Articles

ಜೊತೆಗಾರನ ಅಂತ್ಯಕ್ರಿಯೆಯಲ್ಲಿ ವಿದಾಯ ಹೇಳಲು ಬಂದಿತು ನವಿಲು…! ಮನಕಲಕುವ ದೃಶ್ಯದ ಈ ವೈರಲ್ ವಿಡಿಯೋ ನೋಡಿ.

ಮನುಷ್ಯನೆ ಆಗಿರಲಿ ಅಥವಾ ಪ್ರಾಣಿಗಳೆ ಆಗಿರಲಿ, ಪ್ರೀತಿಯ ಪಾತ್ರರಾದ ವ್ಯಕ್ತಿ ದೂರವಾದಾಗ ಪ್ರತಿಯೊಬ್ಬರಿಗೂ ಸಹಿಸಲಾಗದ ವೇದನೆಯಾಗುತ್ತದೆ. ಅನೇಕ ವರ್ಷಗಳವರೆಗೆ ಕೂಡಿದ್ದು ನಂತರ ಅಗಲಿದ ಮೇಲೆ ಆಗುವ ನೋವು ಯಾರಿಗೂ ತಡೆಯಲು ಸಾಧ್ಯವಾಗುವುದಿಲ್ಲ.

ಸದ್ಯ ಇಂಟರ್ನೆಟ್ನಲ್ಲಿ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನವಿಲು ತನ್ನ ಜೊತೆಗಾರನ ಅಗಲಿಕೆಯಿಂದಾಗಿ ನೋವು ಅನುಭವಿಸುತ್ತಿದೆ. ಆ ನೋವು ತಡೆದುಕೊಳ್ಳಲು ಸಾಧ್ಯವಾಗದೆ ನವಿಲು ತನ್ನ ಜೊತೆಗಾರನ ಅಂತ್ಯಕ್ರಿಯೆಯ ಸಮಯದಲ್ಲಿ ಹಿಂದೆ ಹಿಂದೆ ಚಲಿಸುತ್ತಿದೆ.

ಮನುಷ್ಯನ ಹಾಗೆ ಭೂಮಿಯ ಮೇಲಿನ ಎಲ್ಲ ಸಮಸ್ತ ಪ್ರಾಣಿ-ಪಕ್ಷಿಗಳಿಗೂ ಭಾವನೆಗಳು ಇರುತ್ತವೆ. ಅಂತ್ಯಕ್ರಿಯೆಯ ಸಮಯದಲ್ಲಿ ಜೊತೆಗಾರನನ್ನು ತೆಗೆದುಕೊಂಡು ಹೋಗುವಾಗ ಈ ನವಿಲು ತುಂಬಾ ನೋವು ಅನುಭವಿಸುತ್ತಿರುವದು ಕಂಡುಬರುತ್ತಿದೆ.

ಪ್ರಸ್ತುತ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಿಂದ ವರದಿಯಾಗಿದೆ. ಅಲ್ಲಿಯ ಗ್ರಾಮಸ್ಥರು ಹೇಳುವ ಪ್ರಕಾರ, ಸತ್ತ ನವಿಲಿನ ಒಂದು ಕಣ್ಣು ಸಮಸ್ಯೆಯಿಂದ ಕೂಡಿತ್ತು. ಎರಡು ನವಿಲುಗಳು ಸದಾ ಒಟ್ಟಿಗೆ ಇದ್ದು ಆಹಾರಕ್ಕಾಗಿ ಕೂಡಿಯೇ ತಿರುಗಾಡುತ್ತಿದ್ದವು. ಈಗ ತನ್ನ ಜೊತೆಗಾರ ತೀರಿಕೊಂಡದ್ದು ಅದಕ್ಕೆ ತುಂಬಾ ನೋವು ತಂದಿದೆ. ಹೀಗಾಗಿ ಅದರ ಅಂತ್ಯಕ್ರಿಯೆಯಲ್ಲಿ ಗಂಟೆಗಟ್ಟಲೆ ಜೊತೆ ಇದ್ದು ಅಂತ್ಯಕ್ರಿಯೆ ಮುಗಿದಮೇಲೆಯೇ ವಾಪಸ್ ಹೋಗಿದೆಯೆಂದು ತಿಳಿದುಬಂದಿದೆ.

ವೀಡಿಯೋ ನೋಡಿ

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನ @Bishnoiofficiai ಹೆಸರಿನ ಅಕೌಂಟ್ ನಿಂದ ಮಾಡಲಾಗಿದೆ. ಇಲ್ಲಿಯವರೆಗೆ ಸಾವಿರಾರು ಜನರು ಈ ದುಃಖದ ವಿಡಿಯೋವನ್ನು ನೋಡಿ, ನೊಂದು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Leave a Comment

Your email address will not be published. Required fields are marked *