ಸುಮಾರು ಹದಿನೈದು ನೂರಕ್ಕೂ ಹೆಚ್ಚು ಅನಾಥ ಮಕ್ಕಳ ತಾಯಿಯಾಗಿದ್ದ ಸಿಂಧೂತಾಯಿ ಸಪಕಾಳ ಇನ್ನಿಲ್ಲ!!

ಅನಾಥರ ತಾಯಿ ಎಂದು ಸಂಪೂರ್ಣ ದೇಶಾದ್ಯಂತ ಪರಿಚಯವಾಗಿದ್ದ ಸಾಮಾಜಿಕ ಕಾರ್ಯಕರ್ತರಾದ ಸಿಂಧೂತಾಯಿ ಸಪಕಾಳ ಇಂದು ಪುಣೆಯಲ್ಲಿ ನಿಧನರಾಗಿದ್ದಾರೆ. ಇವರು 73 ವರ್ಷದವರಾಗಿದ್ದರು.

ಮಹಾರಾಷ್ಟ್ರದ ಮದರ್ ತೆರೆಸಾ ಎಂದು ಗುರಿತಿಸಲ್ಪಡುವ ಸಿಂಧೂತಾಯಿ ಸಪಕಾಳ ಅವರ ಜನ್ಮ 14 ನವೆಂಬರ್ 1947 ರಂದು ಮಹಾರಾಷ್ಟ್ದಲ್ಲಿಯ ವರ್ಧಾ ಎಂಬಲ್ಲಿ ಆಯಿತು. ಇಂದು ಸುಮಾರು ರಾತ್ರಿ ಎಂಟು ಗಂಟೆಗೆ ಹೃದ#ಯಾಘಾತದಿಂದ ಮರಣ ಹೊಂದಿದ್ದಾರೆ. ಬುಧವಾರ ಮುಂಜಾನೆ ಹನ್ನೆರಡು ಗಂಟೆಗೆ ಪುಣೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಸಿಂಧೂತಾಯಿಯವರನ್ನು ಪುಣೆಯಲ್ಲಿಯ ಗ್ಯಾಲಕ್ಸಿ ಹಾಸ್ಪಿಟಲ್ ನಲ್ಲಿ ದಾಖಲಿಸಲಾಗಿತ್ತು. ಸುಮಾರು ಒಂದು ತಿಂಗಳವರೆಗೆ ಅವರ ಹರ್ನಿಯ ಆಪರೇಷನ್ ಆಗಿತ್ತು. ತದನಂತರ ಅದರ ಮೇಲೆ ಉಪಚಾರ ಸಹ ಶುರು ವಾಗಿತ್ತು. ಆದರೆ ಇಂದು ಅವರು ಹೃದ#ಯಾಘಾತದಿಂದ ನಿಧ#ನರಾಗಿದ್ದಾರೆ.