ಸ್ಟೀವ್ ಸ್ಮಿತ್ ಅವರ ಪತ್ನಿ ಬೆಡ್ ರೂಮಿನಲ್ಲಿಯ ದೃಶ್ಯವೊಂದನ್ನು ಮಾಡಿದಳು ಜಗಜ್ಜಾಹೀರು! ರಾತ್ರಿ ಒಂದರ ಸುಮಾರು….
ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಅವರು ನಾಯಕನ ಕರ್ತವ್ಯವನ್ನು ತುಂಬಾ ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದಾರೆ. ನಾಯಕ ಸ್ಟೀವ್ ಸ್ಮಿತ್ ಅವರು ಮೊದಲ ಇನಿಂಗ್ಸ್ನಲ್ಲಿ 93 ರನ್ ಗಳನ್ನು ತೆಗೆದು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ತದನಂತರ ಫೀಲ್ಡಿಂಗ್ ಮತ್ತು ಬೌಲಿಂಗ್ ನಲ್ಲಿ ಅನೇಕ ಬದಲಾವಣೆಗಳನ್ನು ಮಾಡುತ್ತಾ ಇಂಗ್ಲೆಂಡಿಗೆ ಬ್ಯಾಕ್ ಫುಟ್ ಮೇಲೆ ನೂಕಿದ್ದಾರೆ. ಸುಮಾರು ಮೂರು ವರ್ಷಗಳ ನಂತರ ಸ್ಟೀವ್ ಸ್ಮಿತ್ ಅವರಿಗೆ ಆಸ್ಟ್ರೇಲಿಯಾದ ನಾಯಕತ್ವದ ಅವಕಾಶ ದೊರಕಿದೆ. ನಾಯಕನಾಗಿ ಜವಾಬ್ದಾರಿಯನ್ನು ಒಳ್ಳೆಯ ರೀತಿಯಲ್ಲಿ ನಿರ್ವಹಿಸುತ್ತಿರುವಾಗ ಅವರು ಹೋಟೆಲ್ ನ ರೂಮಿನಲ್ಲಿಯೂ ಶಾಂತವಾಗಿ ಕೂಡುವುದಿಲ್ಲ. ಏಕೆಂದರೆ ಮಧ್ಯರಾತ್ರಿಯೂ ಸಹ ಅವರ ಕ್ರಿಕೆಟ್ ಪ್ರಾಕ್ಟಿಸ್ ಹಾಗೆಯೇ ನಡೆದೇ ಇರುತ್ತದೆ.
ಅವರ ಪತ್ನಿ ದಾನಿ ವಿಲ್ಲೀಸ್ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸ್ಮಿತ್ ಅವರು ಮಧ್ಯರಾತ್ರಿ ಒಂದು ಗಂಟೆಯ ಸುಮಾರು ರೂಮಿನಲ್ಲಿ ಶಾಡೋ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಮಿತ್ ಅವರು ತಮ್ಮ ಹೊಸ ಬ್ಯಾಟ್ ನ್ನು ಚೆಕ್ ಮಾಡುತ್ತಿದ್ದರು. ಸ್ಮಿತ್ ಅವರ ಈ ಕ್ರಿಕೆಟ್ ಪ್ರೀತಿಯನ್ನು ದಾನಿ ಮೊದಲು ಸಲ ಅನುಭವಿಸಿಲ್ಲ. ಈ ವರ್ಷದ ಜನವರಿ ತಿಂಗಳಲ್ಲಿ ದಾನಿಯವರು ಸ್ಮಿತ್ ಅವರ ವಿಡಿಯೋವನ್ನು ಶೇರ್ ಮಾಡಿದ್ದರು. ಅದರಲ್ಲಿ ಸ್ಮಿತ್ ಅವರು ಬಿಳಿ ಬಟ್ಟೆಗಳನ್ನು ಧರಿಸಿ ಕ್ರಿಕೆಟ್ ಪ್ರ್ಯಾಕ್ಟಿಸ್ ಮಾಡುತ್ತಿದ್ದರು.
ಆಸ್ಟ್ರೇಲಿಯಾದ ರೆಗ್ಯುಲರ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಅವರು ಕೋವಿಡ್ ಪಾಸಿಟಿವ್ ವ್ಯಕ್ತಿಯ ಸಂಪರ್ಕದಲ್ಲಿ ಬಂದಿರುವುದರಿಂದ ಅವರನ್ನು ಐಸೋಲೆಟ್ ಮಾಡಲಾಗಿದೆ. ಹೀಗಾಗಿ ಪ್ಯಾಟ್ ಕಮಿನ್ಸ್ ಅವರ ಸ್ಥಾನದಲ್ಲಿ ಸ್ಟೀವ್ ಸ್ಮಿತ್ ಅವರಿಗೆ ನಾಯಕ ಮಾಡಲಾಗಿದೆ.