ವೈರಲ್ ವಿಡಿಯೋ; ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾವು ಮಾಡಿತು AC ಯಲ್ಲಿಯೇ ಮನೆ ! ಇಲಿಯ ಬೇಟೆಯಾಡುವಾಗ ಸಿಕ್ಕಿತು ಕ್ಯಾಮೆರಾ ಕಣ್ಣಿಗೆ !
ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ತಮಾಷೆಯದಾದರೆ ಇನ್ನು ಕೆಲವು ಭೀತಿಯನ್ನುಂಟು ಮಾಡುತ್ತವೆ. ಇಂಥ ವಿಡಿಯೋಗಳಂತೂ ನೊಡನೋಡುವಷ್ಟರಲ್ಲಿ ವೈರಲ್ ಆಗಿ ಬಿಡುತ್ತವೆ. ಹೆಚ್ಚುತ್ತಿರುವ ಉಷ್ಣತೆಯಿಂದ ಬಚಾವ್ ಆಗುವ ಸಲುವಾಗಿ ಸಾಕಷ್ಟು ಜನರು ಮನೆಯಲ್ಲಿ ಏಸಿ ಅಳವಡಿಸಿಕೊಳ್ಳುತ್ತಾರೆ. ಈ ಎಸಿಯಲ್ಲಿಯೇ ಒಂದು ಹಾವು ಕಂಡು ಬಂದಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ನೀವು ಒಂದು ವೇಳೆ ಎಸಿ ಉಪಯೋಗಿಸುತ್ತಿದ್ದರೆ ಮೊದಲು ಸರಿಯಾಗಿ ನಿಮ್ಮ ಎಸಿ ಚೆಕ್ ಮಾಡಿಕೊಳ್ಳುವ ಯೋಚನೆ ಬಂದೇ ಬರುತ್ತದೆ. ಕಾರಣ ಒಂದು ಹಾವು ಉಷ್ಣತೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಎಸಿಯಲ್ಲಿಯೇ ವಾಸ್ತವ್ಯ ಹೂಡಿದೆ.
ಬರೀ ಹಾವು ಈ ಶಬ್ದ ಕೇಳಿದ ನಂತರವೇ ನಡಗುವ ಜನರು ಸಾಕಷ್ಟಿದ್ದಾರೆ. ಇನ್ನು ನಾವು ಉಪಯೋಗಿಸುವ ಎಸಿಯಲ್ಲಿಯೇ ಹಾವು ವಾಸ್ತವ್ಯ ಮಾಡಿ ಕುಳಿತ್ತಿದ್ದನ್ನು ನೋಡಿದಾಗ ಮನೆಯವರಿಗೆ ಹೇಗಾಗಿರಬೇಡ? ಏಕೆಂದರೆ ನಮ್ಮ ಮನೆಯಲ್ಲಿ ಇರುವ ಯಾವ ವಸ್ತುವಿನಲ್ಲಿ ಹಾವು ಮನೆ ಮಾಡಿ ಕುಳಿತುಕೊಳ್ಳುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ಈ ಎಸಿಯಲ್ಲಿಯ ಹಾವು ಇಲಿಯ ಬೇಟೆಯಾಡಿ ಅದನ್ನು ನುಂಗುವ ಹೊತ್ತಿಗೆ ಗೊತ್ತಾಗಿದೆ, ಇದು ಎಸಿಯಲ್ಲಿ ಮನೆ ಮಾಡಿದೆ ಎಂದು. ಈ ವಿಡಿಯೋವನ್ನು ನೋಡಿ ನೇಟಿಜನ್ಸ್ ಗಳು ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ.
ವಿಡಿಯೋ ನೋಡಿ
View this post on Instagram
ಈ ಹಾವಿನ ವಿಡಿಯೋವನ್ನು ನೇಟಿಜನ್ಸ್ ಗಳು ತಮ್ಮವರ ಮತ್ತು ತಮ್ಮನ್ನು ಗುರುತಿಸುವವರ ಕಾಳಜಿ ತೆಗೆದುಕೊಳ್ಳಲೆಂದು ಸೋಶಿಯಲ್ ಮೀಡಿಯಾದ ಇನ್ನಿತರ ಪ್ಲಾಟ್ಫಾರ್ಮ್ ಗಳಲ್ಲಿ ಒಂದೇ ಸವನೆ ಶೇರ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ವೀಕ್ಷಿಸಿದ್ದಾರೆ, ಜೊತೆಗೆ ತಮ್ಮ ಸಂಬಂಧಿಕರಿಗೆ ಮತ್ತು ಮಿತ್ರರಿಗೆ ಇದರ ಬಗ್ಗೆ ಸೂಚನೆಯನ್ನು ನೀಡುತ್ತಿದ್ದಾರೆ.