಸದ ಸಂದರ್ಭದಲ್ಲಿ ಅನೇಕ ಸಮಸ್ಯೆಗಳಿಗೆ ಫೇಸ್ ಮಾಡಬೇಕಾಗುತ್ತದೆ. ಇನ್ನು ಫ್ಯಾಮಿಲಿ ಜೊತೆಗೆ ಏನಾದರೂ ಪ್ರವಾಸ ಮಾಡುತ್ತಿದ್ದರೆ ಆ ತಲೆನೋವು ಬೇರೆಯೇ ಆಗಿರುತ್ತದೆ.

ರೈಲು-ಪ್ರವಾಸ ಮಾಡುವಾಗ ಅನೇಕ ಕಾರಣಗಳಿಂದ ರೈಲ್ವೆ ಸ್ಟೇಷನ್ ರೀಚ್ ಆಗಲು ಅಡ್ಡಿ ಉಂಟಾಗುತ್ತದೆ. ಅಥವಾ ಬೇರೆ ಯಾವುದಾದರೂ ಕೆಲಸಗಳ ಮುಖಾಂತರ ನಮ್ಮ ಬೋರ್ಡಿಂಗ್ ಸ್ಟೇಷನ್ ಬದಲಾಗಿ ಬೇರೆ ಸ್ಟೇಷನ್ ಗಳಿಗೆ ಹತ್ತುವ ಪ್ರಸಂಗ ಬರುತ್ತದೆ. ಆ ಸಂದರ್ಭದಲ್ಲಿ TTE ಇಲ್ಲವೇ ಟಿಕೆಟ್ ಕಂಡಕ್ಟರ್ ನಾವು ಕಾಯ್ದಿರಿಸಿದ ಸೀಟುಗಳನ್ನು ಇನ್ನೊಬ್ಬರಿಗೆ ನೀಡಿರುತ್ತಾನೆ. ಆಗ ಟಿಟಿ ಮತ್ತು ಪ್ರವಾಸಿಗರ ನಡುವೆ ವಾದ-ವಿವಾದಗಳು ಹುಟ್ಟಿಕೊಳ್ಳುತ್ತವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರೈಲ್ವೇ ರೂಲ್ ಏನು ಹೇಳುತ್ತದೆ ನೋಡಿ…

ಯಾವುದೇ ಕಾರಣಗಳಿಂದಾಗಿ ನಾವು ಪ್ರವಾಸ ಮಾಡಬೇಕಾದ ಟ್ರೈನ್ ಮಿಸ್ ಆಗಿದ್ದರೆ, ಮುಂದಿನ ಎರಡು ಸ್ಟೇಷನ್ ಗಳವರೆಗೆ ಟಿಟಿ ನಾವು ಕಾಯ್ದಿರಿಸಿದ ಸೀಟ್ ಬೇರೊಬ್ಬರಿಗೆ ಅಲ್ಲೊಟ್ (allot) ಮಾಡಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ಎರಡು ಸ್ಟೇಷನ್ ಗಳವರೆಗೆ ಟ್ರೈನ್ ಹಿಡಿಯುವ ಅವಕಾಶ ಪ್ರವಾಸಿಗರಿಗೆ ಇರುತ್ತದೆ. ಎರಡು ಸ್ಟೇಷನ್ ಗಳ ನಂತರ ಟಿಟಿ RAC ಟಿಕೆಟ್ ಇರುವ ಪ್ರವಾಸಿಗರಿಗೆ ಸೀಟ್ ಹಂಚಿಕೊಡುತ್ತಾನೆ.