ವಿರಾಟ್ ಅಲ್ಲ, ರೋಹಿತ್ ಅಲ್ಲ ‘ಈ’ ಆಟಗಾರ ಆಗಲಿದ್ದಾರೆ ಭಾರತದ ಹೊಸ ಕ್ಯಾಪ್ಟನ್! ಬಿಸಿಸಿಐ ನೀಡಲಿದೆ ಬಿಗ್ ಶಾ#ಕ್! ಹೀಗಾದ್ರೆ……..
ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಶೀಘ್ರದಲ್ಲೇ ರೋಚಕ ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಆಡಲಿವೆ. ಭಾರತ ತಂಡ ಡಿಸೆಂಬರ್ 16 ರಂದು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಈ ಸರಣಿಯಲ್ಲಿ ಮೊದಲಿಗೆ ಮೂರು ಟೆಸ್ಟ್ ಪಂದ್ಯಗಳು ನಡೆಯಲಿದ್ದು
ಆ ಬಳಿಕ 3 ಏಕದಿನ ಪಂದ್ಯಗಳ ಸರಣಿ ನಡೆಯಲಿವೇ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ತಂಡದ ಉಪನಾಯಕತ್ವ ಮತ್ತು ಏಕದಿನ ತಂಡದ ನಾಯಕತ್ವವನ್ನು ನೀಡಲಾಯಿತು. ಆದರೆ, ಈ ನಿರ್ಧಾರ ಭಾರತೀಯ ಕ್ರಿಕೆಟ್ನಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆ#ಘಾತಕಾರಿ ನಿರ್ಧಾರ ಕೈಗೊಳ್ಳಬಹುದು.
ನಾಯಕತ್ವದ ಸಲುವಾಗಿ ಪರದಾಟ.
ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಶರ್ಮಾ ಏಕದಿನ ತಂಡವನ್ನು ಮುನ್ನಡೆಸುತ್ತಿರುವುದು ವಿರಾಟ್ ಕೊಹ್ಲಿಗೆ ಅಷ್ಟೊಂದು ಸರಿಯಾಗಿ ಅನಿಸಲಿಲ್ಲ. ವಿರಾಟ್ ಟಿ-20 ತಂಡದ ನಾಯಕತ್ವವನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಿದ್ದರು. ಆದರೆ ಅವರು ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕತ್ವವನ್ನು ಮುನ್ನಡೆಸಿಕೊಂಡು ಹೋಗುವೆ ಎಂದು ಹೇಳಿದ್ದರು. ಆದರೆ, ಬಿಸಿಸಿಐ ಏಕದಿನ ತಂಡದ ನಾಯಕತ್ವವನ್ನು ರೋಹಿತ್ಗೆ ನೀಡಿದರು ಹೀಗಾಗಿ ವಿರಾಟ್ ಅವರು ಈ ನಿರ್ಣಯವನ್ನು ಮನಸ್ಸಿನಿಂದ ಸ್ವೀಕರಿಸಲಿಲ್ಲ. ಏಕೆಂದರೆ ಅವರು ಏಕದಿನ ನಾಯಕತ್ವ ನಿಭಾಯಿಸಲು ತಯಾರಿದ್ದರು ಸಹ ಬಿಸಿಸಿಐ ತಗೆದುಕೊಂಡ ನಿರ್ಧಾರ ತನ್ನ ವಿರುದ್ಧ ಇದೆ ಎಂದು ಕೋಪಗೊಂಡರು.
ಇದರಿಂದ ಭಾರತೀಯ ಕ್ರಿಕೆಟ್ನಲ್ಲಿ ವಿರಾಟ್ ಮತ್ತು ರೋಹಿತ್ ನಡುವೆ ಪರೋಕ್ಷ ಕಲಹ ಶುರುವಾದಂತಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಗಾಯಗೊಂಡಿರುವ ರೋಹಿತ್ ಟೆಸ್ಟ್ ಸರಣಿಯಲ್ಲಿ ಆಡುವದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಆದರೆ ಇದನ್ನು ಅರಿತ ಕೊಹ್ಲಿ ಸಹ ವೈಯಕ್ತಿಕ ಕಾರಣಗಳಿಂದ ವಿರಾಟ್ ಏಕದಿನ ಸರಣಿಯಲ್ಲಿ ಆಡುವದಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಬಿಸಿಸಿಐ ಪರಿಹಾರ ಕಂಡುಕೊಳ್ಳಲಿದೆ.
ರೋಹಿತ್ ಮತ್ತು ವಿರಾಟ್ ನಡುವಿನ ತಥಾಕಥಿತ ವಿವಾದವನ್ನು ಇತ್ಯರ್ಥಗೊಳಿಸಲು ಬಿಸಿಸಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಮಾಧ್ಯಮ ವರದಿಗಳ ಪ್ರಕಾರ, ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ, ಬಿಸಿಸಿಐ ಮೂರು ರಚನೆಯ ಅಂದರೆ ಟೆಸ್ಟ್, ಏಕದಿನ ಮತ್ತು ಟಿ-20 ನಾಯಕತ್ವವನ್ನು ಕೆಎಲ್ ರಾಹುಲ್ಗೆ ನೀಡುವ ಸಾಧ್ಯತೆ ಇದೆ. ಸದ್ಯ ರಾಹುಲ್ಗೆ 30 ವರ್ಷ ಇದ್ದು ಅವರು ಮುಂದಿನ ಐದು-ಆರು ವರ್ಷಗಳ ಕಾಲ ಅವರು ತಂಡವನ್ನು ಮುನ್ನಡೆಸಿಕೊಂಡು ಹೋಗಬಹುದು ಎಂಬುದು ಬಿಸಿಸಿಐ ವಿಚಾರವಾಗಿದೆ.
ಮತ್ತೊಂದೆಡೆ, ವಿರಾಟ್ 33 ಮತ್ತು ರೋಹಿತ್ 34 ವರ್ಷದವಾರಿಗಿದ್ದು ವಯಸ್ಸು ಅವರ ನಾಯಕತ್ವಕ್ಕೆ ತೊಂದರೆ ತರುತ್ತಿದೆ. ಅಲ್ಲದೆ, ರಾಹುಲ್ ಮತ್ತು ಮುಖ್ಯ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಕರ್ನಾಟಕದವರಾಗಿದ್ದು ಅವರಿಬ್ಬರ ನಡುವಿನ ಸಂಬಂಧವು ಸ್ನೇಹಪರವಾಗಿದೆ. ಇದರಿಂದ ಭಾರತ ತಂಡಕ್ಕೆ ಲಾಭವಾಗಬಹುದು.
ಕೆ ಎಲ್ ರಾಹುಲ್ ಒಂದನೆಯ ಪರ್ಯಾಯವಾದರೆ ಇನ್ನೊಂದು ಪರ್ಯಾಯವಾಗಿ ಮೂರು ರಚನೆಯ ಕ್ರಿಕೆಟ್ ಆಟದ ಕ್ಯಾಪ್ಟನ್ ಆಗಿ ಮೂರು ಬೇರೆ ಬೇರೆಯಾದ ಆಟಗಾರರನ್ನು ಆಯ್ಕೆ ಮಾಡಬಹುದು. ಟೆಸ್ಟ್ ರಾಹುಲ್ ಕಡೆ, ಏಕದಿನ ಶ್ರೇಯಸ್ ಅಯ್ಯರ್ ಕಡೆಗೆ ಮತ್ತು ಟಿ-20 ತಂಡದ ನೇತೃತ್ವವನ್ನು ರಿಷಬ್ ಪಂತಕಡೆ ಕೊಡುವ ಸಾಧ್ಯತೆ ಇದೆ.