ಸಲಿಂಗ ವಿವಾಹವಾದ ಸೋದರ ಸಂಬಂಧಿ ಯುವತಿಯರು: ಅಂತಾರೆ, “ಲೆಸ್ಬಿಯನ್ ಗಳಾಗಿರುವುದಕ್ಕೆ ಬೇಸರವಿಲ್ಲ!”

ನಮ್ಮ ಭಾರತವೊಂದು ಸಂಪ್ರದಾಯಬದ್ಧ ದೇಶವಾಗಿದ್ದು, ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದ ಅವಿಭಾಜ್ಯ ಅಂಗವಾಗಿರುವ ವಿವಾಹಗಳಿಗೆ ವಿಶೇಷವಾದ ಧಾರ್ಮಿಕ ಮಹತ್ವ ಇದೆ. ಅಲ್ಲದೆ ಆಧುನಿಕ ವಿಚಾರಧಾರೆಗಳು ಇನ್ನು ಕೂಡ ಸಂಪ್ರದಾಯವಾದಿಗಳಿಗೆ ಅರಗಿಸಿಕೊಳ್ಳುವುದು ಕಠಿಣ ಎನ್ನುವಂತಹ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ದೇಶ ಎಷ್ಟೇ ಆಧುನಿಕತೆಯ ಕಡೆಗೆ ಮುಖ ಮಾಡಿದ್ದರೂ ಕೂಡ ಇಂದಿಗೂ ಕೆಲವು ವಿಚಾರಗಳಲ್ಲಿ ನಾವು ಸಂಪ್ರದಾಯ ಮೀರಿ ನಡೆಯಲು ಇಷ್ಟಪಡುವುದಿಲ್ಲ. ಅಂತಹ ವಿಚಾರಗಳಲ್ಲಿ ಒಂದು ಸ ಲಿಂ ಗ ಸಂಬಂಧಗಳು. ವಿದೇಶಗಳಲ್ಲಿ ಇದು ಸಾಮಾನ್ಯ ಎನಿಸಿದ್ದರೂ ಕೂಡಾ ಭಾರತದ ಮಟ್ಟಿಗೆ ಮಾತ್ರ ಇದು ಇನ್ನೂ ಕೂಡ ಸಮಾಜ ಮುಕ್ತವಾಗಿ ಒಪ್ಪಿಕೊಳ್ಳಲಾಗದ ವಿಷಯವೇ ಆಗಿದೆ. ಇಂತಹ ಪರಿಸ್ಥಿತಿಯ ನಡುವೆಯೇ ಇಬ್ಬರು ಯುವತಿಯರು ಸ ಲಿಂ ಗ ವಿವಾಹದ ಮೂಲಕ ಹೊಸ ಜೀವನವನ್ನು ಆರಂಭಿಸಿದ್ದಾರೆ.

ಜಾರ್ಖಂಡ್ ನ ರಾಜಧಾನಿ ರಾಂಚಿಯಿಂದ ಸುಮಾರು 160 ಕಿಲೋಮೀಟರ್ ದೂರದಲ್ಲಿರುವ ಕೊಡರ್ಮ ಜಿಲ್ಲೆಯಲ್ಲಿ ಇಬ್ಬರು ಸ ಲಿಂ ಗಿಗಳಾದ ಹುಡುಗಿಯರು ಅಂದರೆ ಲೆಸ್ಬಿಯನ್ ಜೋಡಿ ವಿವಾಹ ಮಾಡಿಕೊಂಡು, ವೈವಾಹಿಕ ಜೀವನದ ಮೂಲಕ ಹೊಸ ಜೀವನವನ್ನು ಆರಂಭಿಸಿದ್ದಾರೆ. ಈ ಜೋಡಿಯು ಕುಟುಂಬ ಸಂಬಂಧದಲ್ಲಿ ಸೋದರಸಂಬಂಧಿಗಳಾಗಿದ್ದಾರೆ. ಅಲ್ಲದೆ ಕಳೆದ ಐದು ವರ್ಷಗಳಿಂದಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಯುವತಿಯರಿಬ್ಬರು ಜುಮ್ರಿತಲ್ಲಯ್ಯ ನಿವಾಸಿಗಳಾಗಿದ್ದು ಈಗ ಮದುವೆಯ ನಂತರ ಬೇರೊಂದು ನಗರದಲ್ಲಿ ವಾಸಮಾಡಲು ಬಯಸುತ್ತಿದ್ದಾರೆ.

ಸಲಿಂಗ ವಿವಾಹ ಆಗಿರುವ ಕಾರಣ ಇವರು ತಮ್ಮ ಈ ವಿವಾಹದ ನಂತರ ಸ್ಥಳೀಯವಾಗಿ ಸಮಸ್ಯೆಗಳು ಎದುರಾದರೆ ಕಷ್ಟ, ತಾವು ಶಾಂತಿಯುತ ಜೀವನವನ್ನು ನಡೆಸಲು ಬಯಸಿರವುದರಿಂದ, ತಮ್ಮ ಹೊಸ ಜೀವನವನ್ನು ಬೇರೊಂದು ಊರಿನಲ್ಲಿ ಆರಂಭಿಸಲು ಈ ಯುವತಿಯರು ಬಯಸಿದ್ದಾರೆ. ವಿವಾಹವಾಗಿರುವ ಯುವತಿಯರಲ್ಲಿ ಒಬ್ಬಳ ವಯಸ್ಸು 24 ಆಗಿದ್ದರೆ, ಮತ್ತೊಬ್ಬ ಯುವತಿಯ ವಯಸ್ಸು 20 ಎನ್ನಲಾಗಿದೆ. ಒಬ್ಬ ಯುವತಿ ಪದವಿ ಶಿಕ್ಷಣವನ್ನು ಮುಗಿಸಿದ್ದು, ಮತ್ತೊಬ್ಬಳು ಇಂಟರ್ ಪರೀಕ್ಷೆಯನ್ನು ಪಾಸ್ ಮಾಡಿದ್ದಾಳೆಎನ್ನಲಾಗಿದೆ. ಈ ಜೋಡಿಯು ತಮಗೆ ಎಂತಹುದೇ ಸಮಸ್ಯೆ ಎದುರಾದರೂ ಕೂಡ ಅದನ್ನು ದಿಟ್ಟವಾಗಿ ಎದುರಿಸಲು ಸಿದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಅಲ್ಲದೇ ತಾವು ಲೆಸ್ಬಿಯನ್ ಜೋಡಿ ಎಂದು ಹೇಳಿಕೊಳ್ಳಲು ಅ ವ ಮಾ ನ ಪಡುವುದಿಲ್ಲ ಎಂದು ಕೂಡ ಹೇಳಿದ್ದಾರೆ. ತಮ್ಮ ನಡುವಿನ ಈ ಸಂಬಂಧದ ಬಗ್ಗೆ ಯುವತಿಯರಿಬ್ಬರೂ ಕೂಡಾ ತಮ್ಮ ಎರಡು ಕುಟುಂಬದಲ್ಲಿ ಯಾರಿಗೂ ಕೂಡ ಇದುವರೆವಿಗೂ ಮಾಹಿತಿಯನ್ನು ನೀಡಿಲ್ಲ. ಆದರೆ ಕೆಲಕಾಲದಿಂದ ಇವರಿಬ್ಬರೂ ಕೂಡಾ ಲಿವಿನ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ಕಳೆದ ನವೆಂಬರ್ 8 , 2020 ರಂದು ಕೊಡರ್ಮಾ ಜಿಲ್ಲೆಯ ಶಿವ ಮಂದಿರ ಒಂದರಲ್ಲಿ ಇಬ್ಬರೂ ಮದುವೆ ಕೂಡಾ ಮಾಡಿಕೊಂಡಿದ್ದಾರೆ. ಇವರ ಮದುವೆಯ ವಿಷಯ ಕೂಡಾ ಇನ್ನು ಅವರ ಮನೆಗಳಲ್ಲಿ ತಿಳಿದಿಲ್ಲ ಎನ್ನಲಾಗಿದೆ. ಈ ಜಿಲ್ಲೆಯಲ್ಲಿ ಎಲ್ಲಿ ಇದು ಮೊದಲನೆಯ ಸಲಿಂಗ ವಿವಾಹ ಎನ್ನಲಾಗಿದೆ.

ಈ ಜೋಡಿಯು ತಮ್ಮ ಸಂಬಂಧ ಹಾಗೂ ವಿವಾಹದ ಕುರಿತಾಗಿ ಮಾತನಾಡುತ್ತಾ, ಭಾರತದಲ್ಲಿ ಕೂಡ ಈಗ ಸ ಲಿಂ ಗ ಸಂಬಂಧ ಕಾನೂನಿನ ಪ್ರಕಾರ ಮಾನ್ಯತೆಯನ್ನು ಪಡೆದಿರುವುದು ತಮಗೆ ತಿಳಿದಿದೆ ಎಂದಿರುವುದು ಮಾತ್ರವಲ್ಲದೇ ತಮ್ಮ ಇಂತಹ ಒಂದು ಸಂಬಂಧಕ್ಕೆ ನ್ಯೂಯಾರ್ಕ್ ನ ಸಲಿಂಗ ಜೋಡಿಯಾದ ಅಂಜಲಿ ಚಕ್ರವರ್ತಿ ಹಾಗೂ ಸೂಫಿ ಸ್ಯಾಂಡಲ್ಸ್ ಅದರಿಂದ ಪ್ರೇರಣೆ ಆಗಿರುವುದಾಗಿ ಹೇಳಿದ್ದಾರೆ. ಒಟ್ಟರೆ ಲೆಸ್ಬಿಯನ್ ವಿವಾಹ ಆಗಿರುವ ಈ ಯುವತಿಯರ ಧೈರ್ಯಕ್ಕೆ ಏನು ಹೇಳಬೇಕೋ ತಿಳಿಯದಾದರೂ, ಅವರ ಮುಂದೆ ಸಾಕಷ್ಟು ಸವಾಲುಗಳು ಮಾತ್ರ ಖಂಡಿತ ಇದೆ.