ಶ್ರದ್ಧೆಯಿಂದ ‘ವ್ರತವನ್ನು’ ಮಾಡಲು ಪ್ರತಿ ವರ್ಷ ಸಪ್ತ ಸಮುದ್ರ ದಾಟಿ ರಶಿಯಾದಿಂದ ಭಾರತಕ್ಕೆ ಬರವಳು ‘ಈ’ ವಿದೇಶಿ ಮಹಿಳೆ!

ರಷ್ಯಾದ ಎಲಿನಾರಿಗೆ ಸರಿಯಾಗಿ ಹಿಂದಿಯಾಗಲೀ ಅಥವಾ ಇಂಗ್ಲಿಷ್ ಆಗಲಿ ಅರ್ಥವಾಗುವುದಿಲ್ಲ. ಆದರೆ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪಾಲನೆ ಮಾಡುವ ವಿಷಯದಲ್ಲಿ ಮಾತ್ರ ಎಲಿನಾ ಬಹಳ ಬುದ್ಧಿವಂತೆ ಹಾಗೂ ಆಕೆಗೆ ಈ ವಿಷಯದಲ್ಲಿ ಬಹಳ ಆಸ್ಥೆ ಕೂಡಾ ಇದೆ. ಉತ್ತರ ಭಾರತದಲ್ಲಿನ ಜನರು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುವ ಛಟ್ ಮಹಾಪರ್ವ ಆಚರಣೆಯನ್ನು ಕೂಡಾ ತಿಳಿದುಕೊಂಡಿರುವ ಎಲಿನಾ, ಈ ಹಬ್ಬದ ವೇಳೆಗೆ ಏಳು ಸಮುದ್ರವನ್ನು ದಾಟಿ ಭಾರತಕ್ಕೆ ಬರುತ್ತಾರೆ. ಬಿಹಾರದ ರಾಜಧಾನಿ ಪಾಟ್ನಾ ಬಳಿಯ ಕಂಕಡ್ ಭಾಗ್ ನಲ್ಲಿರುವ ತನ್ನ ಗಂಡನ ಮನೆಗೆ ಬರುವ ಅವರು ಇಲ್ಲಿ 36 ಗಂಟೆಗಳ ನಿರ್ಜಲ ವ್ರತವನ್ನು ಮಾಡಿ ಮಹಾಪರ್ವ ಛಠ್ ಪೂಜೆಯನ್ನು ಆಕೆ ಮಾಡುತ್ತಾರೆ. ಪ್ರಾಚೀನ ಸಂಪ್ರದಾಯಗಳನ್ನು ಪಾಲಿಸುವುದು ತನಗೆ ಬಹಳ ಇಷ್ಟ ಎನ್ನುತ್ತಾರೆ ಎಲಿನಾ.

ಎಲಿನಾ ಮೊದಲು ನಾನು ವ್ರತ ಮಾಡಲು ನಮ್ಮ ಅತ್ತೆಯ ಸಹಾಯವನ್ನು ಪಡೆಯುತ್ತಿದ್ದೆ. ಆದರೆ ಕಳೆದ ವರ್ಷ ಅತ್ತೆಗೆ ಹುಷಾರಿಲ್ಲದೇ ಆದಾಗ ಎಲಿನಾ ತಾನೇ ವ್ರತದ ಎಲ್ಲಾ ಜವಾಬ್ದಾರಿ ವಹಿಸಿಕೊಳ್ಳುವ ನಿರ್ಧಾರವನ್ನು ಮಾಡಿದ್ದು ಮಾತ್ರವೇ ಅಲ್ಲದೇ ಎಲ್ಲವನ್ನೂ ಕೂಡಾ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದರು. ಇನ್ನು ಈ ಬಾರಿ ಕೂಡಾ ಆಕೆ ವ್ರತಾಚರಣೆಗಾಗಿ ರಷ್ಯಾದಿಂದ ಭಾರತಕ್ಕೆ ಬಂದಿದ್ದಾರೆ. ಅತ್ತೆ ಮನೆಯಲ್ಲಿ ಕುಟುಂಬದ ಇತರೆ ಸದಸ್ಯರ ಜೊತೆ ಬೆರೆತು ಮನೆಯನ್ನು ಸ್ವಚ್ಚ ಮಾಡುವ ಕಾರ್ಯ, ಗೋಧಿ ಒಣಗಿಸುವ, ಅಕ್ಕಿ ಮತ್ತು ಬೆಲ್ಲವನ್ನು ಸ್ವಚ್ಚ ಮಾಡುವ ಕಾರ್ಯವನ್ನು ಮುಗಿಸಿದ್ದಾರೆ.

ಇದೇ ಬುಧವಾರ ಮತ್ತು ಗುರುವಾರ ಇರುವ ವ್ರತಗಳ ಆಚರಣೆಗೆ ಎಲಿನಾ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಎಲಿನಾ ಈ ವ್ರತದ ಬಗ್ಗೆ ಮಾತನಾಡುತ್ತಾ ನಾನು ಭಾರತದಲ್ಲಿ ಮದುವೆಯಾಗುವ ಮೊದಲು ಜೀವನದಲ್ಲಿ ಹೀಗೆ ಯಾವುದೇ ವ್ರತಗಳನ್ನು ಕೂಡಾ ಆಚರಣೆ ಮಾಡಿರಲಿಲ್ಲ. ಆದರೆ ಈಗ ಎರಡು ದಿನಗಳ ನಿರ್ಜಲ ವ್ರತವನ್ನು ಮಾಡಲು ನನಗೆ ಯಾವುದೇ ಕಷ್ಟ ಎನಿಸುವುದಿಲ್ಲ, ಉಪವಾಸದ ನಂತರ ಕೂಡಾ ನಾನು ಆರೋಗ್ಯವಾಗಿಯೇ ಇರುತ್ತೇನೆ ಎಂದು ಆಕೆ ಹೇಳಿಕೊಂಡಿದ್ದಾರೆ. ಎಲಿನಾ ನಮ್ಮ ತಂದೆ ತಾಯಿಗಳಿಗೆ ಈ ವ್ರತದ ಆಚರಣೆ ಬಗ್ಗೆ ಏನೂ ತಿಳಿದಿಲ್ಲ ಎನ್ನುತ್ತಾರೆ.

ಅವರಿಗೆ ವ್ರತದ ಬಗ್ಗೆ ತಿಳಿದಿಲ್ಲವಾದರೂ ನಾನು ಅತ್ತೆ ಮನೆಯ ಸಂಪ್ರದಾಯಗಳನ್ನು ಚಾಚೂ ತಪ್ಪದೇ ಪಾಲಿಸುವುದು ಅವರಿಗೆ ಬಹಳ ಸಂತೋಷ ಹಾಗೂ ತೃಪ್ತಿಯನ್ನು ನೀಡಿದೆ ಎಂದು ಖುಷಿಯಾಗಿ ಹೇಳಿಕೊಳ್ಳುತ್ತಾರೆ. ಎಲಿನಾ ಅವರ ಪತಿ ಅನಿಲ್ ಫಿನ್ಲೆಂಡ್ ನ ಗಡಿ ಭಾಗದಲ್ಲಿರುವ ಫೋಡೋಪೋಕಾ ಎಂಬಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದು, ಅವರಿಗೆ ಅಲ್ಲೇ ಎಲಿನಾ ಪರಿಚಯವಾಗಿದ್ದು, ಆರು ವರ್ಷಗಳ ಹಿಂದೆ ಪರಿಚಯವಾದ ಎಲಿನಾರನ್ನು ಅನಿಲ್ ವಿವಾಹ ಮಾಡಿಕೊಂಡರು. ಅದಾದ ನಂತರ ಪ್ರತಿವರ್ಷ ಎಲಿನಾ ಛಠ್ ಪರ್ವ್ ಹಬ್ಬಕ್ಕೆ ಪಾಟ್ನಾಕ್ಕೆ ಬಂದು ವ್ರತ ಆಚರಣೆ ಮಾಡುತ್ತಿದ್ದಾರೆ.

ಅನಿಲ್ ತಮ್ಮ ಪತ್ನಿ ಎಲಿನಾಗೆ ಇಂಗ್ಲೀಷ್ ಅಥವಾ ಹಿಂದಿ ಸರಿಯಾಗಿ ಬರುವುದಿಲ್ಲ. ಆಕೆ ಕೇವಲ ರಷ್ಯನ್ ಭಾಷೆ ಮಾತ್ರ ಚೆನ್ನಾಗಿ ತಿಳಿದಿದ್ದು, ತಮ್ಮ ತಾಯಿ ವ್ರತದ ವಿಧಿ ವಿಧಾನಗಳನ್ನು ಮಾಡುವುದನ್ನು ನೋಡಿ ಎಲಿನಾ ಅದನ್ನು ಅರ್ಥಮಾಡಿಕೊಂಡಿದ್ದಾಳೆ ಎನ್ನುತ್ತಾರೆ. ನನ್ನ ತಾಯಿ ಏನಾದರೂ ಹೇಳಿದಾಗ ನಾನು ಅದನ್ನು ರಷ್ಯನ್ ಭಾಷೆಗೆ ಅನುವಾದ ಮಾಡಿ ಎಲಿನಾಗೆ ಎಲ್ಲವನ್ನು ತಿಳಿಸುತ್ತೇನೆ. ಆಕೆ ಹೇಳಿದ್ದನ್ನು ಬಹಳ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾಳೆ ಎನ್ನುತ್ತಾರೆ. ನಿಜಕ್ಕೂ ಎಲಿನಾಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಇರುವ ಗೌರವಕ್ಕೆ ನಾವು ಕೂಡಾ ಒಂದು ಮೆಚ್ಚುಗೆ ನೀಡೋಣ.