ಸೇನೆಗೆ ಸೇರ್ಪಡೆಯಾಗಲಿದೆ ‘ಚಲಿಸುವ ಕೋಟೆ’ ಕಲ್ಯಾಣಿ M4; IED ಅಥವಾ ಲ್ಯಾಂಡ್ ಮೈನ್ ಯಾವುದೇ ಸ್ಪೋಟದ ಪರಿಣಾಮ ಇದರ ಮೇಲೆ ಆಗುವುದಿಲ್ಲ!

ಭಾರತೀಯ ಸೇನೆಗೆ ಒಂದು ಓಡಾಡುವ ಕೋಟೆಯೊಂದು ಅತಿ ಶೀಘ್ರದಲ್ಲೇ ಸೇರಿಕೊಳ್ಳಲಿದೆ. ಏನಿದು ನಡೆದಾಡುವ ಕೋಟೆಯೆಂದು ಆಶ್ಚರ್ಯ ಪಡದಿರಿ. ಇದೊಂದು ಸೇನೆಯ ಶ ಸ್ತ್ರ ಸಜ್ಜಿತ ವಾಹನವಾಗಿದೆ‌. ಈ ವಾಹನದ ದಕ್ಷತೆ ಹೇಗಿದೆಯೆಂದರೆ ಇದರ ಮೇಲೆ ಲ್ಯಾಂಡ್ ಮೈನಿಂಗ್ ನ ಸ್ಪೋ ಟ ವಾಗಲೀ, ಅಥವಾ ಬಾಂ ಬು ಗಳ ಪರಿಣಾಮವಾಗಲಿ ಯಾವುದೇ ರೀತಿಯಲ್ಲಿ ಆಗುವುದಿಲ್ಲ ಎನ್ನುವುದೇ ವಿಶೇಷ. ಈ ಆರ್ಮ್ಡ್ ವೆಹಿಕಲ್ ಸುಮಾರು 50 ಕೆಜಿ ಟಿ ಎನ್ ಟಿ ವಿ ಸ್ಫೋ ಟ ಕಗಳಿಂದ ಸುರಕ್ಷತೆಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಸೇನೆಗೆ ಈ ವಾಹನದ ಸಹಾಯದಿಂದ ದು ರ್ಗ ಮ ಎನಿಸುವ ಪ್ರದೇಶಗಳಿಗೂ ಕೂಡಾ ಸುಲಭವಾಗಿ ಹೋಗುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ‌. ರಕ್ಷಣಾ ಸಚಿವಾಲಯವು ಈ ವಾಹನಕ್ಕಾಗಿ ಭಾರತ್ ಫೋರ್ಜ್ ಲಿಮಿಟೆಡ್ ಗೆ 177.95 ಕೋಟಿಯ ಜವಾಬ್ದಾರಿ ನೀಡಿದೆ ಎನ್ನಲಾಗಿದೆ.

ಇನ್ನು ಈ ಶಸ್ತ್ರ ಸಜ್ಜಿತ ವಾಹನದ ಹೆಸರು ಕೂಡಾ ಆಕರ್ಷಕವಾಗಿದ್ದು ಇದನ್ನು ಕಲ್ಯಾಣಿ M4 ಎಂದು ಹೆಸರಿಸಲಾಗಿದೆ. ಕಲ್ಯಾಣಿ M4 ಅನ್ನು ಸೇನೆಗೆ ಪೂರೈಕೆ ಮಾಡಿದ ಮೇಲೆ ಮೊದಲು ಇದನ್ನು ಲಡಾಖ್ ಇಲಾಖೆಯಲ್ಲಿ ಇರಿಸಲಾಗುವುದು ಎನ್ನಲಾಗಿದೆ. ಏಕೆಂದರೆ ಇಲ್ಲಿ ಚೀನಾದ ಚಟುವಟಿಕೆಗಳು ಹೆಚ್ಚಾಗಿದ್ದು ಅದಕ್ಕೆ ಇಂತಹದೊಂದು ನಿರ್ಧಾರವನ್ನು ಮಾಡಲಾಗಿದೆ ಎನ್ನಲಾಗಿದೆ. ಹಾಗಾದರೆ ಕಲ್ಯಾಣಿ M4 ಅನ್ನು ನಡೆದಾಡುವ ಕೋಟೆ ಎಂದು ಏಕೆ ಕರೆಯಲಾಗಿದೆ ಎನ್ನುವುದನ್ನು ನಾವು ತಿಳಿಯಲೇ ಬೇಕಾಗಿದೆ‌‌. ಹಾಗಾದರೆ ಬನ್ನಿ ಈ ವಿನೂತನ ಶಸ್ತ್ರ ಸಜ್ಜಿತ ವೆಹಿಕಲ್ ನಲ್ಲಿನ ವಿಶೇಷತೆಗಳೇನು ಎನ್ನುವುದನ್ನು ಒಂದೊಂದಾಗಿ ತಿಳಿಯೋಣ.

  • ಇದು ಬಹಳ ಶಸ್ತ್ರ ಸಜ್ಜಿತ ವಾಹನವಾಗಿದ್ದು, ಅದ್ಭುತ ಕಾರ್ಯ ದಕ್ಷತೆ ಹಾಗೂ ಸೈನಿಕರ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.

*ಸರಾಸರಿ 16 ಟನ್ ನ ಈ ವಾಹನದಲ್ಲಿ 2.3 ಟನ್ ತೂಕವನ್ನು ಹಾಕಬಹುದಾಗಿದೆ. ಇದರಲ್ಲಿ ಎಂಟು ಜನ ಸೈನಿಕರು ಕೂರಲು ಅವಕಾಶವಿದೆ.

*ಇದು 43 ಡಿಗ್ರಿ ಅಪ್ರೋಚ್ ಆ್ಯಂಗಲ್ ಹಾಗೂ 44 ಡಿಗ್ರಿ ಡೀಸೆಂಟ್ ಆ್ಯಂಗಲ್ ನಲ್ಲಿ ಬಹಳ ಸುಲಭವಾಗಿ ಸಂಚಾರವನ್ನು ಮಾಡುತ್ತದೆ.

  • -20 ಡಿಗ್ರಿ ತಾಪಮಾನದಿಂದ 50 ಡಿಗ್ರಿ ತಾಪಮಾನದಲ್ಲಿ ಇದು ನಿರಂತರವಾಗಿ ಕೆಲಸವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

*ಇದರ ಮೊನೊಕಾಕ್ ಡಿಸೈನ್ ಅನ್ನು ಒಳಗೊಂಡಿದ್ದು, ಎಲ್ಲವೂ ಕೂಡಾ ವಾಹನದ ಒಳಗೆ ಇದ್ದು, ಹೊರ ಭಾಗದಲ್ಲಿ ಏನೂ ಇಲ್ಲ.

*ಇದರಲ್ಲಿ ಅಳವಡಿಸಿರುವ ಗಾಜಿನ ಶಕ್ತಿ ಅಥವಾ ಸಾಮರ್ಥ್ಯ ಯಾವ ಮಟ್ಟಕ್ಕೆ ಇದೆಯೆಂದರೆ ಇವುಗಳನ್ನು ಯಾವುದೇ ಸ್ನೈಪರ್ ಅಥವಾ ಆ್ಯಂಟಿ ಮೆಟಿರೀಯಲ್ ರೈಫಲ್ ನ ಫೈರ್ ಅನ್ನು ಕೂಡಾ ತಡೆದುಕೊಳ್ಳುವ ಸಾಮರ್ಥ್ಯವನ್ನು ಪಡೆದಿವೆ.

*ಇದು ಆರು ಸಿಲಿಂಡರ್ ಗಳ ಟರ್ಬೋಕಾರ್ಡ್ ಡೀಸೆಲ್ ಇಂಜಿನ್ ಅನ್ನು ಹೊಂದಿದೆ. ಭಾರತೀಯ ಸೇನೆಯ ಬಳಿ ಇರುವ ಎಲ್ಲಾ ವಾಹನಗಳಿಗಿಂತ ದುಪ್ಪಟ್ಟು ಶಕ್ತಿಯನ್ನು ಇದು ಹೊಂದಿದೆ ಎನ್ನಲಾಗಿದೆ‌.

*ಕಲ್ಯಾಣಿ M4 ನ ಟಾಪ್ ಸ್ಪೀಡ್ ಪ್ರತಿಗಂಟೆಗೆ 140 ಕಿಮೀ ಎನ್ನಲಾಗಿದೆ. ಇದರ ರೇಂಜ್ 800 ಕಿಮೀ ಗಳಾಗಿದೆ ಎನ್ನಲಾಗಿದೆ.

*ಈ ವಾಹನದ ಒಳಗೆ 16 ಕಿಲೋ ವ್ಯಾಟ್ ನ ಏರ್ ಕಂಡೀಶನ್ ವ್ಯವಸ್ಥೆಯನ್ನು ಹೊಂದಿದೆ.

*ಮೆಶಿನ್ ಗನ್ ಗಳ ಹೊಡೆತವನ್ನು ಇದು ಸುಲಭವಾಗಿ ಎದುರಿಸುತ್ತದೆ ಹಾಗೂ ಹತ್ತು ಕೆಜಿ ಆ್ಯಂಟಿ ಟ್ಯಾಂಕ್ ಮೈನ್ ಕೂಡಾ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದಿದ್ದಾರೆ.

ಇನ್ನು ಈ ದಕ್ಷ ವಾಹನದ ಅಗತ್ಯದ ವಿಚಾರಕ್ಕೆ ಬಂದರೆ ಎರಡು ವರ್ಷಗಳ ಹಿಂದೆ ಪುಲ್ವಾಮದಲ್ಲಿ ಸಿ ಆರ್ ಪಿ ಎಫ್ ಯೋಧರ ವಾಹನದ ಮೇಲೆ ಆ ತ್ಮಾ ಹು ತಿ
ಧಾ ಳಿ ಯು ನಡೆದಿತ್ತು. ಇದರಲ್ಲಿ ನಮ್ಮ 40 ಜನ ಸೈನಿಕರು ಪ್ರಾಣವನ್ನು ಕಳೆದುಕೊಂಡಿದ್ದರು. ಈ ಭ ಯೋ ತ್ಪಾ ದ ಕ ಧಾ ಳಿ ಯ ನಂತರ ಶ ಸ್ತ್ರ ಸ ಜ್ಜಿ ತ ವಾಹನದ ಅನಿವಾರ್ಯತೆ ಇದೆ ಎಂಬುದು ಅರ್ಥವಾಗಿದ್ದು, ಅಂತಹ ಧಾ ಳಿಗಳಿಂದ ಕೂಡಾ ರಕ್ಷಣೆ ಒದಗಿಸುವ ಹಾಗೂ ಎದುರಿಸಿ ನಿಲ್ಲುವ ಸಾಮರ್ಥ್ಯ ಹೊಂದಿರುವ ವಾಹನದ ಅಗತ್ಯವಿದೆ. ಈ ವಾಹನ ಕೇವಲ ಸ್ಪೋ ಟವನ್ನು ಮಾತ್ರ ಎದುರಿಸುವುದು ಮಾತ್ರವೇ ಅಲ್ಲದೇ ವೇಗದ ವಿಚಾರದಲ್ಲೂ ಮುಂದೆ ಇದ್ದು, ಇದರ ನಿರ್ವಹಣೆ ಕೂಡಾ ಸುಲಭವಾಗಿದೆ.