ಸೂಪರ್ ಹಿಟ್ ಹಿಂದಿ ಚಲನಚಿತ್ರ DDLJ ದಲ್ಲಿಯ ‘ಪಲಟ್’ ಸೀನ್ ಹಾಲಿವುಡ್ ಚಿತ್ರದ ಕಾಪಿ, ನಂಬಿಕೆ ಇಲ್ಲವೇ? ಇಲ್ಲಿದೆ ನೋಡಿ ಸಾಕ್ಷಿ!
ಶಾರೂಖ್ ಖಾನ್ ಮತ್ತು ಕಾಜೋಲ್ ನಟಿಸಿದ ಬ್ಲಾಕ್ ಬಸ್ಟರ್ ಚಿತ್ರ ‘ದಿಲವಾಲೇ ದುನಿಯಾ ಲೇ ಜಾಯೆಂಗೆ’ ಚಿತ್ರ ಹಿಂದಿಯಲ್ಲಿಯ ಅದ್ಭುತ ರೊಮ್ಯಾಂಟಿಕ್ ಚಿತ್ರ ಎನ್ನುವದರಲ್ಲಿ ಸಂಶಯವಿಲ್ಲ. 1995 ರಲ್ಲಿ ತೆರೆಕಂಡ ಈ ಚಿತ್ರ ವೀಕ್ಷಕರ ಮನಸ್ಸು ಸೋರೆಗೊಳ್ಳುವದರಲ್ಲಿ ಯಶಸ್ವಿಯಾಯಿತು. ಈ ಚಿತ್ರದಲ್ಲಿಯ ಡೈಲಾಗ್ ಗಳು ಇನ್ನುವರೆಗೆ ತರುಣರ ಹೃದಯಗಳಲ್ಲಿ ಕ್ರೇಜ್ ಮೂಡಿಸುವದು.
ಅದರಲ್ಲಿಯದೇ ಶಾರುಖ್ ಖಾನ್ ನ ಒಂದು ಡೈಲಾಗ್ ‘ಪಲಟ್’ ಪ್ರಚಂಡ ಮನ್ನಣೆ ಪಡೆಯಿತು. ಈ ಡೈಲಾಗ್ ಮತ್ತು ಸಂಪೂರ್ಣ ಸೀನ್ ಹಾಲಿವುಡ್ ಚಿತ್ರದ ಕಾಪಿ ಇದ್ದದ್ದು ಕಂಡು ಬಂದಿದೆ.

DDLJ ಚಿತ್ರದ ಸೂಪರ್ ಹಿಟ್ ಸೀನ್ ‘ಪಲಟ್’ ನ್ನು 1993 ರಲ್ಲಿ ತೆರೆ ಕಂಡ ‘ಇನ್ ದ ಲಾಯಿನ್ ಆಫ್ ಫಾಯರ್’ ಚಿತ್ರದಲ್ಲಿಂದ ಕಾಪಿ ಮಾಡಲಾಗಿದೆ. ಸದ್ಯ ಈ ಒರಿಜಿನಲ್ ಚಿತ್ರದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿರುವದು ಕಂಡು ಬರುತ್ತಿದೆ.
ವೊಲ್ಫಗ್ಯಾಂಗ್ ಪೀಟರ್ ಸನ್ ದಿಗ್ದರ್ಶನದ ಅಡಿಯಲ್ಲಿ ತಯಾರಾದ ಈ ಚಿತ್ರದಲ್ಲಿ ಕ್ಲಿಂಟ್ ಇಸ್ಟವುಡ್ ಭೂಮಿಕೆಯಲ್ಲಿ ಫ್ರ್ಯಾಂಕ್ ಹೋರಿಗನ್ ಮತ್ತು ರೇನಿ ರುಸೊ ಇವಳು ಲಿಲಿ ರೇನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸೀನ್ ನಲ್ಲಿ ಇಬ್ಬರು ವಾಷಿಂಗ್ಟನ್ ಡಿ ಸಿ ಯ ಲಿಂಕನ್ ಮೆಮೋರಿಯಲ್ ಮುಂದೆ ನಿಂತು ಪರಸ್ಪರ ಮಾತಾಡುತ್ತಿರುತ್ತಾರೆ. ಸ್ವಲ್ಪ ಸಮಯದ ನಂತರ ಲಿಲಿ ಅಲ್ಲಿಂದ ಎದ್ದು ಹೋಗುತ್ತಾಳೆ. ಫ್ರ್ಯಾಂಕ್ ಅವಳನ್ನೇ ನೋಡುತ್ತಿರುತ್ತಾನೆ ಮತ್ತು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾನೆ, ‘ಒಂದು ವೇಳೆ ಆಕೆ ತಿರುಗಿ ನೋಡಿದರೇ ನಾನು ಅವಳಿಗೆ ಇಷ್ಟ, ಹಾಗಾದ್ರೆ ಒಂದು ಸಲ ತಿರುಗಿ ನೋಡಿಯೇ ಬಿಡು’ ಆಗ ಲಿಲಿ ತಿರುಗಿ ನೋಡುತ್ತಾಳೆ ಫ್ರ್ಯಾಂಕ್ ಅವಳನ್ನೇ ದಿಟ್ಟಿಸುತ್ತ ಮುಗುಳ್ನಕ್ಕು ಹೋಗುತ್ತಾನೆ.
ವಿಶೇಷವೆಂದರೆ DDLJ ದಿಗ್ದರ್ಶಕರಾದ ಆದಿತ್ಯ ಚೋಪ್ರಾ ಅವರು ಸ್ವತಃ ಈ ವಿಷಯವನ್ನು ಒಪ್ಪಿಕೊಂಡಿದ್ದರು. ಅವರು ಹಾಲಿವುಡ್ ಚಿತ್ರಗಳಿಂದ ತುಂಬಾ ಪ್ರಭಾವಿತರಾಗಿದ್ದರು. ಅವರು ತಮ್ಮ ಪುಸ್ತಕ ‘ಚೋಪ್ರಾ ರಿಲೀವ್ಸ್’ ನಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದರು. ಒಂದು ಸೀನ್ ಸತತವಾಗಿ ನನ್ನ ತಲೆಯಲ್ಲಿಯೇ ತಿರುಗುತ್ತಿತ್ತು. ಕೆಲವು ದಿನಗಳ ನಂತರ ನಾನು ಅದನ್ನು ಮರೆತುಬಿಟ್ಟೆ, ಯಾವಾಗ DDLJ ಚಿತ್ರದ ಕೆಲಸ ಶುರು ಮಾಡಿದೆ ಆಗ ಈ ಸೀನ್ ಮತ್ತೆ ನೆನಪಾಗಿ ಅದನ್ನು ಈ ಚಿತ್ರದಲ್ಲಿ ಅಳವಡಿಸಿಕೊಂಡೆ.