Articles

VIDEO : ಕೊರೋನ ವ್ಯಾದಿ ದೂರ ಮಾಡಲು ಗಾಳಿ ಆಂಜನೇಯನಿಗೆ ಬೇಡಿಕೊಂಡ ಮನಮುಟ್ಟುವ ವಿಡಿಯೊ

ಕೊರೋನ ಮಹಾಮಾರಿಯಿಂದ ಇಡೀ ದೇಶ ತತ್ತರಿಸುತ್ತಿದೆ. ಅಬಾಲವೃದ್ದರಾದಿಯಾಗಿ ಎಲ್ಲರೂ ಇದರ ಏಟಿಗೆ ಬಲಿಯಾಗುತ್ತಿದ್ದಾರೆ. ಒಂದು ಕಡೆ ವೈರಸ್ ಹಾವಳಿಯಾದರೆ ಇನ್ನೊಂದು ಕಡೆ ಸುಲಿಗೆಕೋರರ ಹಾವಳಿ ಕೂಡ ಹೆಚ್ಚಾಗುತ್ತಿದೆ. ರೆಮಿಡಿಸಿವರ್ ಇಂಜೆಕ್ಷನ್ ನಿಂದ ಹಿಡಿದು ಆಕ್ಸಿಜನ್ ವರೆಗೆ ಎಲ್ಲದರಲ್ಲೂ ಅಸಹಾಯಕರನ್ನು ಸುಲಿಯುವ ಪ್ರಯತ್ನಗಳು ನಡೆಯುತ್ತಿವೆ.

ಹೀಗೀರುವಾಗ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಪ್ರಾರ್ಥಿಸಿರುವ ಈ ಪ್ರಾರ್ಥನೆ ನಿಜಕ್ಕೂ ಮನಮುಟ್ಟುತ್ತದೆ. ಹಾಗೆ ನೋಡಿದರೆ ಇನ್ನು ಕೆಲವೇ ದಿನಗಳಲ್ಲಿ ಸರ್ಕಾರ ಕೂಡ ಕೈ ಚೆಲ್ಲಿ ಕೂರುವ ಪರಸ್ಥಿತಿ ಇದೆ.ಅದೆಷ್ಟೇ ನಿಯಮ ವಿಧಿಸಿದರೂ ಎಲ್ಲವನ್ನೂ ಗಾಳಿಗೆ ತೂರಿ ಬೇಕಾಬಿಟ್ಟಿ ಅಡ್ಡಾಡ್ಡಿದ್ದರ ಪರಿಣಾಮವಾಗಿ ಇಂದು ಎಲ್ಲರೂ ಅನುಭವಿಸುವಂತಾಗಿದೆ.

ಕೆಲವರು ಕಾಯಿಲೆ ಬಂದು ಅನುಭವಿಸಿದರೆ, ಇನ್ನು ಕೆಲವರು ವ್ಯಾಪಾರ ವಹಿವಾಟು ಇಲ್ಲದೇ ಅನುಭವಿಸುತ್ತಿದ್ದಾರೆ. ಒಟ್ಟಾರೆಯಾಗಿ ಕೆಲವು ವರ್ಗದ ಜನರನ್ನು ಬಿಟ್ಟು ಇದು ಬಹುತೇಕರಿಗೆ ದೊಡ್ಡ ಆಪತ್ತು ತಂದಿಟ್ಟಿದೆ. ದಿನಕ್ಕೆ ಲಕ್ಷಗಟ್ಟಲೇ ಪಾಸಿಟಿವ್ ಪ್ರಕರಣ ಬರತೊಡಗಿದರೆ ಅವರಿಗೆಲ್ಲ ಚಿಕಿತ್ಸೆ ಕೊಡುವುದಾದರೂ ಹೇಗೆ, ಕೊಡುವುದಾದರೂ ಎಲ್ಲಿ?

130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಇಂಥ ದಾಳಿಗಳಾದರೆ ಯಾವ ಸರ್ಕಾರವೂ ನಮ್ಮನ್ನು ರಕ್ಷಿಸಲಾರದು. ಆಗ ಉಳಿದಿರುವುದು ದೆವನೊಬ್ಬನೇ. ಅದಕ್ಕೇ ಇಲ್ಲಿ ಪ್ರಾರ್ಥನೆ ಸಲ್ಲಿಸಿರುವುದು. ಸರ್ಕಾರದ ಬಿಗಿ ಲಾಕ್ ಡೌನ್, ಜನರ ಮುಂಜಾಗೃತೆ, ಹಾಗೂ ದೇವರ ದಯೆ ಇವೆಲ್ಲ ಸೇರಿ ಆದಷ್ಟು ಬೇಗ ಈ ವೈರಸ್ ತೊಲಗಲಿ.

ಗಾಳಿ ಆಂಜನೇಯ ಸಕಲರಿಗೂ ಒಳ್ಳೆಯದು ಮಾಡಿ ದೇಶದ ಜನರಿಗೆ ಆಯುರಾರೋಗ್ಯ ನೀಡಲಿ, ಬಡವರ – ಮಧ್ಯಮ ವರ್ಗದವರ ಏಳಿಗೆಯಾಗಲಿ. ಜೈ ಹನುಮಾನ್.

-Team Infotrend

Leave a Comment

Your email address will not be published. Required fields are marked *