Articles

Video; ಕ್ಷಣದಲ್ಲಿ ಒಂದು ಜೀವ ಉಳಿಸಿದ ಡ್ಯಾಶಿಂಗ್ ಮಹಿಳೆ ! ಈಕೆಯ ಪೂರ್ವಾನುಮಾನಕ್ಕೆ ನೆಟ್ಟಿಗರ ಉಘೇ ಉಘೇ…

ಕೆಲವೊಂದು ಸಲ ಅನೇಕ ವಿಚಿತ್ರ ಹಾಗೂ ನಡೆಯ ಬಾರದ ಘಟನೆಗಳು ನಮ್ಮ ಕಣ್ಣುಗಳ ಮುಂದೆಯೇ ನಡೆಯುತ್ತಿದ್ದರೂ ಅವುಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದೇ ತಿಳಿಯುವುದಿಲ್ಲ. ಅಂಥ ಸಂದರ್ಭದಲ್ಲಿ ಅಷ್ಟೊಂದು ಗಾಬರಿಯಾಗಿ ಬಿಡುತ್ತಾನೆ ಮನುಷ್ಯ. ಆದರೆ ಕೆಲವರು ಮಾತ್ರ ಅಂಥ ಸಮಯದಲ್ಲಿ ತುಂಬಾ ಚಾತುರ್ಯದಿಂದ ವರ್ತಿಸಿ ಒಮ್ಮೆಲೇ ದೇವರಂತೆ ದೊಡ್ಡ ಮನುಷ್ಯರಾಗಿ ಬಿಡುತ್ತಾರೆ.

ಸದ್ಯ ಇಲ್ಲಿ ನೋಡುವ ವಿಡಿಯೋ ಒಂದು ಇದೇ ರೀತಿಯದ್ದಾಗಿದೆ. ಇಲ್ಲಿ ವ್ಯಕ್ತಿಯೊಬ್ಬ ರೇಲ್ವೆ ಪ್ಲಾಟ್ ಫಾರ್ಮ್ ಮೇಲೆ ಸುತ್ತಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ಆತ ತುಂಬಾ ಟೆನ್ಶನ್ ನಲ್ಲಿರುವದು ಗೊತ್ತಾಗುತ್ತಿದೆ. ಮತ್ತು ಫೋನ್ ನಲ್ಲಿ ಯಾರ ಜೊತೆಗಾದರೂ ತುಂಬಾ ಸಿಟ್ಟಿನಲ್ಲಿ ಮಾತನಾಡುವುದು ಕಂಡು ಬರುತ್ತಿದೆ. ಏತನ್ಮಧ್ಯೆ ಯುವತಿಯೊಬ್ಬಳು ತನ್ನ ಸಂಗಡಿಗನೊಂದಿಗೆ ಅಲ್ಲಿಂದಲೇ ಹೋಗುತ್ತಿರುವಾಗ ಆ ವ್ಯಕ್ತಿಯ ಮೇಲೆ ಒಂದು ಕಣ್ಣು ಇಟ್ಟಿದ್ದಾಳೆ. ಆತನನ್ನೇ ನೋಡುತ್ತಾ ಸ್ವಲ್ಪ ಮುಂದೆ ಹೋದರೂ ಆಕೆಗೆ ಎನೋ ಅನುಮಾನ ಮೂಡಿದಂತಾಗಿ ಮತ್ತೆ ಮರಳಿ ಆ ವ್ಯಕ್ತಿಯ ಹತ್ತಿರ ಬರುತ್ತಲೇ ಆಕೆ ಮನದಲ್ಲಿ ಎಣಿಸಿದ್ದೇ ನಡೆಯಬೇಕೆ? ಪ್ರಸ್ತುತ ಆ ಒತ್ತಡದಲ್ಲಿದ್ದ ಮನುಷ್ಯ, ಬರುತ್ತಿರುವ ಟ್ರೈನ್ ಗೆ ತನ್ನನ್ನೇ ಬಲಿ ಕೊಡಲು ಯತ್ನಿಸಿದ್ದಾನೆ. ಆದರೆ ಆ ಯುವತಿ ಇದನ್ನು ಮೊದಲೇ ಗ್ರಹಿಸಿದ್ದರಿಂದ ಅಥವಾ ಅರಿತಿದ್ದರಿಂದ ಆಕೆ ತುಂಬಾ ತಯಾರಿಯಲ್ಲಿಯೇ ಇದ್ದಳು ಎನ್ನೋ ಹಾಗೆ ಕ್ಷಣದಲ್ಲಿ ಆತನನ್ನು ಕೈಹಿಡಿದು ಆಚೆಗೆ ಸರಿಸಿಕೊಂಡಿದ್ದಾಳೆ ಮತ್ತು ಆತನ ಜೀವ ಉಳಿಸಿದ್ದಾಳೆ.

ನೋಡಿ ಈ ವಿಡಿಯೋ…

 

View this post on Instagram

 

A post shared by アブベイ (@efx_aesth4u)

ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ efx.aesth4u ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಸುಮಾರು 2.3 ಮಿಲಿಯನ್ ವರೆಗೆ ವೀಕ್ಷಣೆಯನ್ನು ಪಡೆದಿದೆ. ಅಷ್ಟೇ ಅಲ್ಲ ಈ ವಿಡಿಯೋವನ್ನು 2 ಲಕ್ಷ 27 ಸಾವಿರ ಜನರು ಲೈಕ್ ಮಾಡಿದ್ದಾರೆ.

Leave a Comment

Your email address will not be published. Required fields are marked *