Articles

ತಾಯಿಯ ಏಟುಗಳಿಂದ ಅಣ್ಣನಿಗೆ ಬಚಾವ್ ಮಾಡುತ್ತಿರುವ ಪುಟ್ಟ ತಂಗಿಯ ಪ್ರೀತಿಯ ವಿಡಿಯೋ.

ಅಣ್ಣ-ತಂಗಿಯ ಪ್ರೀತಿಗೆ ಬೆಲೆ ಕಟ್ಟಲು ಆಗುವುದಿಲ್ಲ. ಅಕ್ಷರ ರೂಪದಲ್ಲಿ ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ತಂಗಿಯ ಪಾಲಿಗೆ ಅಣ್ಣ ಎಲ್ಲವೂ ಆಗಿರುತ್ತಾನೆ. ಅವಳ ನೋವಿಗೆ ಮಿಡಿಯುತ್ತಾನೆ, ಕಣ್ಣೀರಿಗೆ ಬೆರಳುಗಳಾಗುತ್ತಾನೆ. ಸುಖದಲ್ಲಿ ನಕ್ಕು, ದುಃಖದಲ್ಲಿ ಸಾಂತ್ವನದ ನುಡಿಗಳಾಡುತ್ತಾನೆ. ಹಾಗೆಯೇ ಅಣ್ಣನ ಪಾಲಿಗೆ ತಂಗಿಯೂ ಸಹ ಸರ್ವಸ್ವವಾಗಿರುತ್ತಾಳೆ.

ಸದ್ಯ ಈ ಅಣ್ಣ-ತಂಗಿಯ ಪ್ರೀತಿ, ವಾತ್ಸಲ್ಯವನ್ನು ತೋರಿಸುವ ಮುದ್ದಾದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಣ್ಣನಿಗಾಗಿ ತಂಗಿಯು ಹೇಗೆ ಮಿಡಿಯುತ್ತಿದ್ದಾಳೆ ಎಂಬುದನ್ನು ನೋಡಬಹುದು. ಇಲ್ಲಿ ತಾಯಿಯು ಅಣ್ಣನಿಗೆ ಬೇಕೆಂತಲೇ ಹೊಡೆಯುವ ನಾಟಕ ಮಾಡುತ್ತಿದ್ದಾಳೆ. ಆದರೆ ಅಲ್ಲಿಯೇ ನಿಂತು ನೋಡುತ್ತಿದ್ದ ತಂಗಿಗೆ ಇದನ್ನು ನೋಡುವದು ಆಗುವದಿಲ್ಲ. ಆಗ ಆಕೆ ತನ್ನ ಅಣ್ಣನನ್ನು ತಾಯಿಯ ಏಟುಗಳಿಂದ ಬಚಾವ್ ಮಾಡಲು ಮುಂದಾಗುತ್ತಾಳೆ ಅದು ಸಿಟ್ಟಿನಿಂದ. ಇಲ್ಲಿ ತಾಯಿಗೆ ಮಗಳು ಗದರಿಸುವದೂ ಉಂಟು.

ನೋಡಿ ಅಣ್ಣ-ತಂಗಿಯ ಪ್ರೀತಿಯ ವಿಡಿಯೋ..

 

View this post on Instagram

 

A post shared by Deepak Vetal (@deepakvetal9538)

ಪ್ರಸ್ತುತ ಈ ವಿಡಿಯೋ ನೆಟ್ಟಿಗರಿಗೆ ತುಂಬಾನೇ ಇಷ್ಟವಾದ ಕಾರಣ ಈ ವಿಡಿಯೋ ಇಲ್ಲಿಯವರೆಗೆ 4.5 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಅಷ್ಟೇ ಅಲ್ಲ ಈ ವಿಡಿಯೋ 3 ಲಕ್ಷ 43 ಸಾವಿರ ಜನರು ಲೈಕ್ ಸಹ ಮಾಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ Deepakvetale538 ಹೆಸರಿನ ಐಡಿಯಿಂಡ ಶೇರ್ ಮಾಡಲಾಗಿದೆ.

Leave a Comment

Your email address will not be published. Required fields are marked *