ವಾಯು ಸೇನೆಗೆ ಸಂಬಳ ಎಷ್ಟು ಸಿಗುತ್ತೆ ಗೊತ್ತಾ? ಸಂಬಳದ ಜೊತೆಗೆ ಈ ಸೌಲಭ್ಯಗಳು ಸಹ ಸಿಗುವವು..!
ಭಾರತದ ವಾಯು ಸೈನ್ಯ ಜಗತ್ತಿನಲ್ಲಿಯ ಎಲ್ಲಕ್ಕಿಂತ ದೊಡ್ಡ ಮತ್ತು ಪ್ರಮುಖ ಸೇನೆಗಳಲ್ಲಿ ಒಂದಾಗಿದೆ. ನಮ್ಮ ದೇಶದಲ್ಲಿ ಸುಮಾರು 14 ಲಕ್ಷ ಕ್ಕಿಂತ ಹೆಚ್ಚು ಸೈನಿಕರು ಕಾರ್ಯನಿರತದಲ್ಲಿದ್ದಾರೆ. ನಮ್ಮ್ ದೇಶದ ಸೇನೆಯು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಭೂದಳ(indian Army), ನೌಕೆದಳ(indian Navy) ಮತ್ತು ವಾಯುದಳ (Indain Air Force). ಇಲ್ಲಿ ನಾವು ವಾಯುದಳದ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ವಾಯುಸೇನೆಯಲ್ಲಿ ವರ್ಷಕ್ಕೆ ಎರಡು ಸಲ ಅಂದರೆ X ಮತ್ತು Y ಗುಂಪು ಈ ರೂಪದಲ್ಲಿ ಪರೀಕ್ಷೆ ಆಯೋಜನೆ ಮಾಡಲಾಗುವದು. ಆದರೆ ವಾಯು ಸೇನೆಗೆ ಕೊಡುವ ಸಂಬಳ ಮತ್ತು ಇನ್ನಿತರ ಸೌಲಭ್ಯಗಳ ಬಗ್ಗೆ ಗೊತ್ತೇ ಇಲ್ಲ. X ಮತ್ತು Y ಗುಂಪಿನ ಸೈನಿಕರನ್ನು PBOR ಅಂದರೆ ಪರ್ಸನ್ ಬಿಲೋ ಆಫೀಸರ್ ರಾಂಕ್ ಅಥವಾ ಏರ್ ಮ್ಯಾನ್ ಎಂದು ಕರೆಯುವರು. ಗುಂಪು X ನಲ್ಲಿ ಏರ್ ಮ್ಯಾನ್ ಟೆಕ್ನೋಲೊಜಿ ಕ್ಷೇತ್ರದಲ್ಲಿ ತಮ್ಮ ಟ್ರೇಡ್ ನಲ್ಲಿ ಮತ್ತು Y ಗುಂಪಿನವರು ನಾನ್ ಟೆಕ್ನೋಲೊಜಿ ಟ್ರೇಡ್ ನಲ್ಲಿ ಕಾರ್ಯ ಮಾಡುವರು. ಈ ಸೈನ್ಯದ ನಿಯುಕ್ತಿ ಮಾಡಿದ ನಂತರ ಅವರಿಗೆ ಮೊದಲು ಪ್ರಶಿಕ್ಷಣ ನೀಡಲಾಗುವದು. ಪ್ರಶಿಕ್ಷಣದ ಸಮಯದಲ್ಲಿ ಸೈನಿಕರಿಗೆ 14,600 ರೂಪಾಯಿಯ ಸ್ಥಾಯಿಪೆಂಡ್ ಕೊಡಲಾಗವದು. ಯಾವಾಗ ಪ್ರಶಿಕ್ಷಣ ಪೂರ್ಣ ವಾಗುವದು ತದನಂತರ X ಗುಂಪಿನವರಿಗೆ 33,100 ₹ ಮತ್ತು Y ಗುಂಪಿನವರಿಗೆ 26,900 ₹ ಸಂಬಳ ನೀಡುತ್ತಾರೆ. ಕಾಲಕ್ಕೆ ತಕ್ಕಂತೆ ಸಂಬಳದಲ್ಲಿ ಹೆಚ್ಚಿಸಲಾಗುವದು. ಅನುಭವ ಹೆಚ್ಚಾದಂತೆ ಅವರ ಸಂಬಳದಲ್ಲಿ ಸಹ ಹೆಚ್ಚಾಗುವದು.

ಸಂಬಳದ ಜೊತೆಗೆ ಬೇರೆ ಸಿಗುವಂತಹ ಸೌಲಭ್ಯಗಳು-
ಪರಿವಾಹನದ ಭತ್ಯೆ, ನಿವಾಸದ ಭತ್ಯೆ, ರೇಷನ್ ಶುಲ್ಕ್, ಸ್ವಯಂ ಹಾಗೂ ಆಶ್ರಿತರ ಸಲುವಾಗಿ ಚಿಕಿತ್ಸೆ ಸೌಲಭ್ಯ, ಸ್ವಯಂ ಹಾಗೂ ಪರಿವಾರದವರ ಸಲುವಾಗಿ LIC, ಶಿಕ್ಷಣದ ಸಲುವಾಗಿ ಲೋನ್, ಮನೆಯಲ್ಲಿ ಯಾವುದೇ ಪ್ರಕಾರದ ವ್ಯವಸ್ಥೆ ಮಾಡಲು ಹಾಗೂ ಯಾರದಾದರೂ ಮದುವೆ ಇದ್ದರೆ ಬಡ್ಡಿ ಇಲ್ಲದೆ ಲೋನ್ ಸೌಲಭ್ಯ, ಮಕ್ಕಳ ಸಲುವಾಗಿ ವಿದ್ಯಾರ್ಥಿವೃತ್ತಿಯ ಸೌಲಭ್ಯ, ನೈಸರ್ಗಿಕ ಆಪತ್ತಿನಿಂದ ಉಳಿಸಲು ಸೌಲಭ್ಯ, ವೀಲ್ ಚೇರ್ ಸಲುವಾಗಿ ಅನುದಾನ, ಯುದ್ಧದಲ್ಲಿ ಗಾಯಗೊಂಡಾಗ ಪೆನ್ಶನ್ ಸೌಲಭ್ಯ ನೀಡುವರು.