ಸಖತ್ ಪಂಚ್ ಗಳ ಸಾಲಿಡ್ ಜೋಕ್ಸ್ ಗಳು; ನಕ್ಕು ನಕ್ಕು ಶೇರ್ ಮಾಡಿ ಇನ್ನೊಬ್ಬರಿಗೂ ನಗಿಸಿಬಿಡಿ.

ಜೀವನಕ್ಕೆ ನಗುವಿನ ಸಂಜೀವಿನಿ ಆಗಾಗ ಹನಿಸುತ್ತ ಇರಬೇಕು. ಇದರಿಂದ ಜೀವನದಲ್ಲಿ ಮನುಷ್ಯ ರಿಲ್ಯಾಕ್ಸ್ ಆಗಿ ಇರಲು ಸಹಾಯವಾಗುತ್ತದೆ. ನಗು ಮನುಷ್ಯ ಜೀವನದ ಮಹತ್ವದ ಹಾಗೂ ಅಷ್ಟೇ ಅವಶ್ಯಕ ಘಟಕವಾಗಿದೆ. ಇದನ್ನು ಬೇರೆ ಇಟ್ಟು ಜೀವಿಸುವ ಮನುಷ್ಯ ಜೀವಿಗಳು ಅದ್ಹೇಗೆ ಭೂಮಿಯ ಮೇಲೆ ಬದುಕುತ್ತಾರೆ ಗೊತ್ತಿಲ್ಲ. ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ಹಾಗೂ ಮುಖದಲ್ಲಿ ಹಾಸ್ಯವನ್ನು ಅರಳಿಸಲು ಕೆಲವು ಜೋಕ್ಸ್ ಗಳನ್ನು ಈ ಅಂಕಣದಲ್ಲಿ ತಂದಿದ್ದೇವೆ. ಒಮ್ಮೆ ನೋಡಿ. ಈ ಜೋಕ್ಸ್ ಗಳು ನಿಮ್ಮ ಮುಖದ ಮೇಲೆ ಹಾಸ್ಯವನ್ನು ಅರಳಿಸಿದ್ದೇ ಆದರೆ ನಿಮ್ಮ ಮಿತ್ರರಿಗೂ ಈ ಹಾಸ್ಯ ಸಂಜೀವಿನಿ ಶೇರ್ ಮಾಡಿ.

* ಸ್ಟೂಡೆಂಟ್: ಟೀಚರ್, ಮಕ್ಕಳು ಹೇಗೆ ಹುಟ್ಟುತ್ತವೆ?
ಟೀಚರ್: (ತುಂಬಾ ಮುಗ್ದತೆಯಿಂದ) ಯಾವಾಗ ನೀನು ದೊಡ್ಡವನಾಗುತ್ತಿಯಾ, ನಿನ್ನ ಮದುವೆಯಾಗುತ್ತೆ, ಆಗ ಆಕಾಶದಿಂದ ರಾತ್ರಿ ದೇವದೂತೆ ಒಬ್ಬಳು ಬಂದು ನಿನ್ನ ಹೆಂಡತಿಯ ಮಡಿಲಲ್ಲಿ ಪಾಪು ಇಟ್ಟು ಹೋಗುತ್ತಾಳೆ…
ಸ್ಟೂಡೆಂಟ್: ಅಂದ್ರೆ ಮಧುಚಂದ್ರದ ಸಿಸ್ಟಮ್ ಈಗ ಬಂದ್ ಮಾಡಿದ್ದಾರಾ?
ಅನ್ನೋದೇ ತಡ ಟೀಚರ್ ಸ್ಟೂಡೆಂಟ್ ಗೆ ಕೆಳಗೆ ಹಾಕಿ ಗುಮ್ಮಿದರು.

* ಸಂತು ವಕೀಲರಿಗೆ, ಸರ್ ನನ್ನ ಹೆಂಡತಿ ಕಳೆದ ಆರು ತಿಂಗಳಿಂದ ನನ್ನ ಜೊತೆ ಮಾತನಾಡುತ್ತಿಲ್ಲ, ಅದಕ್ಕಾಗಿ ನನಗೆ ವಿಚ್ಛೇದನೆ ಬೇಕು.
ವಕೀಲರು: ನೋಡಪ್ಪ ಸಂತು, ನಿನ್ನ ಹೆಂಡತಿಯ ಜೊತೆ ವಿಚ್ಛೇದನೆ ಪಡೆಯುವ ಮೊದ್ಲು ಒಮ್ಮೆ ಚೆನ್ನಾಗಿ ಯೋಚಿಸು, ಯಾಕೆಂದರೆ ಇಂಥ ಹೆಂಡತಿ ಸಿಗಬೇಕಾದರೆ ನೀನು ಯಾವುದೋ ಜನ್ಮದ ಪುಣ್ಯ ಮಾಡಿರಬೇಕು, ಮೇಲಿಂದ ಮೇಲೆ ಇಂಥ ಆಫರ್ ಸಿಗೋದಿಲ್ಲ.

* ವ್ಯಕ್ತಿಯೊಬ್ಬ ಬಸ್ಸಿನಲ್ಲಿ ಬದಿಗೆ ಕುಳಿತ ಮಹಿಳೆಗೆ ಕೇಳುತ್ತಾನೆ
ವ್ಯಕ್ತಿ: ಮೇಡಂ ನೀವು ಯಾವ ಪರ್ಫ್ಯೂಮ್ ಯೂಸ್ ಮಾಡುತ್ತೀರಾ? ಸ್ಮೆಲ್ ತುಂಬಾ ಚೆನ್ನಾಗಿದೆ ನನ್ನ ಹೆಂಡತಿಗೆ ಕೊಡಬೇಕು ಅಂತ ಇದ್ದೀನಿ.
ಮಹಿಳೆ: ದಯವಿಟ್ಟು ನಿಮ್ಮ ಹೆಂಡತಿಗೆ ಈ ಪರ್ಫ್ಯೂಮ್ ಕೊಡಲೇಬೇಡಿ. ಕಾರಣ ದರಿದ್ರ ನನ್ನ ಮಕ್ಕಳಿಗೆ ನಿಮ್ಮ ಹೆಂಡತಿಯ ಜೊತೆ ಮಾತನಾಡಲು ಒಂದು ನೆಪ ಸಿಗುತ್ತೆ ಅಷ್ಟೇ…

* ಪತಿ-ಪತ್ನಿಯಲ್ಲಿ ತುಂಬಾ ಜೋರಾದ ಜಗಳವಾಯಿತು. ಜಗಳ ಬಗೆ ಹರಿಯದ ಕಾರಣ ಇಬ್ಬರೂ ಕೂಡಿ ದೇವಾಲಯಕ್ಕೆ ಹೋಗಿ ದೇವರಿಗೆ ನ್ಯಾಯ ಬೇಡಿದರು.
ಪತಿ: ಓ ದೇವರೇ, ಒಂದು ವೇಳೆ ನಾನು ತಪ್ಪಾಗಿ ವರ್ತಿಸಿದ್ದರೆ ನನ್ನನ್ನು ಮೇಲೆ ಸೆಳೆದುಕೋ, ನನ್ನ ಪತ್ನಿ ತಪ್ಪಾಗಿ ವರ್ತಿಸಿದ್ದರೆ ಅವಳನ್ನು ಮೇಲೆ ಎಳೆದುಕೊ.
ಪತ್ನಿ: ಓ ದೇವರೇ, ನನ್ನ ಪತಿ ತಪ್ಪಾಗಿ ವರ್ತಿಸಿದ್ದರೆ ಆತನನ್ನು ಮೇಲೇಳೆದುಕೊಂಡು ಬಿಡು, ಒಂದು ವೇಳೆ ತಪ್ಪು ನನ್ನದಾಗಿದ್ದರೆ ನನ್ನನ್ನೇ ವಿಧವೆ ಮಾಡಿಬಿಡು….
ಸದ್ಯ ಪತಿ ಹುಚ್ಚನಾಗಿ ತಿರುಗಾಡುತ್ತಿದ್ದಾನೆ.

* ಭಕ್ತನ ಘೋರ ತಪಸ್ಸಿಗೆ ಮೆಚ್ಚಿ ಭಗವಂತ ಪ್ರತ್ಯಕ್ಷನಾಗಿ ಭಕ್ತನಿಗೆ ಹೇಳುತ್ತಾನೆ,
ಭಗವಂತ: ಭಕ್ತ ನಿನಗೆ ಯಾವ ವರ ಬೇಕು ಕೇಳು, ಕೊಡಲು ತಯಾರಾಗಿದ್ದೇನೆ.
ಭಕ್ತ: ಪ್ರಭು ಭೂಮಿಯಿಂದ ಆಕಾಶದವರೆಗೆ ರೋಡ್ ಮಾಡಿಸಿಬಿಡು.
ಭಗವಂತ: ಭಕ್ತ ಇದು ಅಸಾಧ್ಯವಾದ ಮಾತು, ಬೇರೆ ಏನಾದರೂ ಬೇಡು.
ಭಕ್ತ: ಭಗವಂತ ಹೆಂಡತಿಯರಿಗೆ ಬುದ್ಧಿವಂತೆ, ಸುಶೀಲೆ ಹಾಗೂ ಶಾಂತನನ್ನಾಗಿ ಮಾಡು.
ಭಗವಂತ: ಭಕ್ತ ರೋಡ್ ಸಿಂಗಲ್ ಬೇಕೋ, ಇಲ್ಲ ಡಬಲ್ ಬೇಕೋ.