ಸೀರೆಯುಟ್ಟ ಫೇಮಸ್ ನಟಿ ಮಳೆಯಲ್ಲಿ ಕಾರಿನಿಂದ ಅದ್ಯಾವ ಪರಿ ಇಳಿದು ಹೋದ್ಲು ಮಾರಾಯ್ರೆ! ಹೀಗಾ ಈ ಪದ್ಧತಿ?
ಸದ್ಯ ಕರ್ನಾಟಕ ಸಹಿತ ಭಾರತದ ಅನೇಕ ಭಾಗಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಅದರಲ್ಲೂ ಕರಾವಳಿ ಭಾಗ ಮತ್ತು ಮಹಾರಾಷ್ಟ್ರದ ಕೊಂಕಣದಲ್ಲಿ ಮಳೆ ಆರ್ಭಟ ಜೋರಾಗಿದೆ. ಹೀಗಾಗಿ ಇದರ ಪರಿಣಾಮ ಮುಂಬೈಯಲ್ಲಿಯೂ ಕಂಡುಬರುತ್ತಿದೆ. ಇದೇ ಸಂದರ್ಭದಲ್ಲಿ ಬಾಲಿವುಡ್ ಫೇಮಸ್ ಬೆಡಗಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದೆ. ನಟಿ ನೋರಾ ಫತೆಹಿ ತಮ್ಮ ಸೌಂದರ್ಯದಿಂದಾಗಿ ದಿನನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಈಗ ಬೇರೊಂದು ಕಾರಣಕ್ಕಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನು ಕಾರಣ ನೋಡೋಣ ಬನ್ನಿ.
ಕಳೆದ ಸೋಮವಾರ ಒಂದು ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ನೋರಾ ಫತೆಹಿ ಸೀರೆಯುಟ್ಟು ಕಾರಿನಲ್ಲಿ ಬಂದರು. ಅದೇ ಸಮಯಕ್ಕೆ ಅಲ್ಲಿ ಮಳೆ ಬರುತ್ತಿತ್ತು. ಅಂಥದ್ದರಲ್ಲಿ ಈ ಬೆಡಗಿ ನೋರಾ ಸೀರೆ ಬೇರೆ ತೊಟ್ಟಿದ್ದರು. ಹೀಗಾಗಿ ಕಾರಿನಿಂದ ಕೆಳಗೆ ಇಳಿಯುವುದು ಮತ್ತು ವ್ಯಾನ್ ವರೆಗೆ ಹೇಗೆ ಮುಟ್ಟುವುದು ಎಂಬ ಪ್ರಶ್ನೆ ನಿರ್ಮಾಣವಾಯಿತು. ಆಗ ನೋರಾ ಅವರು ಅನುಸರಿಸಿದ ಪದ್ಧತಿಯನ್ನು ನೋಡಿದರೆ ಅಯ್ಯೋ ಶಿವನೆ ಎನ್ನುತ್ತೀರಿ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ನೋರಾ ಅವರು ಇಳಿಯುವ ಮುನ್ನ ಸೀರೆಯ ಅರ್ಧದಷ್ಟು ಭಾಗವನ್ನು ಸುತ್ತಿ ಗಂಟು ಮಾಡಿ ತಮ್ಮ ಸಹಾಯಕನ ಕೈಯಲ್ಲಿ ನೀಡಿದರು. ಉಳಿದ ಅರ್ಧ ಭಾಗ ಅವರ ದೇಹಕ್ಕೆ ಸುತ್ತಿಕೊಂಡಿತ್ತು. ಮುಂದೆ ಅದೇ ರೀತಿ ಅವರ ಸಹಾಯಕನೊಂದಿಗೆ (ಸೀರೆಯನ್ನು ಕೈಯಲ್ಲಿ ಹಿಡಿದುಕೊಂಡೆ) ತಮ್ಮ ವ್ಯಾನ್ ವರೆಗೆ ನೋರಾ ಹೇಗೋ ಬಂದು ತಲುಪುತ್ತಾರೆ. ಹೇಗಿದೆ ಈ ಸ್ಟೈಲ್? ಹೇಳಿ ನೀವೇ.
ನೋರಾ ಅವರ ಸೌಂದರ್ಯದ ಬಗ್ಗೆ ದಿನನಿತ್ಯ ಅನೇಕ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಂದೇ ಬರುತ್ತವೆ. ಅಂತದ್ದರಲ್ಲಿ ಅವರ ಇಂಥ ಸುದ್ದಿಯಂತೂ ತುಂಬಾ ವಿಶೇಷತೆಯನ್ನು ಪಡೆದು ವೈರಲ್ ಆಗಿಬಿಡುತ್ತವೆ. ಅವರ ಬ್ಯೂಟಿಫುಲ್ ಲುಕ್ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಚರ್ಚೆಗಳಾಗುತ್ತವೆ.
ವಿಡಿಯೋ ನೋಡಿ.
View this post on Instagram