ಸೌದಿಯಲ್ಲಿ ಪ್ರವಾಸಿಗನಿಗೆ ಇಸ್ಲಾಮ್ ಮತಾಂತರ ಮತ್ತು ರೋಜಾ (ಉಪವಾಸ) ಇಡಲು ಒತ್ತಾಯ ಮಾಡಿದವನ ಬಂಧನ.
ದುಬೈ: ಸೌದಿ ಅರಬ್ ದಲ್ಲಿ ಏಷಿಯಾದ ವ್ಯಕ್ತಿಯೊಬ್ಬನಿಗೆ ಇಸ್ಲಾಮ್ ಧರ್ಮಕ್ಕೆ ಮತಾಂತರಮಾಡುವದರ ಬಗ್ಗೆ ಮತ್ತು ರೋಜಾ ಇಡುವ ಬಗ್ಗೆ ಮಾಡಿದ ಒತ್ತಾಯ ಅಲ್ಲಿಯ ಸ್ಥಾನಿಕ ಯುವಕನೊಬ್ಬನಿಗೆ ಜೈಲಿಗೆ ಹಾಕಲು ಕಾರಣವಾಗಿದೆ. ವಿಷಯ ವೀಡಿಯೊ ಮುಖಾಂತರ ಪಬ್ಲಿಕ್ ಆಗುತ್ತಿದ್ದಂತೆ ಅಲ್ಲಿಯ ಸ್ಥಾನಿಕ ಸರಕಾರ ಆತನನ್ನು ಬಂಧಿಸಿದೆ. ಈ ಸಂಪೂರ್ಣ ಘಟನೆಯ ಒಂದು ವೀಡಿಯೋ ವೈರಲ್ ಆಗಿದೆ, ಆ ವೀಡಿಯೊ ನೋಡಿದ ನಂತರ ಮತ್ತು ಅದರ ತನಿಖೆ ನಡೆಸಿದ ನಂತರ ದುಬೈ ಸರಕಾರ ಆರೋಪಿಯನ್ನು ಬಂಧಿಸಲು ಆದೇಶ ಹೊರಡಿಸಿತು.

ಪ್ರಸ್ತುತ ವೀಡಿಯೊದಲ್ಲಿ ಒಬ್ಬ ಅರಬೀ ಭಾಷೆಯ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಇಸ್ಲಾಮ್ ಧರ್ಮ ಸ್ವೀಕರಿಸುವ ಬಗ್ಗೆ ಮತ್ತು ರೋಜಾ ಇಡುವ ಬಗ್ಗೆ ಒತ್ತಾಯ ಮಾಡುತ್ತ ಆತನಿಗೆ ಅಪಶಬ್ದಗಳನ್ನು ಆಡಿದ್ದಾನೆ, ಜೊತೆಗೆ ಆತನಿಗೆ ಅವಮಾನಿಸಿದ್ದಾನೆ. ವೈರಲ್ ಆದ ವಿಡಿಯೋದಲ್ಲಿ ಆತನ ಮುಖ ಮಾತ್ರ ಕಂಡು ಬಂದಿಲ್ಲ.
ವೈರಲ್ ವೀಡಿಯೊವನ್ನು ಮೊದಲು ಲೋಕ್ ನ್ಯಾಯಾಲಯ ಕೇಂದ್ರದಲ್ಲಿ ತನಿಖೆ ನಡೆಸಿದ ನಂತರ ಮತ್ತು ಧರ್ಮ ಮತಾಂತರ ಮಾಡುವ ಬಗ್ಗೆ ಹಾಗೂ ಅಪಶಬ್ದಗಳನ್ನು ಉಪಯೋಗಿಸಿದ, ಅವಮಾನಿಸಿದ ಚಿತ್ರಗಳನ್ನು ನೋಡಿದ ನಂತರ ಆತನ ಬಂಧನಕ್ಕೆ ಸರಕಾರ ಆದೇಶ ಹೊರಡಿಸಿದೆ.