ವಾಹನದಲ್ಲಿ ಇನ್ಮೇಲೆ ಸ್ಟೆಪ್ನಿ ಇಡುವ ಅವಶ್ಯಕತೆ ಇಲ್ಲ! ಸರಕಾರ ತರುತ್ತಿದೆ ಹೊಸ ನಿಯಮ!

ರಸ್ತೆ ಅಪಘಾತಗಳನ್ನು ತಡೆಯಲು, ರಸ್ತೆ ಸಂಚಾರವನ್ನು ಮತ್ತಷ್ಟು ಸುರಕ್ಷಿತವಾಗಿರಿಸಲು ಸರ್ಕಾರ ಈಗಾಗಲೇ ಅನೇಕ ನೀತಿ ನಿಯಮಗಳನ್ನು ರೂಪಿಸಿರುವುದು ತಿಳಿದಿರುವ ವಿಷಯ‌. ಈಗ ಅಂತಹುದೇ ಹಿನ್ನೆಲೆಯಲ್ಲಿ ವಾಹನಗಳಲ್ಲಿನ ಟೈರ್ ಗಳಲ್ಲಿ, ವಾಯು ಒತ್ತಡದ ಮೇಲ್ವಿಚಾರಣಾ ವ್ಯವಸ್ಥೆ (TPMS)ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MORTH) ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದೆಯೆಂದು ಸಚಿವಾಲಯವು ತಿಳಿಸಿದೆ. ಈ ತಿದ್ದುಪಡಿಯ ಅನ್ವಯ ಗರಿಷ್ಠ 3.5 ಟನ್ ತೂಕದ ವಾಹನಗಳಿಗೆ ಟೈರ್ ಪ್ರೆಶರ್ ಮಾನಿಟರಿಂಗ್ ವ್ಯವಸ್ಥೆಯನ್ನು ಸೂಚಿಸಲಾಗಿದೆ.

ಈ ವ್ಯವಸ್ಥೆಯಿಂದ ಆಗುವ ಅನುಕೂಲವೆಂದರೆ ಇದು ವಾಹನಗಳ ಟೈರ್ ಗಳಲ್ಲಿ ಏರ್ ಪ್ರೆಶರ್ ಅನ್ನು ಗಮನಿಸಿ, ಅದರ ಮಾಹಿತಿಯನ್ನು ವಾಹನ ಚಾಲಕನಿಗೆ ನೀಡುತ್ತದೆ. ಇದರಿಂದ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.
ಇದೇ ಸಂದರ್ಭದಲ್ಲಿ ಸಚಿವಾಲಯವು ವಾಹನದಲ್ಲಿ ಟೈರ್ ಅನ್ನು ದುರಸ್ತಿ ಮಾಡುವ ಕಿಟ್ ಗಳನ್ನು ಕೂಡಾ ಇಡುವಂತೆ ಶಿಫಾರಸ್ಸು ಮಾಡಿದೆ. ಇದರಿಂದಾಗಿ ವಾಹನಗಳಲ್ಲಿ ಹೆಚ್ಚುವರಿಯಾಗಿ ಸ್ಟೆಪನಿ ಅಥವಾ ಟೈರ್ ಅನ್ನು ಇಟ್ಟುಕೊಳ್ಳಲೇಬೇಕೆಂಬ ನಿಯಮಕ್ಕೆ ರಿಯಾಯಿತಿ ಕೊಟ್ಟಂತಾಗುತ್ತದೆ. ಈ ಹೊಸ ನಿಯಮ ಎಲ್ಲಾ ವಾಹನಗಳಿಗೂ ಅನ್ವಯವಾಗುತ್ತದೆಯಾದರೂ
ಎಲೆಕ್ಟ್ರಿಕ್ ಕಾರುಗಳ ಬ್ಯಾಟರಿ ಬ್ಯಾಕ್ ಅಪ್ ಹೆಚ್ಚಿಸಲು ಮತ್ತು ಅವುಗಳ ಡ್ರೈವಿಂಗ್ ರೇಂಜನ್ನು ಹೆಚ್ಚಿಸಲು ಈ ನಿಯಮವನ್ನು ಜಾರಿ ಮಾಡಲಾಗಿದೆ ಎನ್ನಲಾಗಿದೆ.

ಸಂಶೋಧನೆಯ ಪ್ರಕಾರ ಟ್ಯೂಬ್ಲೆಸ್ ಟೈರ್ ನ ಯಾವುದೇ ಕಾರ್ ಆಗಿರಲಿ ಗರಿಷ್ಠ ಎಂಟು ಮಂದಿಗೆ ಸೀಟನ್ನು ನೀಡುವ ಸಾಮರ್ಥ್ಯ ಹೊಂದಿರುತ್ತದೆ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಅಥವಾ ಟೈರ್ ದುರಸ್ತಿ ಕಿಟ್ ನಿಂದ ಸುಸಜ್ಜಿತವಾಗಿರುತ್ತದೆ. ಸರ್ಕಾರದ ಈ ಹೊಸ ಹೆಜ್ಜೆಯಿಂದ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರುಗಳ ಶ್ರೇಣಿಯಲ್ಲಿ ಒಂದು ವೃದ್ಧಿ ಗೋಚರಿಸಲಿದೆ ಎನ್ನಲಾಗಿದೆ.‌ ಭಾರತ ಸರ್ಕಾರವು ಕಳೆದ ಕೆಲವು ವರ್ಷಗಳಲ್ಲಿ ದೇಶದೊಳಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟವನ್ನು ಅಭಿವೃದ್ಧಿ ಪಡಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಇಲ್ಲಿ ಖರೀದಿದಾರರಿಗೆ ಇದ್ದ ಪ್ರಮುಖ ಅಡ್ಡಿ ಅಥವಾ ಅನುಮಾನ ಅವುಗಳ ವೇಗದ ರೇಂಜ್ ಆಗಿತ್ತು. ಆದರೆ ಈಗ ಈ ಹೊಸ ನಿಯಮದಿಂದ ಇ-ಕಾರುಗಳ ರೇಂಜ್ ಹೆಚ್ಚುವ ಅವಕಾಶಗಳಂತೂ ಖಚಿತವಾಗಿ ಇವೆ ಎನ್ನಲಾಗದೆ.

ಭಾರತೀಯ ಮಾರುಕಟ್ಟೆಯಲ್ಲಿ ಫ್ಯಾಕ್ಟರಿ ಫಿಟೆಡ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಹೊಂದಿರುವ ಕಾರುಗಳ ಸಂಖ್ಯೆ ಹೆಚ್ಚಾಗಿದೆ. ಈ ಲಕ್ಷಣವು ಕೆಲವು ವರ್ಷಗಳ ಹಿಂದೆ ಕೇವಲ ದುಬಾರಿ ಬೆಲೆಯ ಕಾರುಗಳಲ್ಲಿ ಮಾತ್ರವೇ ಇತ್ತು. ಆದರೆ ಈಗ ಸಣ್ಣ ಕಾರುಗಳಲ್ಲಿ ಕೂಡಾ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ ಮುಂಬರುವ ವರ್ಷಗಳಲ್ಲಿ ಕಾರ್ ನಿರ್ಮಾಣ ಕಂಪನಿಗಳು ಹೆಚ್ಚುವರಿ ಟೈರ್ ನೀಡುವ ಪದ್ದತಿಯನ್ನು ನಿಲ್ಲಿಸಿ, ಅದರ ಬದಲಿಗೆ ಟೈರ್ ಪಂಕ್ಚರ್ ರಿಪೇರಿ ಕಿಟ್ ಮಾತ್ರವೇ ನೀಡಬಹುದು. ಆದರೆ ಇವೆಲ್ಲ ಬೆಳವಣಿಗೆಗಳ ನಡುವೆ ಕಾರು ಕಂಪನಿಗಳು ಈ ಕಿಟ್ ಜೊತೆಗೆ ಟೈರ್ ಗೆ ಗಾಳಿ ತುಂಬಲು ಅಗತ್ಯವಾದ ಒಂದು ಕಂಪ್ರೆಸರ್ ಅನ್ನು ಕೂಡಾ ನೀಡುವುದೋ, ಇಲ್ಲವೋ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.