ಸಣ್ಣ ಆಲೋಚನೆಯಿಂದ ಆರಂಭಿಸಿದ ದೊಡ್ಡ ಬ್ಯುಸಿನೆಸ್, ಅಮೆರಿಕಾದವರೆಗೆ ತಲುಪಿದೆ ಬಹುಬೇಗ ಚಿಪ್ಸ್ ತಯಾರಿಸುವ ಈ ಯಂತ್ರ

ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಬಂದರೆ ಭಾರತದ ಬಹಳಷ್ಟು ಮನೆಗಳಲ್ಲಿ ಜನರು ಉಪ್ಪಿನಕಾಯಿ, ಹಪ್ಪಳ ಹಾಗೂ ವರ್ಷಪೂರ್ತಿ ಉಪಯೋಗಕ್ಕೆ ಬರುವಂತಹ ಚಿಪ್ಸ್ ಗಳನ್ನು ತಯಾರು ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇದಕ್ಕಾಗಿ ಅವರು ಗಂಟೆಗಳ ಕಾಲ ಚಿಪ್ಸ್ ಗಳನ್ನು ಕತ್ತರಿಸಿ, ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ ಚೆನ್ನಾಗಿ ಒಣಗಿದ ಚಿಪ್ಸ್ ಗಳನ್ನು ಡಬ್ಬಗಳಲ್ಲಿ ಸಂಗ್ರಹಿಸಿ ಭದ್ರವಾಗಿ ಇಡುತ್ತಾರೆ. ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆಲೂಗಡ್ಡೆ ಚಿಪ್ಸ್ ಗಳನ್ನು ಉಪವಾಸದ ಸಮಯದಲ್ಲಿ ತಿನ್ನಲು ಬಳಸುತ್ತಾರೆ.
ಆದರೆ ಆಲೂಗಡ್ಡೆ ಚಿಪ್ಸ್ ಮಾಡುವಂತಹ ಸಂದರ್ಭದಲ್ಲಿ ಎಲ್ಲದಕ್ಕಿಂತ ಕಠಿಣವಾದ ಕೆಲಸ ಯಾವುದು ಎನ್ನುವುದಾದರೆ ಅದು ಚಿಪ್ಸ್ ಗಾಗಿ ಆಲೂಗಡ್ಡೆಯನ್ನು ಒಂದೇ ಗಾತ್ರದಲ್ಲಿ ಕತ್ತರಿಸುವುದು. ಇದರ ಹೊರತಾಗಿಯೂ ಮನೆಯಲ್ಲಿ ತರಕಾರಿಗಳನ್ನು ಹಚ್ಚುವ ವಿಷಯದಲ್ಲಿ ಹೆಚ್ಚಿನ ಸಮಯವನ್ನು ಮೀಸಲಿಡುವುದು ಸಾಮಾನ್ಯದ ವಿಷಯವೇ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕೆಲಸವನ್ನು ಸುಲಭವನ್ನಾಗಿ ಮಾಡಲು, ತರಕಾರಿಗಳನ್ನು ಕತ್ತರಿಸುವ ವಿವಿಧ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ತರಕಾರಿಗಳನ್ನು ಕತ್ತರಿಸುವ ಇಂತಹದೇ ಒಂದು ಯಂತ್ರವನ್ನು ರಾಜ್ ಕೋಟ್ ನ ಜಗದೀಶ್ ಬಾರ್ವಾಡಿಯಾ ಅವರು ಸಿದ್ದಪಡಿಸಿದ್ದಾರೆ. ಜಗದೀಶ್ ಅವರು ಒಂದು ಖಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಾರೆ. ಆದರೆ ಅವರು ಮಾತನಾಡುವ ವೇಳೆಯಲ್ಲಿ ಕಂಪನಿಯಲ್ಲಿ ಸಿಗುವ ಸಂಬಳದಿಂದ ಕುಟುಂಬದ ನಿರ್ವಹಣೆಯು ಬಹಳ ಕಷ್ಟದಿಂದ ನಡೆಯುತ್ತಿತ್ತು. ಆದ್ದರಿಂದಲೇ ಅವರು ಸದಾ ತಾನೇ ಯಾವುದಾದರೂ ಒಂದು ಸ್ವಂತ ಕೆಲಸವನ್ನು ಮಾಡಲು ಬಯಸಿದ್ದರು ಎಂದು ಹೇಳಿದ್ದಾರೆ.
2015 ರಲ್ಲಿ ಅವರು ಈ ವಿಚಾರವಾಗಿ ತಮ್ಮ ಮಾವನ ಬಳಿ ಮಾತನಾಡಿದ್ದು ಮಾತ್ರವೇ ಅಲ್ಲದೇ ಅವರಿಂದ ಸಲಹೆಯನ್ನು ಕೇಳಿದರು.

ಜಗದೀಶ ರವರು ಮಾತನಾಡುತ್ತಾ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಮಾವ ಒಂದು ಚಿಪ್ಸ್ ಮಾಡುವ ಯಂತ್ರವನ್ನು ಸಿದ್ಧಪಡಿಸಿದ್ದರು. ಅವರು ಅದರ ಮಾದರಿಯೊಂದನ್ನು ನನಗೆ ತೋರಿಸಿದರು. ಆಗಲೇ ನನಗೆ ಅದೇ ಯಂತ್ರವನ್ನು ಮಾಡುವ ಹಾಗೂ ಅದನ್ನು ಮಾರಾಟ ಮಾಡುವ ಆಲೋಚನೆಯೂ ಮೂಡಿತು. ಗುಜರಾತಿನಲ್ಲಿ ಜನರಿಗೆ ಆಲೂಗಡ್ಡೆ ಚಿಪ್ಸ್ ಗಳನ್ನು ತಿನ್ನುವುದು ಹಾಗೂ ಅವುಗಳನ್ನು ಮನೆಯಲ್ಲೇ ಮಾಡುವುದು ಬಹಳ ಇಷ್ಟವಾದ ಕೆಲಸ. ಆದ್ದರಿಂದ ತಮ್ಮ ಚಿಪ್ಸ್ ಮಿಷನ್ ಗೆ ಒಳ್ಳೆಯ ಬೇಡಿಕೆ ಬರುವುದು ಮಾತ್ರವಲ್ಲದೆ ಜನರಿಗೆ ಬಹಳ ಇಷ್ಟ ಆಗುತ್ತದೆ ಎನ್ನುವ ನಂಬಿಕೆ ಇತ್ತು ಎಂದು ಹೇಳುತ್ತಾರೆ.

ಆಫೀಸ್ ಕೆಲಸ ಮುಗಿಸಿದ ನಂತರ ಬಿಡುವಿನ ವೇಳೆಯಲ್ಲಿ ಹಳೆ ಚಿಪ್ಸಿ ಯಂತ್ರವನ್ನು ಇನ್ನು ಹೊಸರೀತಿಯಲ್ಲಿ ಸುಧಾರಿತ ರೀತಿಯಲ್ಲಿ ಸಿದ್ಧಪಡಿಸುವ ಕೆಲಸವನ್ನು ಜಗದೀಶ್ ಆರಂಭಿಸಿದರು ಕೇವಲ ಹತ್ತನೇ ತರಗತಿಯವರೆಗೆ ಓದಿದ ಅವರಿಗೆ ಬಾಲ್ಯದಿಂದಲೂ ಸಹ ಹೊಸದನ್ನು ಕಲಿಯುವ ಹಾಗೂ ಹೊಸ ಪ್ರಯೋಗಗಳನ್ನು ಮಾಡುವ ಆಸಕ್ತಿಯಿತ್ತು. ಮನೆಯಲ್ಲಿದ್ದ ಚಿಪ್ಸ್ ಮಾಡುವ ಯಂತ್ರದಲ್ಲಿ ಪ್ರತಿಬಾರಿ ಚಿಪ್ಸ್ ಗಾಗಿ ಆಲೂಗಡ್ಡೆಯನ್ನು ಕತ್ತರಿಸುವಾಗ ಕೈಬೆರಳುಗಳನ್ನು ಕತ್ತರಿಸಿಕೊಳ್ಳುವ ಭಯ ಏರುತ್ತಲೇ ಇತ್ತು ಇದೇ ವೇಳೆಯಲ್ಲಿ ಆಟೋಮ್ಯಾಟಿಕ್ ಚಿಪ್ಸ್ ಕಟಿಂಗ್ ಮಷೀನ್ ಬೆಳೆಯುವ ಬಹಳ ದುಬಾರಿಯಾಗಿತ್ತು.

ಜಗದೀಶ್ ಅವರು ಸಿದ್ಧಪಡಿಸಿದ ಯಂತ್ರವು ಹಸ್ತಚಾಲಿತ ವಾಗಿದ್ದು ಮಾತ್ರವೇ ಅಲ್ಲದೆ ಗಂಟೆಗಳ ಕೆಲಸವನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಲು ನೆರವಾಗುತ್ತವೆ. ಈ ಯಂತ್ರದ ವಿನ್ಯಾಸವು ಬಹಳ ಸರಳವಾಗಿದ್ದು ಉಪಯೋಗಿಸುವುದು ಸುಲಭವಾಗಿದೆ. ಇದನ್ನು ಪ್ಲಾಸ್ಟಿಕ್ ಬದಲಾಗಿ ಸ್ಟೀಲ್ ಮತ್ತು ಕಬ್ಬಿಣವನ್ನು ಬಳಸಿ ಸಿದ್ಧಪಡಿಸಲಾಗಿದೆ. ಇದನ್ನು ಕೇವಲ ಚಿಪ್ಸ್ ಗಳನ್ನು ಮಾಡಲು ಮಾತ್ರವೇ ಅಲ್ಲದೇ ಸಲಾಡ್ ಗಳಿಗಾಗಿ ಹಣ್ಣುಗಳನ್ನೂ ಕತ್ತರಿಸಲು ಸಹಾ ಬಳಸಬಹುದಾಗಿದೆ. ಜಗದೀಶ್ ಅವರು ಇದರ ಬಗ್ಗೆ ಹೇಳುತ್ತಾ, ಮಾರ್ಕೆಟ್ ನಲ್ಲಿ ಸಿಗುವಂತಹ ತರಕಾರಿ ಮತ್ತು ಹಣ್ಣುಗಳನ್ನು ಕತ್ತರಿಸುವ ಯಂತ್ರಗಳು ಪ್ಲಾಸ್ಟಿಕ್ ನಿಂದ ಮಾಡಲ್ಪಟ್ಟಿದ್ದು, ಅವು ದೀರ್ಘ ಕಾಲ ಬಾಳಿಕೆ ಬರುವುದಿಲ್ಲ.

ಆದ್ದರಿಂದಲೇ ಜನರು ಸಾಂಪ್ರದಾಯಿಕ ಯಂತ್ರಗಳನ್ನು ಬಳಸಲು ಹೆಚ್ಚಿನ ಒತ್ತನ್ನು ನೀಡುತ್ತಾರೆ. ಆದ್ದರಿಂದಲೇ ನಾನು ತಯಾರಿಸಿದ ಯಂತ್ರವು ಸ್ವಲ್ಪ ಭಾರವಾಗಿರುವುದು ಮಾತ್ರವೇ ಅಲ್ಲದೆ ಜನರಿಗೆ ಅದು ಸಾಂಪ್ರದಾಯಿಕ ಯಂತ್ರದ ಅನುಭವವನ್ನು ನೀಡುತ್ತದೆ ಎನ್ನುತ್ತಾರೆ. 2015 ರಲ್ಲಿ ಅವರು ಯಂತ್ರವನ್ನು ಸಿದ್ಧಪಡಿಸಿ ಮಾರಾಟ ಮಾಡುವ ಆಲೋಚನೆಯನ್ನು ಮಾಡಿದಾಗ ಅವರ ಬಳಿ ಬಂಡವಾಳವನ್ನು ಹೂಡಲು ಹಣ ಇರಲಿಲ್ಲ. ಆಗ ಅವರು ಯಂತ್ರವನ್ನು ಸಿದ್ಧಪಡಿಸಲು ಬೇಕಾಗಿರುವ ಬಿಡಿ ಭಾಗಗಳನ್ನು ಖರೀದಿ ಮಾಡಲು ತಮ್ಮ ಸಹೋದರನೊಬ್ಬರಿಂದ ಹಣವನ್ನು ಸಾಲವಾಗಿ ಪಡೆದರು.

ಸಾಲ ನೀಡಿದ ಆತನನ್ನು ತಮ್ಮ ಪಾಲುದಾರರನ್ನಾಗಿ ಮಾಡಿಕೊಂಡರು. ಆದರೆ ಆರಂಭದ ದಿನಗಳಲ್ಲಿ ಈ ಯಂತ್ರಕ್ಕೆ ಅಷ್ಟೊಂದು ಬೇಡಿಕೆ ಬರಲಿಲ್ಲ, ವ್ಯಾಪಾರದಲ್ಲಿ ಯಾವುದೇ ಲಾಭ ಕಾಣಲಿಲ್ಲ. ಆಗ ಅವರ ಸಹೋದರ ಈ ವ್ಯಾಪಾರವನ್ನು ಮುಚ್ಚುವ ನಿರ್ಧಾರವನ್ನು ಮಾಡಿದರು. ಆದರೆ ಜಗದೀಶ್ ಅವರು ಅದು ತನ್ನ ಆಲೋಚನೆಯಾಗಿದ್ದ ಕಾರಣ ತಾನೊಬ್ಬನೇ ವ್ಯಾಪಾರವನ್ನು ಮುಂದುವರಿಸಲು ನಿರ್ಧರಿಸಿದರು. ಪ್ರಸ್ತುತ ಅವರು ತಮ್ಮ ಅಣ್ಣನ ಜೊತೆಗೆ ಯಂತ್ರವನ್ನು ಜೋಡಿಸುವ ಹಾಗೂ ಮಾರಾಟ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.
ಜಗದೀಶ್ ಅವರು ತಾವು ಸಿದ್ಧಪಡಿಸಿದ ಯಂತ್ರದ ಮಾರ್ಕೆಟಿಂಗ್ ಮಾಡುವುದಕ್ಕಾಗಿ ಗುಜರಾತ್ ರಾಜ್ಯದ ಬಹುತೇಕ ಎಲ್ಲಾ ನಗರಗಳಿಗೂ ಹೋಗಿ ಅಲ್ಲಿನ ಮಿಷನ್ ಡೀಲರ್ ಗಳ ಜೊತೆ ಮಾತುಕತೆ ನಡೆಸಿದರು. ಆದರೆ ಅದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ.

ಕೊನೆಗೆ ಅವರ ಸ್ನೇಹಿತರೊಬ್ಬರು ಸೋಶಿಯಲ್ ಮೀಡಿಯಾ ಮೂಲಕ ಮಾರ್ಕೆಟಿಂಗ್ ಮಾಡುವ ಸಲಹೆಯನ್ನು ನೀಡಿದರು. ಆಗ ಜಗದೀಶ್ ಅವರು ಅದನ್ನೂ ನೋಡೋಣ ಎಂದು ಫೇಸ್ಬುಕ್ ಮತ್ತು ವಾಟ್ಸಾಪ್ ಗಳ ಮೂಲಕ ತಮ್ಮ ಉತ್ಪನ್ನದ ಮಾರ್ಕೆಟಿಂಗ್ ಪ್ರಾರಂಭಿಸಿದರು. ಆಗ ಅವರಿಗೆ ಗುಜರಾತ್ ಮಾತ್ರವೇ ಅಲ್ಲದೆ ದೇಶದ ವಿವಿಧ ಭಾಗಗಳಿಂದ ಚಿಪ್ಸ್ ಕತ್ತರಿಸುವ ಯಂತ್ರ ಕ್ಕಾಗಿ ಬೇಡಿಕೆ ಬಂದಿತು. ಕಳೆದ ವರ್ಷ ಕೊರೋನಾ ಕಾರಣದಿಂದ ವ್ಯಾಪಾರ ಅಷ್ಟೇನೂ ಚೆನ್ನಾಗಿರಲಿಲ್ಲ ಎನ್ನುವ ಜಗದೀಶ್ ಅವರು, ಈ ವರ್ಷ ದೇಶದ ವಿವಿಧ ಭಾಗಗಳಿಂದ ಆನ್ಲೈನ್ನಲ್ಲಿ ಬಹಳಷ್ಟು ಆರ್ಡರ್ ಗಳು ಬಂದಿವೆ ಎಂದು ಹೇಳುತ್ತಾರೆ.

ಜಗದೀಶ್ ಅವರ ಈ ಚಿಪ್ಸ್ ಕತ್ತರಿಸುವ ಯಂತ್ರ ವನ್ನು ಸೀತಾರಾಮ ಬ್ರಾಂಡ್ ನ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಚಿಪ್ಸ್ ಮತ್ತು ಕುರುಕು ತಿಂಡಿಗಳನ್ನು ಸಿದ್ಧಪಡಿಸಿ ಮಾರಾಟಮಾಡುವ ಮನಿಷಾ ಎನ್ನುವ ಮಹಿಳೆಯೊಬ್ಬರು ಜಗದೀಶ್ ಅವರಿಂದ ಯಂತ್ರವನ್ನು ಖರೀದಿ ಮಾಡಿದ್ದು, ಆಕೆ ಮಾತನಾಡುತ್ತಾ, ಮೊದಲು 50 ಕಿಲೋ ಗ್ರಾಂ ಚಿಪ್ಸ್ ತಯಾರು ಮಾಡಲು ಒಂದು ಇಡೀ ದಿನವನ್ನು ಬಳಸುತ್ತಿದ್ದೆವು. ಆದರೆ ಈಗ ಜಗದೀಶ್ ಅವರು ಸಿದ್ದಪಡಿಸಿರುವ ಯಂತ್ರದಿಂದ 50 ಕಿಲೋಗ್ರಾಂ ಚಿಪ್ಸ್ ಕತ್ತರಿಸಲು ಕೇವಲ ಎರಡು ಗಂಟೆಗಳ ಅವಧಿ ಸಾಕು,‌ ಅಲ್ಲದೇ ಚಿಪ್ಸ್ ಕತ್ತರಿಸುವ ಕೆಲಸ ಕೂಡ ಸುಲಭವಾಗಿ ನಡೆಯುತ್ತದೆ ಎಂದು ಮೆಚ್ಚುಗೆ ಸೂಚಿಸುತ್ತಾರೆ.

ಮುಂಬರುವ ದಿನಗಳಲ್ಲಿ ಜಗದೀಶ್ ಅವರು ಸಣ್ಣಪುಟ್ಟ ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುವವರಿಗಾಗಿ ಅವರ ಕೆಲಸವನ್ನು ಸುಲಭ ಮಾಡುವ ಯಂತ್ರಗಳನ್ನು ಸಿದ್ಧಪಡಿಸುವ ಆಲೋಚನೆಯನ್ನು ಹೊಂದಿದ್ದಾರೆ. ಜಗದೀಶ್ ಅವರು ಅವರು ಎಲ್ಲಾ ರೀತಿಯ ತರಕಾರಿಗಳನ್ನು ಹಚ್ಚುವ ಒಂದು ಯಂತ್ರವನ್ನು ಸಿದ್ಧಪಡಿಸುವ ಆಲೋಚನೆಯನ್ನು ಸಹಾ ಹೊಂದಿದ್ದು, ತರಕಾರಿ ಮತ್ತು ಸಲಾಡ್ ಗಳಿಗೆ ಒಂದೇ ಯಂತ್ರ ಇದ್ದರೆ ಚೆನ್ನ ಎನ್ನುತ್ತಾರೆ. ಇಂತಹ ಯಂತ್ರವೊಂದನ್ನು ಕಂಡುಹಿಡಿದರೆ ಅದರಿಂದ ಬಹಳಷ್ಟು ಸಮಯ ಉಳಿಯುತ್ತದೆ ಹಾಗೂ ಶ್ರಮ ಕೂಡ ತಗ್ಗುತ್ತದೆ ಎಂದು ಅವರು ಹೇಳುತ್ತಾರೆ.