ಶಾಕಿಂಗ್! ನಾಯಿಯು ಮಟನ್ ತಿಂದ ಕಾರಣಕ್ಕಾಗಿ ಮಗಳ ಮೇಲೆಯೇ ಗುಂಡು ಹಾರಿಸಿದ ತಂದೆ..!
ಜಗತ್ತಿನಲ್ಲಿ ತುಂಬಾ ವಿಚಿತ್ರ ರೀತಿಯ ಜನ ಜೀವಿಸುತ್ತಾರೆ. ಅವರ ಮನಸ್ಸಿನಲ್ಲಿ ಯಾವಾಗ ಏನು ಬರುತ್ತದೆ? ತಾನೇನು ಮಾಡುತ್ತಿದ್ದೇನೆ ಎಂಬ ಅರಿವೂ ಸಹ ಇಲ್ಲದೆ ಹೋಗುತ್ತದೆ. ಅಂಥ ನರಾಧಮಗಳೂ ನಮ್ಮಲ್ಲಿ ತುಂಬಿ ಕೊಂಡಿದ್ದಾರೆ.
ಸದ್ಯ ಇದೇ ವಿಷಯಕ್ಕೆ ಸಂಬಂಧಿಸಿದಂಥ ಒಂದು ಘಟನೆ ನಮ್ಮ ನೆರೆಯ ಮಹಾರಾಷ್ಟ್ರದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಸೊಲ್ಲಾಪುರ ಹತ್ತಿರದ ತುಳಜಾಪೂರ ತಾಲೂಕಿನ ಕಾರ್ಲಾ ಹೆಸರಿನ ಊರಲ್ಲಿ ನಡೆದ ಘಟನೆ. ಇಲ್ಲಿ ಅಡುಗೆಗೆಂದು ತಂದು ಮಟನ್ ನಾಯಿ ತಿಂದ ಕಾರಣಕ್ಕೆ ದೊಡ್ಡ ಘಟನೆಯೇ ನಡೆದು ಹೋಗಿದೆ. ತಂದೆಯ ಹೆಸರು ಗಣೇಶ್ ಭೋಸಲೆ ಇದ್ದು ಈತ ತನ್ನ 22 ವರ್ಷದ ಜೀವದ ಕುಡಿ, ಮಗಳಾದ ಕಾಜಲ್ ಮೇಲೆಯೇ ಟ್ರಿಗರ್ ಒತ್ತಿದ್ದಾನೆ. ಕಾರಣವಿಷ್ಟೇ ಅಡುಗೆಗೆ ತಂದ ಮಟನ್ ನಾಯಿ ತಿಂದದ್ದಕ್ಕಾಗಿ.
ಮುಂದೆ ಕಾಜಲ್ ಳನ್ನು ಜಿಲ್ಹಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಧ್ಯೆದಲ್ಲಿ ಸಾವಿಗೆ ಶರಣಾಗಿದ್ದಾಳೆ. ಪ್ರಸ್ತುತ ಕೊಲೆಯ ಪ್ರಕರಣವನ್ನು ನಳದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.