ಸಾರಾ ತೆಂಡುಲ್ಕರ್ ಮತ್ತು ಶುಭಮನ್ ಬ್ರೇಕ್ ಅಪ್ ಸೋಶಿಯಲ್ ಮೀಡಿಯಾದಲ್ಲಿ ಶುಭಮನ್ ಶೇರ್ ಮಾಡಿದರು ಈ ಪೋಸ್ಟ್….

ಭಾರತ ತಂಡದ ಓಪನಿಂಗ್ ಬ್ಯಾಟ್ಸ್ ಮನ್ ಶುಭಮನ್ ಗಿಲ್ ಅವರು ಸದ್ಯ ವರ್ಲ್ಡ್ ಕಪ್ ನಲ್ಲಿ ಭಾರತ ತಂಡದಲ್ಲಿ ಆಡುತ್ತಿಲ್ಲವಾದರೂ ಆಕಸ್ಮಿಕವಾಗಿ ಬೇರೆ ಕಾರಣಕ್ಕಾಗಿ ಸುದ್ದಿಯಲ್ಲಿ ಬಂದಿದ್ದಾರೆ.

ದುಬೈನಲ್ಲಿ ನಡೆಯುತ್ತಿರುವ ವರ್ಲ್ಡ್ ಕಪ್ ಸಲುವಾಗಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಲಿಲ್ಲ. ಐಪಿಎಲ್ 14 ನೇ ಹಂಗಾಮಿನ ನಂತರ ಶುಭಮನ್ ಭಾರತಕ್ಕೆ ಮರಳಿದರು. ಸದ್ಯ ಅವರು ತಮ್ಮ ಕುಟುಂಬದ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಇಂಥದ್ದರಲ್ಲಿ ಶುಭಮನ್ ಅವರ ಒಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮಗಳಾದ ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಅವರ ಬ್ರೇಕ್ ಅಪ್ ಸುದ್ದಿ ಹಬ್ಬಿದೆ. ಅದಕ್ಕೆ ಕಾರಣ ಶುಭಮನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಒಂದು ಪೋಸ್ಟ್.

ಶುಭಮನ್ ಮತ್ತು ಸಾರಾ ಅವರ ಅಫೇರ್ ಬಗ್ಗೆ ತುಂಬಾ ದಿನಗಳಿಂದ ಚರ್ಚೆ ನಡೆದಿದೆ. ಇವರು ಸೋಶಿಯಲ್ ಮೀಡಿಯಾಗಳಲ್ಲಿ ಮಾಡುವ ಪೋಸ್ಟ್ ಗಳಿಂದ ಇಬ್ಬರಲ್ಲೂ ಏನಾದರೂ ನಡೆಯುತ್ತಿದೆಯೆಂಬ ಚರ್ಚೆ ಇದೆ. ಈಗ ಶುಭಮನ್ ಮಾಡಿದ ಪೋಸ್ಟ್ ಸಾರಾ ಜೊತೆಗೆ ತಳಕು ಹಾಕುತ್ತಿದ್ದಾರೆ.

ಇವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರರ ಪೋಸ್ಟ್ ಗಳನ್ನು ಲೈಕ್ ಮಾಡುತ್ತಿರುತ್ತಾರೆ. ಸಾರಾ ಇನ್ಸ್ಟಾಗ್ರಾಂ ಮೇಲೆ ಶುಭಮನ್ ಹಾಗೂ ಅವರ ಸಹೋದರಿಗೆ ಫಾಲೋ ಮಾಡುತ್ತಾರೆ. ಸಾರಾ ಹಾಗೂ ಶುಭಮನ್ ಇಬ್ಬರು ಬಹಳಷ್ಟು ಸಲ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಿಂದ ಒಂದೇ ರೀತಿಯ ಸೇಮ್ ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ. ಇದರ ಮೇಲಿಂದ ಅಭಿಮಾನಿಗಳಿಗೆ ಇಬ್ಬರಲ್ಲಿ ಅಫೇರ್ ನಡೆದಿದೆಯೆಂದು ಎನಿಸುತ್ತದೆ.

ಶುಭಮನ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ ಪೋಸ್ಟ್ ಸಾರಾಳ ಜೊತೆಗೆ ತಳಕು ಹಾಕುತ್ತಿದ್ದಾರೆ. ಅವರು ಶೇರ್ ಮಾಡಿದ ಫೋಟೋದಲ್ಲಿಯ ಟಿ ಶರ್ಟ್ ಮೇಲೆ, ‘ಡೋಂಟ್ ಫಾಲ್ ಇನ್ ಲವ್ ವಿಥ್ ಏಂಜಲ್ಸ್’ ( ಸುಂದರಿಯ ಪ್ರೀತಿಯಲ್ಲಿ ಬೀಳಬೇಡಿ ) ಈ ಫೋಟೋ ಶೇರ್ ಮಾಡುವಾಗ ಕ್ಯಾಪ್ಷನ್ ನಲ್ಲಿ Sigma rule no.1 ಎಂದು ಬರೆದಿದ್ದಾರೆ.

ಶುಭಮನ್ ಮಾಡಿದ ಪೋಸ್ಟಿನ ಅರ್ಥವನ್ನು ಅಭಿಮಾನಿಗಳು ಈ ರೀತಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಸಾರಾ ತೆಂಡೂಲ್ಕರ್ ಅವರ ಜೊತೆಗೆ ಶುಭಮನ್ ಅವರ ಬ್ರೇಕಪ್ ಏನಾದರೂ ಆಗಿದೆಯೇ? ಎಂಬ ಬಗ್ಗೆ ಅನೇಕ ಅಭಿಮಾನಿಗಳು ಶುಭಮನ್ ಅವರಿಗೆ ಈ ಬಗ್ಗೆ ನೇರ ಪ್ರಶ್ನೆಗಳನ್ನು ಸಹ ಮಾಡಿದ್ದಾರೆ. ಶುಭಮನ್ ಮಾತ್ರ ಈ ಪೋಸ್ಟ್ ಯಾಕೆ ಮತ್ತು ಯಾರಿಗಾಗಿ ಶೇರ್ ಮಾಡಿದ್ದಾರೆ ಎಂಬುದರ ಬಗ್ಗೆ ಉತ್ತರವನ್ನು ಸ್ವತಃ ಅವರೇ ನೀಡಬಲ್ಲರು. ಶುಭಮನ್ ಇಲ್ಲಿಯವರೆಗೆ ಭಾರತದ ಕಡೆಯಿಂದ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿತ್ವವನ್ನು ಮಾಡಿದ್ದಾರೆ. 8 ಟೆಸ್ಟ್ ಗಳಲ್ಲಿ 414 ರನ್ ಗಳನ್ನು ಮಾಡಿದ್ದಾರೆ. ಐಪಿಎಲ್ 2021 ರಲ್ಲಿಯೂ ಒಳ್ಳೆಯ ಆಟವನ್ನು ಪ್ರದರ್ಶಿಸಿದ್ದಾರೆ.