ಶಿಖರ್ ಧವನ್ ತನಗಿಂತಲೂ 10 ವರ್ಷ ದೊಡ್ಡವಳನ್ನು ಮತ್ತು ಎರಡು ಮಕ್ಕಳಿರುವ ಮಹಿಳೆಯ ಜೊತೆಗೆ ಏಕೆ ಮದುವೆಯಾದರು? ಓದಿ ನಿಜಕ್ಕೂ ಅಭಿಮಾನವೆನಿಸುವದು.
ಭಾರತದ ಅನೇಕ ಕ್ರಿಕೇಟ್ ಆಟಗಾರರು ಮಾಡೆಲ್, ಅಭಿನೇತ್ರಿ ಇರುವ ಹುಡುಗಿಯರನ್ನೇ ಮದುವೆಯಾಗಿದ್ದಾರೆ. ಇದರಲ್ಲಿ ಭಾರತದ ಓಪನರ್ ಬ್ಯಾಟ್ಸ್ ಮನ್ ಶಿಖರ ಧವನ್ ಹಾಗೂ ಪತ್ನಿ ಆಯೇಶಾ ಇವರ ಲವ್ ಸ್ಟೋರಿ ತುಂಬಾ ಇಂಟರೆಸ್ಟಿಂಗ್ ಇದೆ ಎಂದು ಹೇಳಬಹುದು. ಧವನ್ ಹಾಗೂ ಆಯೇಶಾ ಅವರ ಪರಿಚಯ ಫೇಸ್ಬುಕ್ ಮುಖಾಂತರ ಆಗಿತ್ತು. ಆಯೇಶಾ ಭಾರತದಲ್ಲಿ ಜನಸಿದರೂ ಅವರ ತಂದೆ-ತಾಯಿ ಆಸ್ಟ್ರೇಲಿಯಾದ ಮೇಲಬಾರ್ನ್ ನಲ್ಲಿ ವಾಸವಾಗಿದ್ದರಿಂದ ಅವರು ಶಿಕ್ಷಣ ಅಲ್ಲಿಯೇ ಪಡೆದುಕೊಂಡರು. ಆಯೇಶಾ ವೃತ್ತಿಯಿಂದ ಬಾಕ್ಸರ್ ಆಗಿದ್ದಾರೆ ಎಂದು ಹೇಳಲಾಗುತ್ತದೆ. ಬಂಗಾಲಿ-ಬ್ರಿಟಿಷ್ ವಂಶದ ಆಯೇಶಾ 2009 ರಲ್ಲಿ ಶಿಖರ ಧವನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.

ಆದರೆ ತಮ್ಮ ಕರಿಯರ್ ಸಲುವಾಗಿ ಸಮಯ ಸಿಗಬೇಕು ಎಂದು 30 ಆಕ್ಟೊಬರ್ 2012 ರಲ್ಲಿ ಶಿಖರಧವನ್ ಅವರೊಂದಿಗೆ ವಿವಾಹವಾದರು. ಆಯೆಷಾ ಶಿಖರ್ ಧವನ್ ಗಿಂತ ಹತ್ತು ವರ್ಷ ದೊಡ್ಡವರಾಗಿದ್ದಾರೆ. ಮದುವೆಗಿಂತ ಮುಂಚೆ ಇಬ್ಬರೂ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದರು. ಹರಭಜನ್ ಸಿಂಗ್ ಅವರು ಮುಂದಾಳುತ್ವ ವಹಿಸಿ ಶಿಖರ್ ಧವನ್ ಹಾಗೂ ಆಯೇಶಾ ಒಬ್ಬರಿಗೊಬ್ಬರನ್ನು ಭೇಟಿ ಮಾಡಿಸಿದರು. ಶಿಖರ್ಧವನ್ ಅವರೊಂದಿಗೆ ಮದುವೆ ಆಗುವ ಮುಂಚೆ ಆಯೇಶಾ ಅವರು ಆಸ್ಟ್ರೇಲಿಯಾದ ಒಬ್ಬ ಉದ್ಯಮಿಯೊಂದಿಗೆ ವಿವಾಹ ವಾಗಿದ್ದರು. ಅವರಿಗೆ ಎರಡು ಹುಡುಗಿಯರು ಸಹ ಇದ್ದಾರೆ. ಆದರೆ ಕೌಟುಂಬಿಕ ಕಲಹದಿಂದ ಒಬ್ಬರಿಗೊಬ್ಬರು ವಿಚ್ಛೇದನ ನೀಡುವ ನಿರ್ಣಯ ತಗೆದುಕೊಂಡರು ಅದರನಂತರವೆ ಧವನ್ ಅವರೊಂದಿಗೆ ವಿವಾಹ ಬಂಧನದಲ್ಲಿ ಸಿಲುಕಿಕೊಂಡರು.

ಆಯೇಶಾ ಅವರ ಮಕ್ಕಳಾದ ರಿಯಾ ಹಾಗೂ ಆಲಿಯಾ ಇಬ್ಬರನ್ನು ಧವನ್ ಅವರು ತಮ್ಮ ಮಕ್ಕಳನ್ನಾಗಿಸಿಕೊಂಡರು. ಮದುವೆಯ ನಂತರ 2014 ರಲ್ಲಿ ಇವರಿಗೆ ಗಂಡು ಮಗುವಾಯಿತು. ಆ ಮಗುವಿಗೆ “ಜೋರಾವರ್” ಎಂದು ಹೆಸರಿಟ್ಟರು. ಅನೇಕ ಜನರಿಗೆ ಒಂದು ಪ್ರಶ್ನೆ ತುಂಬಾ ಕಾಡುತ್ತಿದೆ ಅದೇನೆಂದರೆ ‘ಇಷ್ಟೊಂದು ಸುಪ್ರಸಿದ್ಧ ಆಟಗಾರರಾದ ಧವನ್ ಅವರು ಇಬ್ಬರು ಮಕ್ಕಳು ಹೊಂದಿದ ಮಹಿಳೆಯನ್ನು ವಿವಾಹ ಏಕೆ ಆದರು”. ಅದಕ್ಕೆ ಉತ್ತರವೇ ಪ್ರೀತಿ. ಪ್ರೀತಿ ಯಾರ ಮೇಲೆ ಬರುವದು ಯಾವಾಗ ಬರುವದು ಎಂಬುದು ಗೊತ್ತೇ ಆಗುವುದಿಲ್ಲ. ಅಲ್ಲದೆ ಪ್ರೀತಿಗೆ ವಯಸ್ಸಿನ ಮಿತಿಯೇ ಇರುವದಿಲ್ಲ. ಆದರೆ ಧವನ್ ಅವರ ಈ ನಿರ್ಧಾರಕ್ಕೆ ತುಂಬಾ ಹೆಮ್ಮೆ ಪಡಬೇಕು. ಸಮಾಜದಲ್ಲಿ ಆಯೇಶಾರಂತಹ ವಿವಾಹ ವಿಚ್ಛೇದನ ಪಡೆದ ಹೆಣ್ಣನ್ನು ಬೇರೆ ದೃಷ್ಟಿಯಿಂದ ನೋಡುತ್ತಾರೆ. ಆದರೆ ಶಿಖರ್ ಧವನ್ ಅವರು ಏನನ್ನು ನೋಡದೆ, ಏನನ್ನು ವಿಚಾರಿಸದೆ ಪ್ರೀತಿ ಮಾಡಿದ ವ್ಯಕ್ತಿಯ ಜೊತೆಗೆ ಮದುವೆಯಾದರು. ಇಂದು ಅವರು ಆ ಇಬ್ಬರು ಮಕ್ಕಳನ್ನು ಸಹ ಚೆನ್ನಾಗಿಯೇ ಸಲುಹುತ್ತಿದ್ದಾರೆ.