ಸೂಪರ್ ಕ್ಯಾಚ್! ಕೇನ್ ವಿಲಿಯಮ್ಸ್ ಹಾರ್ದಿಕ್ ಪಾಂಡ್ಯ ಅವರ ಮುಂದೆಯೇ ಶರವೇಗದಲ್ಲಿ ಕಸಿದರು ಟ್ರೋಫಿ! ನೋಡಿ ಈ ವಿಡಿಯೋ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಟಿ20 ವರ್ಲ್ಡ್ ಕಪ್ ಸೆಮಿಫೈನಲ್ ಪಂದ್ಯದಿಂದ ಹೊರಗುಳಿದ ನಂತರ ಈ ಎರಡು ತಂಡಗಳು ಟಿ 20 ಮತ್ತು ಏಕದಿನ ಪಂದ್ಯಗಳ ಸರಣಿಗಾಗಿ ಸಜ್ಜಾಗಿವೆ. ಎರಡು ತಂಡಗಳ ಮಧ್ಯೆ 18 ನವೆಂಬರ್ 2022 ರಂದು ಮೊದಲ ಟಿ ಟ್ವೆಂಟಿ ಪಂದ್ಯ ವೆಲ್ಲಿಂಗ್ಟನ್ ನಲ್ಲಿ ನಡೆಯಲಿದೆ. ಪಂದ್ಯದ ಮೊದಲು ಎರಡು ತಂಡಗಳ ನಾಯಕರು ಟ್ರೋಫಿ ಜೊತೆಗೆ ಪ್ರೀ ಫೋಟೋ ಸೇಷನ್ ಒಂದರಲ್ಲಿ ಭಾಗವಹಿಸಿದ್ದರು. ಅದೇ ಸಂದರ್ಭದಲ್ಲಿ ನಡೆದುಹೋಯಿತು ಒಂದು ತಮಾಷೆಯ ದೃಶ್ಯ.
ಕೇನ್ ವಿಲಿಯಮ್ಸ್ ಶರವೇಗದಲ್ಲಿ ಹಿಡಿದರು ಟ್ರೋಫಿ…
ನ್ಯೂಜಿಲೆಂಡ್ ಕ್ರಿಕೆಟ್ ಟೀಮ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯಾ ಮತ್ತು ಕೇನ್ ವಿಲಿಯಮ್ಸ್ ಸರಣಿಯ ಮೊದಲ ಹಂತದ ಟ್ರೋಫಿ ಜೊತೆಗಿನ ಫೋಟೋಶೂಟ್ ನಲ್ಲಿ ತೊಡಗಿದ್ದರು. ಈ ಕಾರ್ಯಕ್ರಮ ನಡೆದಾಗ ಗಾಳಿಯು ತುಂಬಾ ಜೋರಾಗಿ ಚಲಿಸುತ್ತಿತ್ತು. ಹೀಗಾಗಿ ಟ್ರೋಫಿ ಇಟ್ಟ ಸ್ಟ್ಯಾಂಡ್ ಗಾಳಿಗೆ ವಾಲಿದಾಗ ಇನ್ನೇನು ಟ್ರೋಫಿ ಕೆಳಗೆ ಬೀಳುತ್ತದೆ ಎನ್ನುವಷ್ಟರಲ್ಲಿ ವಿಲಿಯಮ್ಸ್ ಅವರು ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಅದನ್ನು ಹಾರ್ದಿಕ್ ಪಾಂಡ್ಯ ಅವರ ಕಣ್ಣು ಮುಂದೆಯೇ ಕಸಿದುಕೊಂಡಿದ್ದಷ್ಟೇ ಅಲ್ಲ ತಮ್ಮ ಜೊತೆಗೆ ತೆಗೆದುಕೊಂಡೂ ಹೋದರು.
ನೋಡಿ ತಮಾಷೆಯ ವಿಡಿಯೋ…
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಾ ‘ನ್ಯೂಜಿಲೆಂಡ್ ಕ್ರಿಕೆಟ್’ ಕ್ಯಾಪ್ಷನ್ ನಲ್ಲಿ “ಕ್ಯಾಚ್ ಆಫ್ ದ ಸಮರ್ ಗಾಗಿ ಮೊದಲ ಸ್ಪರ್ಧಿ” ಎಂದು ಬರೆದಿದ್ದಾರೆ.
ಇದೇ ಸಂದರ್ಭದಲ್ಲಿ ಇಬ್ಬರೂ ನಾಯಕರು ವೆಲ್ಲಿಂಗ್ಟನ್ ನ ರೋಡ್ ಮೇಲೆ ಕ್ರೊಕೊಡೈಲ್ ಬೈಕ್ ಚಲಾಯಿಸಿದರು. ಇಬ್ಬರೂ ಕೂಡಿ ಈ ಬೈಕಿನ ಮಜಾ ತೆಗೆದುಕೊಳ್ಳುವ ವಿಡಿಯೋ ಒಂದನ್ನು ನೀವು ಇಲ್ಲಿ ನೋಡಬಹುದು. ಈ ಬೈಕ್ ತುಂಬಾ ವಿಶೇಷವಾಗಿದ್ದು ಇದಕ್ಕೆ ಎರಡು ಸ್ಟೇರಿಂಗ್ ಗಳಿವೆ. ಹಾಗೂ ಬೇರೆ ಬೇರೆ ಪೆಡಲ್ ಗಳು ಸಹ ಕಂಡುಬರುತ್ತವೆ. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ತುಂಬಾ ಖುಷಿಯಲ್ಲಿ ಕಂಡು ಬರುತ್ತಿದ್ದಾರೆ.