ಲಾಟರಿ ಗೆದ್ದ ನಂತರ ಈಕೆ ಅಂಗಡಿ ಮಾಲಿಕನಿಗೆ… ಒಂದೇ ದಿನದಲ್ಲಿ 6 ಮಿಲಿಯನ್ ಗಿಂತ ಹೆಚ್ಚು ವ್ಯೂವ್ಜ ಆದ ವೈರಲ್ ವಿಡಿಯೋ!

ನಿಮಗೆ ಒಂದು ವೇಳೆ ಲಾಟರಿ ಹತ್ತಿದರೆ..? ಎಂಬ ಪ್ರಶ್ನೆ ಕೇಳಿದರೆ, ನಿಮ್ಮ ಮುಂದೆ ಒಂದು ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ಲಾಟರಿ ಮುಖಾಂತರ ದೊರೆತ ಹಣದಿಂದ ಕೆಲವರು ಮನೆ ಖರೀದಿಸಿದರೆ, ಇನ್ನು ಕೆಲವರು ತೋಟ ಖರೀದಿಸಬಹುದು, ಇನ್ನು ಕೆಲವರು ವಿದೇಶ ಪ್ರವಾಸ ಕೈಗೊಳ್ಳಬಹುದು, ಇನ್ನು ಕೆಲವರು ಇಷ್ಟದ ಒಡವೆ, ವಸ್ತುಗಳನ್ನು ಖರೀದಿಸಬಹುದು ಸರಿ ಅಲ್ವಾ? ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮೇಲಿನ ವಿಚಾರಗಳೆಲ್ಲ ಬುಡಮೇಲಾಗಿದ್ದು ಕಂಡುಬರುತ್ತದೆ. ಯಾಕೆಂದರೆ ಲಾಟರಿಯಿಂದ ಗೆದ್ದ ಹಣವನ್ನು 86 ವರ್ಷದ ಮಹಿಳೆಯೊಬ್ಬಳು ಸ್ವಂತಕ್ಕಾಗಿ ಉಪಯೋಗಿಸದೆ ಯಾವ ಅಂಗಡಿಯಿಂದ ಲಾಟರಿ ಖರೀದಿಸಿದ್ದಳು ಅದೇ ಅಂಗಡಿಯ ಮಾಲೀಕನಿಗೆ ಗೆದ್ದ ಹಣದಲ್ಲಿ ಅರ್ಧ ಹಣವನ್ನು ನೀಡಿದ್ದಾಳೆ. ಅಜ್ಜಿಯು ತೋರಿದ ಉದಾರತೆಯಿಂದಾಗಿ ಲಾಟರಿಯ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯ ನೇಟಿಜನ್ಸ್ ಗಳ ಮನಸ್ಸನ್ನು ಸಹ ಗೆದ್ದಿದ್ದಾಳೆ.

ಈ ಸುದ್ದಿಯು ಕ್ಯಾಲಿಫೋರ್ನಿಯಾದಿಂದ ವರದಿಯಾಗಿದೆ. ಕ್ಯಾಲಿಫೋರ್ನಿಯಾದಲ್ಲಿಯ ರಾಚೋ ಮಿರಾಜ್ ನಲ್ಲಿ ಮೇರಿಯನ್ ಫಾರೆಸ್ಟ್ ಹೆಸರಿನ 86 ವರ್ಷದ ಮಹಿಳೆಯೊಬ್ಬರು ವಾಸಿಸುತ್ತಾರೆ. ಪ್ರತಿವಾರ ಅವರು ಒಂದು ಮಿನಿ ಮಾರ್ಟ್ ನಲ್ಲಿ ಹೋಗಿ ತಮ್ಮ ಅದೃಷ್ಟವನ್ನು ಓರೆಗೆ ಹಚ್ಚಲು ಪ್ರತಿ ಸಲ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಪ್ರತಿವಾರ ತಮ್ಮ ಸಲುವಾಗಿ 5 ಲೋಟೋ ಲಾಟರಿ ಟಿಕೆಟ್ ಖರೀದಿ ಮಾಡುತ್ತಿದ್ದರು. ಆದರೆ ಕಳೆದ ವಾರ ಮಾತ್ರ ಅವರ ಅದೃಷ್ಟ ಭರ್ಜರಿಯಾಗಿ ಖುಲಾಯಿಸಿತ್ತು. ಏಕೆಂದರೆ ಲಾಟರಿ ಹಣ ಅವರ ಅದೃಷ್ಟ ತೆರೆಸಿತ್ತು. ಅಂಗಡಿಯ ಮಾಲೀಕ ಅಜ್ಜಿಗೆ ಲಾಟರಿಯನ್ನು ಖರೀದಿ ಮಾಡಲು ಪ್ರೇರೇಪಿಸಿದ. ಅವರ ಮಾತುಗಳನ್ನು ಕೇಳಿಯೇ ಅಜ್ಜಿಯು ಕೆಲವು ಲಾಟರಿಗಳನ್ನು ಖರೀದಿಸಿದ್ದಳು. ಪ್ರತಿ ಸಲದಂತೆ ಈ ಬಾರಿಯೂ ಬರಿಗೈಯಿಂದ ಹೋಗಬೇಕಾಗುತ್ತದೆಯೇನೋ ಎಂಬ ಶಂಕೆ ಅಜ್ಜಿಯ ಮನದಲ್ಲಿ ಮೂಡಿತ್ತು. ಅಂಗಡಿಯಿಂದ ಹೋಗುವಾಗ ಅಜ್ಜಿಯು ಈ ಬಾರಿ ನನಗೆ ಲಾಟರಿ ಹತ್ತಿದರೆ ನಿನ್ನ ಕಾಳಜಿ ಅವಶ್ಯವಾಗಿ ತೆಗೆದುಕೊಳ್ಳುತ್ತೇನೆ ಎಂದು ಅಜ್ಜಿಯು ಅಂಗಡಿ ಮಾಲಿಕನಿಗೆ ಭಾಷೆ ನೀಡಿದ್ದಳು.

ಮೇಲಿನವನು ಯಾವಾಗ ನೀಡಲು ಶುರು ಮಾಡುತ್ತಾನೆ ಆಗ ತುಂಬಿ ತುಂಬಿ ಚೆಲ್ಲುತ್ತದೆ. ಹಾಗೆಯೇ ಅಜ್ಜಿಯ ಜೊತೆಗೆ ನಡೆಯಿತು. ಒಂದೇ ಹೊಡೆತದಲ್ಲಿ ಈ ಅಜ್ಜಿಗೆ 3000 ಡಾಲರ್ ಲಾಟರಿ ತಾಗಿತ್ತು. ಲಾಟರಿ ತಾಗಿದನಂತರ ಬಲೂನ್ ಹಾಗೂ ಪಾಕಿಟ್ ತೆಗೆದುಕೊಂಡು ಅಜ್ಜಿ ಅಂಗಡಿಯ ಮಾಲೀಕನ ಹತ್ತಿರ ಬಂದು ತಾವು ನುಡಿದ ಮಾತನ್ನು ನಡೆಸಿಕೊಟ್ಟರು.

ಅಜ್ಜಿಯ ಈ ಉದಾರ ಮನೋಭಾವದ ಈ ಕೃತಿಯನ್ನು ನೋಡಿ ಅಂಗಡಿಯಲ್ಲಿದ್ದ ಇತರ ಕೆಲಸಗಾರರು ಮತ್ತು ಜನರು ಚಪ್ಪಾಳೆ ತಟ್ಟಿ ಅಜ್ಜಿಯ ಈ ಉದಾರತೆಗೆ ಶ್ಲಾಘಿಸಿದ್ದಾರೆ. ಇದೇ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೀಡಿಯೋ ನೋಡಿ

ಈ ಸುಂದರವಾದ ವಿಡಿಯೋವನ್ನು goodnews_movement ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಜನರಿಗೆ ತುಂಬಾ ಇಷ್ಟವಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಆರು ಮಿಲಿಯನ್ ಗಿಂತಲೂ ಹೆಚ್ಚಿನ ಜನರು ವೀಕ್ಷಿಸಿದ್ದಾರೆ. ಮೂರು ಲಕ್ಷಕ್ಕೂ ಮೇಲ್ಪಟ್ಟು ನೇಟಿಜನ್ಸ್ ಗಳು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ತಮ್ಮ ಪ್ರತಿಕ್ರಿಯೆಗಳನ್ನು ಸಹಿತ ನೀಡಿದ್ದಾರೆ.