ವಧುವಿನ ಡಾನ್ಸ್ ನೋಡಲು ಜಮಾಯಿಸಿದರು ಊರ ಮಹಿಳೆಯರು! ಸುಮ್ಮನೆ ಕುಳಿತ ವರ ತೆಗೆದುಕೊಂಡ ನಂತರ ಪಿಕ್ ಅಪ್!
ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುವ ವಧು-ವರರ ವಿಶೇಷ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ಅದರಲ್ಲೂ ಈ ವಿಡಿಯೋಗಳು ಡಾನ್ಸ್ ದಿಂದ ಕೂಡಿದರೆ ಮತ್ತಷ್ಟು ನೋಡಲು ಇಂಟರೆಸ್ಟ್ ಬರುತ್ತದೆ.
ಸದ್ಯ ವಧು-ವರರ ಡಾನ್ಸಿನ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮದುವೆಯಾದ ನಂತರ ದೃಶ್ಯವಿದೆ. ಇಲ್ಲಿ ಊರಿನ ಎಲ್ಲಾ ಮಹಿಳೆಯರು ಮನೆಯ ಮುಂದೆ ನೂತನ ಜೋಡಿಯ ಡಾನ್ಸ್ ನೋಡಲು ಜಮಾಯಿಸಿದ್ದಾರೆ. ಅವರ ಮುಂದೆ ವಧು ತನ್ನ ಗಂಡನಿಗಾಗಿ ಡಾನ್ಸ್ ಪ್ರೆಸೆಂಟ್ ಮಾಡುತ್ತಿದ್ದಾಳೆ. ಈ ಸಂದರ್ಭದಲ್ಲಿ ತನ್ನ ನೂತನ ಸಂಗಡಿಗನಿಗೆ ಅಥವಾ ಗಂಡನಿಗೆ ಡಾನ್ಸ್ ರೂಪದಲ್ಲಿ ಅನೇಕ ರೀತಿಯಲ್ಲಿ ಸನ್ನೆ ಮಾಡುತ್ತಿರುತ್ತಾಳೆ ಮತ್ತು ತನ್ನ ಬರ ಸೆಳೆಯುತ್ತಿರುತ್ತಾಳೆ. ಸ್ವಲ್ಪ ಸಮಯದವರೆಗೆ ಕಾದು ಕಾದು ಕೊನೆಗೆ ವರನು ಸಹ ಮೈಜಾಡಿಸಿ ಕುಣಿತಕ್ಕೆ ಅಣಿಯಾಗುತ್ತಾನೆ. ಅದಕ್ಕೂ ಮೊದಲು ಊರಿನ ಮಹಿಳೆಯರ ಮುಂದೆ ಸುಮ್ಮನೆ ಕುಳಿತು ಪತ್ನಿಯ ಡಾನ್ಸ್ ನೋಡುತ್ತಿರುತ್ತಾನೆ. ಆದರೆ ಪತ್ನಿ ಮೇಲಿಂದ ಚಾಲೆಂಜ್ ನೀಡಿದಾಗ ವರ ತಲೆಕೆಟ್ಟು ಎದ್ದು ಹೆಂಡತಿಯ ಜೊತೆಗೆ ಕುಣಿಯುತ್ತಾ ಕುಣಿಯುತ್ತಾ ಕೊನೆಗೆ ಆಕೆಯನ್ನೇ ಹೆಗಲ ಮೇಲೆ ಏರಿಸಿಕೊಳ್ಳುತ್ತಾನೆ.
ನೀವು ನೋಡಿ ಈ ದಂಪತಿಗಳ ಸಖತ್ ವಿಡಿಯೋ…
ಯೂಸರ್ಸ್ ಗಳು ಮಾತ್ರ ಈ ವೀಡಿಯೋವನ್ನು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಪ್ರಸ್ತುತ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಸೌರಭ್ ಯಾದವ್ ಕರಹಲ್ ಶೇರ್ ಮಾಡಿದ್ದಾನೆ. ಈ ವೀಡಿಯೋವನ್ನು ಇಲ್ಲಿಯವರೆಗೆ 6.2 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ.