ವಿಡಿಯೋ; ಒಲ್ಲೆಂದರೆ ಕೇಳುವವರ್ಯಾರು? ಮರಿ ಮಂಗಕ್ಕೆ ತಾಯಿ ಮಂಗ ಹಿಡಿದು ಜಳಕ ಮಾಡಿಸಿದ ಪರಿ ಸಖತ್ ಸುಪರ್ರೋ ಸೂಪರ್…
ಕಾಡಿನ ಜೀವನದ ಬಗ್ಗೆ ನಿಜಕ್ಕೂ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಹೀಗಾಗಿಯೇ ಕಾಡುಜೀವಿಗಳ ಮೇಲೆ ಸೆರೆ ಹಿಡಿದ ವಿಡಿಯೋಗಳು ನೆಟ್ಟಿಗರಿಗೆ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾಡಿನಲ್ಲಿ ಜೀವಿಸುವ ಪ್ರಾಣಿಗಳ ಜೀವನ ಮನುಷ್ಯನಿಗಿಂತಲೂ ತುಂಬಾ ವಿಚಿತ್ರವಾಗಿದೆ. ಪ್ರಾಣಿಗಳು ಸಹ ತಮ್ಮ ವೈಯಕ್ತಿಕ ಸ್ವಚ್ಛತೆಗೆ ಹೇಗೆ ಮಹತ್ವವನ್ನು ಕೊಡುತ್ತವೆ ಎಂಬುದು ಇಲ್ಲಿಯ ವಿದಿಯೋದಿಂದ ಗೊತ್ತಾಗುತ್ತದೆ. ಇಲ್ಲಿ ಆ ತಾಯಿ ಮಂಗ ಮತ್ತು ಮರಿ ಮಂಗನ ವಿಡಿಯೋ ಒಂದು ತುಂಬಾ ವಿಶಿಷ್ಟವಾಗಿದೆ. ಈ ವಿಡಿಯೋದಲ್ಲಿ ಮಂಗವು ತನ್ನ ಮಗುವಿನ ಸ್ವಚ್ಛತೆಯ ಬಗ್ಗೆ ಹೇಗೆ ಕಾಳಜಿ ವಹಿಸುತ್ತಿದೆ ಎಂಬುದನ್ನು ನೋಡಬಹುದು.
ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಹಾಗೆ ಕಾಡಿನಲ್ಲಿರುವ ಒಂದು ನೀರಿನ ಹೊಂಡದ ಸಮೀಪ ಮಂಗವೊಂದು ತನ್ನ ಪುಟ್ಟ ಮರಿಗೆ ಸ್ನಾನ ಮಾಡಿಸುತ್ತಿದೆ. ಸ್ನಾನಕ್ಕಾಗಿ ಮಂಗವು ತನ್ನ ಎದೆಗೆ ಅಂಟಿಕೊಂಡಿರುವ ಮರಿಯನ್ನು ಬಿಡಿಸಿಕೊಳ್ಳುತ್ತಿದೆ. ಚಿಕ್ಕ ಮಕ್ಕಳು ತನ್ನ ತಾಯಿಯ ಜೊತೆಗೆ ಹಟ ಮಾಡುವ ರೀತಿಯಲ್ಲಿ ಮರಿ ಮಂಗವು ಸಹ ಸ್ನಾನ ಬೇಡವೆಂದು ತಾಯಿಯ ಹೊಟ್ಟೆಗೆ ಗಟ್ಟಿಯಾಗಿ ಅವಚಿಕೊಂಡು ಕುಳಿತಿದೆ. ಅದು ಸ್ನಾನಕ್ಕೆ ಸ್ಪಷ್ಟವಾಗಿ ನಿರಾಕರಿಸುತ್ತಿದೆ. ಆದರೆ ತಾಯಿ ಬಿಡಬೇಕಲ್ಲ?
ತಾಯಿಯು ಮಾತ್ರ ತನ್ನ ಕುಡಿಗೆ ಇಂದು ಸ್ನಾನ ಮಾಡಿಸಲೇಬೇಕೆಂದು ನಿಶ್ಚಯ ಮಾಡಿದ್ದಾಳೆ, ಅಂದಾಗ ಕೇಳುವರ್ಯಾರು? ಎದೆಗವಚಿಕೊಂಡು ಕುಳಿತ ಮರಿಯನ್ನು ಬಿಡಿಸಿ ಅದನ್ನು ನೀರಿನಲ್ಲಿ ಇಳಿ ಬಿಟ್ಟಿದ್ದಾಳೆ. ಈ ಸಂದರ್ಭದಲ್ಲಿ ಮರಿಯು ತಾಯಿಯ ಕೈಗಳನ್ನು ಗಟ್ಟಿಯಾಗಿ ಹಿಡಿದು ನೀರಿನಲ್ಲಿ ಇಳಿಯಲು ಒಂದೇಸವನೆ ನಿರಾಕರಿಸುತ್ತಿದೆ. ಆದರೂ ತಾಯಿ ಮಂಗ ಮಾತ್ರ ಮರಿಗೆ ಬಿಡದೆ ಅದನ್ನು ನೀರಿನಲ್ಲಿ ಮುಳುಗಿಸಿ ನಂತರ ಅದರ ಮೈಗೆ ನೀರನ್ನು ಚೆಲ್ಲಿ ತಿಕ್ಕಿ ಸ್ನಾನ ಮಾಡಿಸಿಯೇ ಬಿಟ್ಟಿದ್ದಾಳೆ.
ವಿಡಿಯೋ ನೋಡಿ
Baby bathing… pic.twitter.com/uWftpaSkYl
— Dr.Samrat Gowda IFS (@IfsSamrat) March 24, 2022
ಈ ಸುಂದರವಾದ ಹಾಗೂ ಸ್ವಚ್ಛತೆಯ ಬಗ್ಗೆ ಒಳ್ಳೆಯ ಸಂದೇಶವನ್ನು ನೀಡುವ ಸಕ್ಕತ್ ವಿಡಿಯೋವನ್ನು ಕನ್ನಡಿಗರಾದ ಐಎಫ್ಎಸ್ ಆಫೀಸರ್ ಡಾಕ್ಟರ್ ಸಾಮ್ರಾಟ್ ಗೌಡ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋಗಳು ಸಾವಿರಾರು ಜನರು ಲೈಕ್ ಮಾಡಿದ್ದಲ್ಲದೇ 47 ಸಾವಿರಕ್ಕಿಂತ ಹೆಚ್ಚು ಜನರು ನೋಡಿ ವಿವಿಧ ರೀತಿಯ ಕಮೆಂಟ್ಗಳನ್ನು ಮಾಡಿದ್ದಾರೆ.