ವೈರಲ್ ಫೋಟೋಸ್; ಭಾರತದ ಅಳಿಯ ಗ್ಲೆನ್ ಮ್ಯಾಕ್ಸ್ವೆಲ್ ರಿಸೆಪ್ಶನ್ ಪಾರ್ಟಿ! ವಿರಾಟ್ ಬಳುಕಿಸಿದರು ಸೊಂಟ! ಫಾಫ್ ಡು ಪ್ಲೆಸಿಸ್ ಫ್ಯಾಮಿಲಿ ಭಾರತೀಯ ಉಡುಗೆಯಲ್ಲಿ…
ಆಸ್ಟ್ರೇಲಿಯಾದ ಆಲ್-ರೌಂಡರ್ ಆಟಗಾರ ಮತ್ತು ನಮ್ಮ ಆರ್ಸಿಬಿ ಸ್ಟಾರ್ ಕ್ರಿಕೆಟರ್ ಗ್ಲೆನ್ ಮ್ಯಾಕ್ಸ್ವೆಲ್ ಭಾರತೀಯ ವಂಶದ ವಿನಿ ರಾಮನ್ ಜೊತೆಗೆ ಮಾರ್ಚ್ 18ರಂದು ಮದುವೆಯಾದರು.

ಮಿನಿ ಮತ್ತು ಮ್ಯಾಕ್ಸ್ವೆಲ್ ಕಳೆದ ಅನೇಕ ವರ್ಷಗಳಿಂದ ಒಬ್ಬರಿಗೊಬ್ಬರು ಡೇಟ್ ಮಾಡುತ್ತಿದ್ದರು. 2020 ರಲ್ಲಿಯೇ ಇಬ್ಬರ ಎಂಗೇಜ್ಮೆಂಟ್ ಆಗಿತ್ತು.

ಭಾರತೀಯ ಮೂಲದ ವಿನಿ ಅವರು ಆಸ್ಟ್ರೇಲಿಯಾದಲ್ಲಿಯೇ ಇರುತ್ತಿದ್ದು ಫಾರ್ಮಸಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ವಿನಿ ರಾಮನ್ ಅವರ ರಿಸೆಪ್ಶನ್ ಇತ್ತೀಚೆಗೆ ನೆರವೇರಿತು.

ಈ ರಿಸೆಪ್ಶನ್ ಪಾರ್ಟಿಯಲ್ಲಿಯ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಈ ರಿಸೆಪ್ಶನ್ ಪಾರ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಹೆಚ್ಚು ಸಂಖ್ಯೆಯಲ್ಲಿ ಹಾಜರಿದ್ದರು.

ರಿಸೆಪ್ಶನ್ ಪಾರ್ಟಿಯಲ್ಲಿ ಅನೇಕ ಆಟಗಾರರು ತಮ್ಮ ಸೊಂಟ ಬಳುಕಿಸಿ ಖುಷಿಯಿಂದ ಕುಣಿದು ಕುಪ್ಪಳಿಸಿದರು.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಈ ರಿಸೆಪ್ಶನ್ ಪಾರ್ಟಿಯಲ್ಲಿ ‘ಪುಷ್ಪ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಸದ್ಯ ಈ ರಿಸೆಪ್ಶನ್ ಪಾರ್ಟಿಯಲ್ಲಿಯ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿವೆ.
🤩❤️🔥💥 #Pushpa #OoAntavaOoOoAntava https://t.co/AILiUBeato
— Pushpa (@PushpaMovie) April 28, 2022
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ತಮ್ಮ ಕುಟುಂಬದ ಜೊತೆಗೆ ವಿಶೇಷವೆಂದರೆ ಭಾರತೀಯ ಉಡುಗೆ ತೊಡುಗೆಯಲ್ಲಿ ರಿಸೆಪ್ಶನ್ ನಲ್ಲಿ ಶಾಮೀಲಾಗಿದ್ದರು.

ಮಿಸ್ಟರ್ ಅಂಡ್ ಮಿಸ್ಸೆಸ್ ಮ್ಯಾಕ್ಸ್ವೆಲ್.
