Articles

ಅಪ್ಪು ನೆನಪು….ಸರಳತೆಯ ಸಾಮ್ರಾಟ್; ಎನ್ನುವದಕ್ಕೆ ಕೆಲವು ಅಪರೂಪದ ಹಾಗೂ ಎಂದೂ ನೋಡಿರದ ಫೋಟೋಗಳ ಆಲ್ಬಮ್ ವಿಡಿಯೋ…..

ಅಪ್ಪು ದೂರಾದಂತೆ ಅವರ ನೆನಪುಗಳು ಮಾತ್ರ ಅಭಿಮಾನಿಗಳಿಗೆ ಬೆಂಬಿಡದೆ ಕಾಡುತ್ತಿವೆ. ಚಿಕ್ಕಂದಿನಿಂದ ಹಿಡಿದು ವಯಸ್ಸಿನ ಪ್ರತಿಯೊಂದು ಹಂತದಲ್ಲಿ ಕಂಡು ಬಂದ ಅವರ ಭಾವಚಿತ್ರಗಳು ನೋಡುಗರ ಮನವನ್ನು ಸೋರೆಗೊಳ್ಳುತ್ತದೆ. ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಅವರ ಜೀವನದಲ್ಲಿ ಬಾಳಿ ಬದುಕಿದ ಹಾಗೂ ಸರಳತೆಯನ್ನು ಮೆರೆದ ಅನೇಕ ವಿಡಿಯೋ ಮತ್ತು ಭಾವಚಿತ್ರಗಳು ಲೆಕ್ಕವಿಲ್ಲದಷ್ಟು ವೀವ್ಸ್ ಹಾಗೂ ಶೇರ್ ಆಗುತ್ತಿವೆ.

ಆಗರ್ಭ ಶ್ರೀಮಂತರಾಗಿದ್ದರೂ ಸಿರಿತನದ ಔಡಂಬರ ಎಲ್ಲಿಯೂ ತೋರದೆ ಸಾಮಾನ್ಯ ಮನುಷ್ಯನಂತೆ ಜೀವಿಸಿ ಸಾವಿರಾರು ಜನರ ಬಾಳಿಗೆ ಬೆಳಕಾದರೂ ಅದನ್ನು ಎಲ್ಲಿಯೂ ತೊರಗೊಡದೆ ಎಲ್ಲ ಕನ್ನಡಿಗರ, ಅಭಿಮಾನಿಗಳ ಹೃದಯದಲ್ಲಿ ಪ್ರೀತಿಯ ಯುವರಾಜನಾಗಿ ಮೆರೆದರು ನಮ್ಮ ಅಪ್ಪು.

ವಿಡಿಯೋ ನೋಡಿ

ಅವರದೇ ಆದ ಕೆಲವು ಅಪರೂಪದ ಅಷ್ಟೇ ಮನಮುಟ್ಟುವ ಸರಳತೆಯ ಮೇರು ಪರ್ವತರಾದ ಅಪ್ಪು ಅವರ ಸುಂದರ ಫೋಟೋಗಳನ್ನು ಇಲ್ಲಿ ಈ ವಿಡಿಯೋದಲ್ಲಿ ನೋಡಬಹುದು…

Leave a Comment

Your email address will not be published. Required fields are marked *