ವಂಶದ ಕುಡಿಯೇ ಮಾಡಿತು ತಾಯಿ, ತಂದೆ, ಸಹೋದರಿ ಮತ್ತು ಅಜ್ಜಿಯ ಅಂತ್ಯ, ಕಾರಣ ಕೇಳಿ ಪೊಲೀಸರಿಗೂ ಆಯಿತು ದಿಗ್ಭ್ರಮೆ!

ಹರಿಯಾಣದ ರೋಹ್ತಕ್ ನಿಂದ ಮೈನಡುಗಿಸುವ ಘಟನೆಯೊಂದು ವರದಿಯಾಗಿದೆ. ಇಲ್ಲಿಯ ಕುಟುಂಬದಲ್ಲಿಯ ಒಬ್ಬನೇ ಒಬ್ಬ ವಂಶದ ಕುಡಿಯು ತನ್ನದೆಯಾದ ತಾಯಿ-ತಂದೆ, ಸಹೋದರಿ ಮತ್ತು ಅಜ್ಜಿಯನ್ನು ಮುಗಿಸಿರುವದು ಸ್ಪಷ್ಟವಾಗಿದೆ. ಅನೇಕ ದಿವಸಗಳವರೆಗೆ ಪೊಲೀಸರು ಈ ಕೇಸಿನ ತನಿಖೆ ಮಾಡುತ್ತಿದ್ದರು. ಕೊನೆಗೆ ಈ ಕಾಂಡದ ಮುಖ್ಯ ಸೂತ್ರದಾರ ಮನೆಯಲ್ಲಿಯ ವ್ಯಕ್ತಿಯೇ ಇದ್ದಾನೆ ಎಂಬುದು ಪೊಲೀಸರು ಕಂಡು ಹಿಡಿದರು.

ಇಂತಹ ಹೆಜ್ಜೆಯಿಡಲು ಕಾರಣವೇನು ನೋಡಿ…

ರೋಹ್ತಕ್ ಊರಿನ ಮನೆಯಲ್ಲಿ ಪ್ರದೀಪ್ ಮಲಿಕ್, ಅವರ ಪತ್ನಿ, ಮಗಳು ನೇಹಾ, ತಾಯಿ ಮತ್ತು ಮಗ ಅಭಿಷೇಕ್ ಇರುತ್ತಿದ್ದರು. ಪ್ರದೀಪ್ ಮಲಿಕ್ ಅವರು ಮನೆಯ ಉತ್ತರಾಧಿಕಾರಿಯೆಂದು ಮಗಳಾದ ನೇಹಾಳ ಹೆಸರನ್ನು ಸೇರಿಸಿದ್ದರು. ಇದು ಮಗನಾದ ಅಭಿಷೇಕನಿಗೆ ಒಪ್ಪಿಗೆ ಇರಲಿಲ್ಲ. ಮತ್ತು ಮನೆ ತನ್ನ ಹೆಸರಿಗೆ ಇರಬೇಕೆಂದು ಆತ ಆಗ್ರಹಿಸುತ್ತಿದ್ದ. ಇದರ ಹೊರತಾಗಿ ಚಿಕ್ಕಪುಟ್ಟ ಕಾರಣಗಳಿಗಾಗಿ ಮನೆಯವರೊಂದಿಗೆ ಅಭಿಷೇಕ ಜಗಳಾಡುತ್ತಿದ್ದ. ಒಂದು ದಿನ ಅಭಿಷೇಕ್ ಮನೆಯಲ್ಲಿ ಇಲ್ಲದಿದ್ದಾಗ ಕೆಲವು ಹಲ್ಲೆಕೋರರು ಮನೆಯಲ್ಲಿ ಹೊಕ್ಕು ಮನೆಯಲ್ಲಿದ್ದ ಎಲ್ಲರ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿ ಓಡಿ ಹೋದರು.

ಈ ಘಟನೆಯಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟರು. ಮಾತ್ರ ನೇಹಾಳು ಗಂಭೀರವಾಗಿ ಗಾಯಗೊಂಡಿದ್ದಳು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಉಪಚಾರದ ಮಧ್ಯದಲ್ಲಿ ಆಕೆ ಅಸುನೀಗಿದಳು. ನಂತರ ಪೊಲೀಸರು ಈ ಘಟನೆಯ ತನಿಖೆಯನ್ನು ಕೈಗೆತ್ತಿಕೊಂಡರು. ಒಂದೊಂದಾಗಿ ಸಾಕ್ಷಾಧಾರಗಳು ಪೊಲೀಸರ ಕೈಗೆ ಸಿಗಲಾರಂಭಿಸಿದವು.

ಮೊದಲು ಈ ಷಡ್ಯಂತ್ರದ ಯಾವುದೇ ಕ್ಲೂ ಸಿಗದೆ ಇದ್ದಾಗ ಪೊಲೀಸರಿಗೆ ಅಭಿಷೇಕನ ಮೇಲೆ ಸಂಶಯ ನಿರ್ಮಾಣವಾಯಿತು. ಮನೆಯ ಕೀಲಿಕೈ ಹೊರಗೆ ಹೇಗೆ ಹೋಯಿತು? ಎಂಬ ಪ್ರಶ್ನೆಯ ಉತ್ತರ ಹುಡುಕುವಾಗ ಪೊಲೀಸರಿಗೆ ಅಭಿಷೇಕನ ಮೇಲೆ ಸಂಶಯ ನಿರ್ಮಾಣವಾಯಿತು. ಮೊದಮೊದಲು ಅಭಿಷೇಕ ಪೊಲೀಸರ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದಿದ್ದಾಗ ನಂತರ ಪೊಲೀಸರು ತಮ್ಮ ಸ್ಟೈಲ್ನಲ್ಲಿ ಕೇಳಿದರು. ಆಗ ಅಭಿಷೇಕ್ ತನ್ನ ತಪ್ಪನ್ನು ಒಪ್ಪಿಕೊಂಡನು. ಈ ಘಟನೆಗೆ ಅಭಿಷೇಕನ ಮಿತ್ರರೇ ಕಾರಣವಾಗಿದ್ದರು. ಅವರ ಕಡೆಗೆ ಮನೆಯ ಕೀಲಿ ಕೈ ಗಳು ಸಿಕ್ಕವು. ಪೊಲೀಸರು ಅಭಿಷೇಕ್ ನನ್ನು ಅರೆಸ್ಟ್ ಮಾಡಿ ಆತನ ಮೇಲೆ ಕೇಸು ದಾಖಲಿಸಿದ್ದಾರೆ. ಆಸ್ತಿಯ ಆಸೆಗೆ ಬಿದ್ದು 20 ವರ್ಷದ ಮಗ ಅಭಿಷೇಕ್ ತನ್ನದೇ ಕುಟುಂಬದ ಸರ್ವನಾಶಕ್ಕೆ ಕಾರಣವಾದನು.