Articles

Video; ನಾಗಾಲ್ಯಾಂಡ್ ನ BJP ಅದ್ಯಕ್ಷರು ಮಾರ್ಮಿಕವಾಗಿ ಹೇಳುತ್ತಾರೆ, ಚಿಕ್ಕ ಕಣ್ಣುಗಳಿಂದಾಗುವ ಲಾಭವೇನು?

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿಯ ನಾಯಕರೊಬ್ಬರ ವಿಡಿಯೋ ತುಂಬಾ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನಂತರ ಜನರು ಈ ವಿಡಿಯೋ ಬಗ್ಗೆ ತುಂಬಾ ಚರ್ಚೆಯನ್ನು ಮಾಡುತ್ತಿದ್ದಾರೆ. ಬಿಜೆಪಿ ನಾಯಕನ ಈ ವಿಡಿಯೋವನ್ನು ಸ್ವತಃ ಆಸಾಮ್ ನ ಮುಖ್ಯಮಂತ್ರಿಯಾದ ಹೇಮಂತ್ ವಿಶ್ವಾಸ್ ಸರಮಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಮತ್ತು ಅದರ ಜೊತೆಗೆ “ಭಾಯಿ ಇಮನಾ ಅಲಾಂಗ್ ತುಂಬಾ ಫುಲ್ ಫಾರ್ಮ್ ನಲ್ಲಿದ್ದಾರೆ” ಎಂದಿದ್ದಾರೆ.

ನಾಗಾಲ್ಯಾಂಡ್ ನ ಶಿಕ್ಷಣ ಸಚಿವರಾದ ತೆಮ್ಜೆನ್ ಇಮನಾ ಅಲಾಂಗ್ ಅವರ ನಿನ್ನೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಚಿಕ್ಕ ಕಣ್ಣುಗಳ ಬಗ್ಗೆ ಅವರು ನೀಡಿದ ಸ್ಟೇಟ್ ಮೆಂಟ್ ಬಗ್ಗೆ ನೀವು ಕೇಳಿದರೆ ನಿಮಗೂ ನಗು ಬರುತ್ತದೆ.

ತಮ್ಮ ಭಾಷಣದಲ್ಲಿ ಅಲಾಂಗ್ ಅವರು ಚಿಕ್ಕ ಕಣ್ಣುಗಳು ಮತ್ತು ಅವುಗಳ ಲಾಭದ ಬಗ್ಗೆ ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ. ಭಾರತದ ನಾರ್ತ್ ಈಸ್ಟ್ ಜನರ ಕಣ್ಣುಗಳು ತುಂಬಾ ಚಿಕ್ಕವಾಗಿರುತ್ತವೆ. ಚಿಕ್ಕ ಕಣ್ಣುಗಳು ಇದ್ದರೂ ಸಹ ನೋಡಲು ನಮಗೆ ಯಾವುದೇ ಕಷ್ಟ ಬರುವುದಿಲ್ಲ. ಎಲ್ಲವೂ ನಮಗೆ ತುಂಬಾ ಕ್ಲಿಯರ್ ಆಗಿ ಕಾಣಿಸುತ್ತದೆ. ನಮ್ಮ ಹಾಗೆ ಕಣ್ಣುಗಳು ತುಂಬಾ ಚಿಕ್ಕದಿದ್ದರೆ ಅದರಿಂದ ಅನೇಕ ಲಾಭಗಳು ನಮಗಾಗುತ್ತವೆ. ನಮ್ಮ ಕಣ್ಣುಗಳಲ್ಲಿ ವಾತಾವರಣದಲ್ಲಿಯ ಕೊಳಕು ತುಂಬಾ ಕಡಿಮೆ ಬೀಳುತ್ತದೆ ಎನ್ನುವದರ ಜೊತೆಗೆ ಮುಂದೆ ಹೀಗೂ ಹೇಳುತ್ತಾರೆ, ಅದೇನೆಂದರೆ ಯಾವುದೇ ಒಂದು ಕಾರ್ಯಕ್ರಮ ತುಂಬಾ ಹೊತ್ತಿನವರೆಗೆ ನಡೆಯುತ್ತಿದ್ದರೆ ನಾವು ಆ ಸಮಯದಲ್ಲಿ ಸ್ಟೇಜ್ ಮೇಲೆಯೇ ಸ್ವಲ್ಪ ಮಲಗಿ ನಮ್ಮ ನಿದ್ರೆಯನ್ನು ಪೂರ್ಣಗೊಳಿಸಿಕೊಳ್ಳುತ್ತೇವೆ ಎನ್ನುತ್ತಾರೆ.

ಇದೇ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

Leave a Comment

Your email address will not be published. Required fields are marked *