ಸನಾತನ ಧರ್ಮದ ಬಗ್ಗೆ ನನಗೆ ಕಲಿಸಬೇಡಿ: ತನ್ನ ಬೋಲ್ಡ್ ಡ್ರೆಸ್ ಬಗ್ಗೆ ಕೊಂಕು ಮಾಡಿದವರಿಗೆ ಖಡಕ್ ಉತ್ತರ ನೀಡಿದ ಕಂಗನಾ

ಬಾಲಿವುಡ್ ನಲ್ಲಿ ವಿವಾದ ಮತ್ತು ನಟಿ ಎಂದಾಕ್ಷಣ ಕಣ್ಣುಮುಂದೆ ಕಂಗನಾ ರಣಾವತ್ ಅವರು ಬಂದು ನಿಲ್ಲುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಅವರಿಂದ ಮತ್ತೊಂದು ವಿವಾದ ಭುಗಿಲೆದ್ದಿದೆ. ಅದಕ್ಕೆ ಕಾರಣ ಅವರು ತೊಟ್ಟುಕೊಂಡಿರುವ ಬೋಲ್ಡ್ ಡ್ರೆಸ್. ಕಂಗನಾ ಅವರ ಹೊಸ ಚಿತ್ರ ಧಾಕಡ್ ಶೂಟಿಂಗ್ ಪೂರ್ಣಗೊಂಡಿದೆ. ಇದರ ಚಿತ್ರೀಕರಣ ಬುಡಾಪೆಸ್ಟ್ ನಲ್ಲಿ ನಡೆದಿತ್ತು. ಚಿತ್ರೀಕರಣ ಪೂರ್ಣಗೊಂಡ ಖುಷಿಯಲ್ಲಿ ಒಂದು ಪಾರ್ಟಿ ಅರೇಂಜ್ ಮಾಡಿದ್ದರು. ಪ್ರಸ್ತುತ ಪಾರ್ಟಿಯಲ್ಲಿ ಕಂಗನಾ ಅವರು ಕೊರ್ಸೆಟ್ ಬ್ರಾಲೆಟ್ ಮತ್ತು ಪ್ಯಾಂಟ್ ಧರಿಸಿದ್ದರು.

ಅತ್ಯಂತ ಪಾರದರ್ಶಕವಾಗಿ ಕಂಡುಬರುತ್ತಿರುವ ಈ ಉಡುಪನ್ನು ತೊಟ್ಟು ಕಂಗನ ಅವರು ಫೋಟೋಶೂಟ್ ಮಾಡಿಕೊಂಡು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು. ತದನಂತರ ಕಂಗನಾ ಅವರಿಗೆ ಈ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಯೂಜರ್ಸ್ ಗಳು ಟ್ರೋಲ್ ಮಾಡಲು ಶುರುಮಾಡಿದರು. ಕಂಗನಾ ಅವರು ಶೇರ್ ಮಾಡಿದ ಈ ಫೋಟೋ ನೋಡಿ ನೆಟ್ಟಿಗರು ಭಾರತೀಯ ಸಂಸ್ಕೃತಿಯ ಅವಮಾನ ಮಾಡಿದ್ದಾರೆ ಎಂದು ತಮ್ಮ ಭಾವನೆಗಳನ್ನು ವ್ಯಕ್ತ ಮಾಡುತ್ತಿದ್ದಾರೆ.

ಟ್ರೋಲರ್ಸ್ ಗಳಿಗೆ ಕಂಗನಾ ನೀಡಿದರು ತಿರುಗೇಟು…

ಬೋಲ್ಡ್ ಫೋಟೋದಿಂದಾಗಿ ಟ್ರೋಲ್ ಆದನಂತರ ಸುಮ್ಮನೆ ಕುಳಿತುಕೊಂಡರೆ ಅವಳು ಕಂಗನಾಳೆ ಅಲ್ಲ, ಅಲ್ವಾ? ಕಂಗನಾ ಅವರು ಸಹ ಟ್ರೋಲರ್ಸ್ ಗಳಿಗೆ ತಿರುಗೇಟು ನೀಡಿದ್ದಾರೆ. ಕಂಗನಾ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ಮುಖಾಂತರ ಪ್ರಾಚೀನ ಕಾಲದಲ್ಲಿಯ ಒಂದು ಯುವತಿಯ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟಿನ ಜೊತೆಗೆ ಹೀಗೆ ಬರೆದಿದ್ದಾರೆ, ‘ಯಾರು ನನಗೆ ಸನಾತನ ಧರ್ಮದ ಬಗ್ಗೆ ಪಾಠ ಕೊಡುತ್ತಿದ್ದಾರೆ ಅವರು ದಯವಿಟ್ಟು ಒಂದು ಗಮನದಲ್ಲಿಡಿ ನೀವು ಅಬ್ರಹ್ಮಿಕ್ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ’.

ಟ್ರೋಲರ್ಸ್ ಗಳು ಏನಂದಿದ್ದಾರೆ ನೋಡಿ…

ಕಂಗನಾ ಅವರ ಈ ಬೋಲ್ಡ್ ರೂಪದಲ್ಲಿಯ ಫೋಟೋಗಳನ್ನು ನೋಡಿ ಅನೇಕ ಯೂಸರ್ಸ್ ಗಳು ತಮ್ಮ ಭಾವನೆಯನ್ನು ಈ ರೀತಿ ವ್ಯಕ್ತ ಮಾಡಿದ್ದಾರೆ… ಓದಿ.

  • ವಿದೇಶಕ್ಕೆ ಹೋದ ನಂತರ ಭಾರತೀಯ ಸಂಸ್ಕೃತಿಯನ್ನು ಮರೆತು ಬಿಟ್ಟಿಯಾ?
  • ಸ್ವದೇಶಕ್ಕೆ ಮರಳಿದ ನಂತರ ಧರ್ಮ ಸಭ್ಯತೆ ನಡೆನುಡಿಯ ಬಗ್ಗೆ ಎಲ್ಲರಿಗೂ ಜ್ಞಾನ ನೀಡುವೆಯಾ ಅಕ್ಕ?
  • ನೀನಂತೂ ಯಾವತ್ತು ಇನ್ನೊಬ್ಬರು ಯಾವ ರೀತಿಯ ಉಡುಪುಗಳನ್ನು ತೊಟ್ಟಿದ್ದಾರೆಂದು ಅನಾವಶ್ಯಕವಾಗಿ ಸಲಹೆಗಳನ್ನು ನೀಡುತ್ತಿ ಈಗ ಸ್ವತಃ ನೀನೆ ಎಂಥ ಉಡುಪನ್ನು ತೊಟ್ಟಿರುವಿ?
  • ಕಂಗನಾ ನಿನ್ನಿಂದ ನಾವು ಈ ರೀತಿಯ ಅಪೇಕ್ಷೆಯನ್ನು ಇಟ್ಟಿರಲಿಲ್ಲ. ನೀನು ನಿಜಕ್ಕೂ ತುಂಬಾ ಅಶ್ಲೀಲವಾದ ಉಡುಪು ಧರಿಸಿರುವೆ.
  • ಈ ರೀತಿಯ ಫೋಟೋ ನೀನು ಪೋಸ್ಟ್ ಮಾಡಬಾರದಾಗಿತ್ತು. ಕಾರಣ ನೀನು ನಮ್ಮ ರೋಲ್ ಮಾಡೆಲ್ ಆಗಿರುವಿ.

ಕಂಗನಾ ಅವರ ಈ ರೀತಿಯ ಬೋಲ್ಡ್ ಲುಕ್ ನೋಡಿ ಅನೇಕರು ಶಾಕ್ ಆಗಿದ್ದಾರೆ.

ಕಂಗನಾ ಅವರ ಮುಂಬರುವ ಚಿತ್ರಗಳ ಬಗ್ಗೆ ಹೇಳುವುದಾದರೆ, ‘ಧಾಕಡ್’ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನದ ಮೇಲೆ ಆಧಾರಿತವಾದ ‘ತಲೈವಿ’ ಈ ಎರಡು ಚಿತ್ರಗಳು ತೆರೆ ಕಾಣಲು ಸಿದ್ಧತೆ ನಡೆಸಿವೆ.