Articles

ಹೊಟೆಲ್ ರೂಮ್ ನಲ್ಲಿ, ಟ್ರಯಲ್ ರೂಮ್ ನಲ್ಲಿ ಹೈಡೆನ್ ಕ್ಯಾಮೆರಾ ಇದೆಯಾ ಎಂದು ತಿಳಿದುಕೊಳ್ಳುವುದು ಹೇಗೆ?

ಇತ್ತೀಚಿನ ದಿನಗಳಲ್ಲಿ ಹೋಟೆಲ್‌ ರೂಮ್ ಗಳಲ್ಲಿ, ಸ್ನಾನಗೃಹಗಳಲ್ಲಿ, ಟ್ರಯಲ್ ರೂಮ್ ಗಳಲ್ಲಿ ಹೈಡನ್ ಕ್ಯಾಮೆರಾ ಅಡಗಿಸಿಡುವ ಘಟನೆಗಳು ಹೆಚ್ಚಾಗಿವೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸಹ ಎಲ್ಲೋ ಹೊರಗೆ ಹೋದಾಗ ನೀವು ಉಳಿದುಕೊಳ್ಳುವ ಹೋಟೆಲ್‌ನ ಕೋಣೆಯನ್ನು ಚೆನ್ನಾಗಿ ನೋಡಿ, ನಿಮ್ಮ ಗೌಪ್ಯತೆಗೆ ದಕ್ಕೆ ತರುವ ಯಾವುದೇ ಗುಪ್ತ ಕ್ಯಾಮೆರಾ ಅಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಕ್ಯಾಮೆರಾಗಳನ್ನು ಕೋಣೆಯಲ್ಲಿ ಎಷ್ಟು ನೀಟಾಗಿ ಮರೆಮಾಡಲಾಗುತ್ತದೆಯೆಂದರೆ, ಸಾಮಾನ್ಯ ಮನುಷ್ಯನಿಗೆ ಅವುಗಳನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಆದರೆ ಚಿಂತಿಸಬೇಡಿ, ಇಂದು ನಾವು ಈ ಸಮಸ್ಯೆಯನ್ನು ನಿಮಗಾಗಿ ಸುಲಭಗೊಳಿಸುತ್ತಿದ್ದೇವೆ. ಕೆಲವು ಸರಳ ಉಪಾಯಗಳ ಮೂಲಕ ಕೋಣೆಯಲ್ಲಿ ಕ್ಯಾಮೆರಾ ಅಡಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು.

1 ಕೆಂಪು ದೀಪವು ಉರಿಯುತ್ತಿಲ್ಲ ಎಂದು ಪರಿಶೀಲಿಸಿ : ನೀವು ಕೋಣೆಯಲ್ಲಿ ಹೋದ ಮೇಲೆ ಕಿಟಕಿ ಬಾಗಿಲು ಹಾಕಿ, ಪರದೆ ಎಳೆದು, ಎಲ್ಲಾ ದೀಪಗಳನ್ನು ಆಫ್ ಮಾಡಿ ಕತ್ತಲಾದ ಮೇಲೆ ಯಾವುದೇ ಕೆಂಪು ದೀಪ ಅಥವಾ ಯಾವುದೇ ಹಸಿರು ಬೆಳಕು ಎಲ್ಲಾದರೂ ಇದೆಯೇ ಎಂದು ಇಡೀ ಕೊಠಡಿಯನ್ನು ಸರಿಯಾಗಿ ಪರಿಶೀಲಿಸಿ ನೋಡಿ.

2 ಕ್ಯಾಮೆರಾ ಬಾಗಿಲಿನ ಹ್ಯಾಂಡಲ್ ಅಥವಾ ಹುಕ್‌ ನಲ್ಲಿರಬಹುದು : ಟ್ರಯಲ್ ರೂಮ್ ನಲ್ಲಿ ಕೋಣೆಯ ಬಾಗಿಲಿನ ಕೊಕ್ಕೆ ಅಥವಾ ಹ್ಯಾಂಡಲ್‌ ನಲ್ಲಿ ಯಾವುದೇ ಕ್ಯಾಮೆರಾ ಅಡಗಿಲ್ಲ ಎಂದು ಖಚಿತಪಡಿಸಿಕೊಳ್ಳಿ.
3 ಕೋಣೆಯಲ್ಲಿ ಯಾವುದೇ ಶಬ್ದ ಬರುತ್ತಿದ್ದರೆ ಎಚ್ಚರಿಕೆಯಿಂದ ಆಲಿಸಿ, ಏಕೆಂದರೆ ಹೈಡನ್ ಕ್ಯಾಮೆರಾದಲ್ಲಿ ಕೆಲವು ಮೋಶನ್ ಸೆನ್ಸೆಟಿವ್ ಆಗಿದ್ದು, ಸ್ವಯಂಚಾಲಿತವಾಗಿ ಆನ್ ಆಗುತ್ತವೆ

4 ಜನರು ಹೆಚ್ಚಾಗಿ ಶಾಪಿಂಗ್ ಸಮಯದಲ್ಲಿ ಟ್ರಯಲ್ ರೂಮ್ ಅಥವಾ ಚೇಂಜಿಂಗ್ ರೂಮ್ ಅನ್ನು ಬಳಸುತ್ತಾರೆ, ಇಲ್ಲಿ ಕ್ಯಾಮೆರಾವನ್ನು ಮರೆಮಾಡಬಹುದು, ಆದ್ದರಿಂದ ನೀವು ಕೋಣೆಗೆ ಹೋದಾಗಲೆಲ್ಲಾ, ಮೊದಲನೆಯದಾಗಿ ಮುಂಭಾಗದ ಗಾಜು ಮತ್ತು ಮೂಲೆಗಳ ಬಗ್ಗೆ ಜಾಗರೂಕರಾಗಿರುವುದು ಉತ್ತಮ.

5 ಹಿಡನ್ ಕ್ಯಾಮ್ ಡಿಟೆಕ್ಟರ್ ಬಳಸಿ : ಹಿಡನ್ ಕ್ಯಾಮ್ ಡಿಟೆಕ್ಟರ್ ತುಂಬಾ ಉಪಯುಕ್ತವಾಗಿದೆ, ಏಕೆಂದರೆ ಈ ಡಿಟೆಕ್ಟರ್‌ಗಳು ಎಲ್ಲಿಯಾದರೂ ಗುಪ್ತ ಕ್ಯಾಮೆರಾವನ್ನು ಕಂಡುಹಿಡಿಯುತ್ತವೆ.
6 ನೀವು ಸ್ಮಾರ್ಟ್‌ಫೋನ್‌ನೊಂದಿಗೆ ಸಹ ತಿಳಿದುಕೊಳ್ಳಬಹುದು : ಗುಪ್ತ ಕ್ಯಾಮೆರಾವನ್ನು ಕಂಡುಹಿಡಿಯಲು ನಿಮ್ಮ ಸ್ಮಾರ್ಟ್‌ಫೋನ್ ಸಹ ಸಹಾಯ ಮಾಡುತ್ತದೆ. ಅದರಲ್ಲಿ, ಬಾಡಿಗಾರ್ಡ್ ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕೋಣೆಯಲ್ಲಿ ಆನ್ ಮಾಡಿದ ತಕ್ಷಣ, ಕೆಂಪು ಬಣ್ಣದ ಗುರುತುಗಳು ಮಿಟುಕಿಸಲು ಪ್ರಾರಂಭಿಸಿದರೆ, ಕೋಣೆಯಲ್ಲಿ ಕ್ಯಾಮೆರಾ ಮರೆಮಾಡಲಾಗಿದೆ ಎಂದು ಅರ್ಥಮಾಡಿಕೊಳ್ಳಿ.

7 ಮೊಬೈಲ್ ಕ್ಯಾಮೆರಾ ನೆಟ್‌ ವರ್ಕ್ ಕಣ್ಮರೆಯಾಗುತ್ತದೆ : ನಿಮ್ಮ ಮೊಬೈಲ್ ಕ್ಯಾಮೆರಾ ನೆಟ್‌ ವರ್ಕ್ ಟ್ರಯಲ್ ರೂಮ್ ಅಥವಾ ಕೋಣೆಗೆ ಹೋದರೆ ಬಂದ್ ಆದರೆ ಅಥವಾ ಕರೆಗಳು ಬರದಿದ್ದರೆ – ಹೋಗದಿದ್ದರೆ ಕ್ಯಾಮೆರಾವನ್ನು ಅಲ್ಲಿ ಮರೆಮಾಡಿರಬಹುದು ಎಂದು ಅರ್ಥಮಾಡಿಕೊಳ್ಳಿ. ಸರಿಯಾಗಿ ಪರಿಶೀಲಿಸಿ.

8 ಕೋಣೆಯ ಬಾಗಿಲಿನ ಗಮನ ಕೊಡಿ : ಕೋಣೆಯ ಬಾಗಿಲಲ್ಲಿ ಕೆಳಭಾಗದಲ್ಲಿ ಸ್ವಲ್ಪ ಜಾಗವಿದ್ದರೆ, ಯಾರಾದರೂ ವಿಶಿಷ್ಟ ಡಿವೈಸ್ ಬಳಸಿ ಕೆಳಗಿನಿಂದ ನಿಮ್ಮ ಫೋಟೋ ಅಥವಾ ವೀಡಿಯೊ ರೆಕಾರ್ಡಿಂಗ್ ಮಾಡಲಾಗಬಹುದು, ಆ ಬಗ್ಗೆ ಎಚ್ಚರಿಕೆವಹಿಸಿ.

ನೆನಪಿರಲಿ : ಒಂದು ಸಲ ನಿಮ್ಮ ಖಾಸಗಿ ಫೋಟೊ ವಿಡಿಯೊ ದುಷ್ಕರ್ಮಿಗಳ ಕೈಗೆ ಸಿಕ್ಕು ಅಂತರ್ಜಾಲ ತಲುಪಿದರೆ ಪೊಲೀಸರು ಕೂಡ ಅವುಗಳನ್ನು ತಗೆಸುವುದು ಕಷ್ಟಸಾಧ್ಯವಾಗಬಹುದು. ಹೀಗಾಗಿ ಮುನ್ನೆಚ್ಚರಿಕೆ ಮುಖ್ಯ.
-Team Infotrend

Leave a Comment

Your email address will not be published. Required fields are marked *