ಸ್ನೇಹಿತನ ಸಹಾಯದೊಂದಿಗೆ ಮಹಿಳೆ ತಮ್ಮ ಮನೆಯಲ್ಲೇ ಕದ್ದಳು ಬರೋಬ್ಬರಿ 1 ಕೋಟಿ 74 ಲಕ್ಷ ₹…!
ಕೋರೊನಾ ವೈರಸ್ ನಿಂದ ಭಾರತದಲ್ಲಿ ಲಾಕ್ಡೌನ್ ಜಾರಿಯಲ್ಲಿ ತರಲಾಗಿತ್ತು. ಈ ಲಾಕ್ಡೌನ್ ಸಮಯದಲ್ಲಿ ಭಾರತದಲ್ಲಿ ಅನೇಕ ಘಟನೆಗಳು ಸಂಭವಸಿವೆ. ಅಂತಹದೇ ಒಂದು ವಿಚಿತ್ರ ಘಟನೆ ಪುಣೆಯಲ್ಲಿ ನಡೆದಿದೆ. ಅದೇನೆಂದರೆ ಪುಣೆಯಲ್ಲಿಯ ಒಬ್ಬ ಪ್ರಸಿದ್ಧ ಉದ್ಯೋಗಪತಿಯ ಮನೆಯಿಂದ ಬಂಗಾರದ ಆಭರಣ ಮತ್ತು ನಗದು ಹೀಗೆ ಒಟ್ಟು ಸುಮಾರು 1 ಕೋಟಿ 74 ಲಕ್ಷ 40 ಸಾವಿರ ರೂಪಾಯಿಯಷ್ಟು ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ಈ ಘಟನೆಯಲ್ಲಿ ದೋಚಿಕೊಂಡು ಹೋಗಿರುವ ವ್ಯಕ್ತಿ ಬೇರೆ ಯಾರು ಅಲ್ಲ, ಅವರ ಮನೆಯಲ್ಲಿಯ ಸಂಬಂಧಿಕರೇ. ಇದನ್ನು ಕೇಳಿ ಆಶ್ಚರ್ಯ ವಾಯಿತಲ್ಲವೇ ಹೌದು ಈ ಕಳ್ಳತನ ಮಾಡಿದ್ದು ಆ ಮನೆಯಲ್ಲಿದ್ದ ಸಂಬಂಧಿಕರೆ ಹೊರತು ಬೇರಾರಿಲ್ಲ.
ಪೊಲೀಸರ ಪ್ರಕಾರ, ಭಂಡಾರಿ ಎಂಬ ವ್ಯಕ್ತಿಯ ‘ಚಾಕಣ’ದಲ್ಲಿ ಮಸಾಲೆಯ ವ್ಯವಸಾಯವಿದೆ. ಕೋರೊನಾ ವೈರಸ್ ನಿಂದ ಅಲ್ಲಿಯ ಬ್ಯಾಂಕ್ ಗಳು ಎಲ್ಲ ಕಡೆ ಬಂದ ಆಗಿದ್ದರಿಂದ ವ್ಯವಸಾಯದಲ್ಲಿ ಬಂದಂತಹ ಹಣ ಬ್ಯಾಂಕ್ ನಲ್ಲಿ ಇಡಲು ಸಾಧ್ಯವಾಗಲಿಲ್ಲ. ಆದುದರಿಂದ ಆ ಹಣವನ್ನು ಅವರು ತಮ್ಮ ಮನೆಯ ಕಪಾಟಿನಲ್ಲಿ ಇಟ್ಟಿದ್ದರು. ಅದರಲ್ಲಿ ಒಂದು ಕೋಟಿ ರೂಪಾಯಿ ನಗದು ಹಾಗೂ ದಿನ ದಿನ ಕೂಡಿಟ್ಟ ನಗದು ಹಾಗೂ ಬಂಗಾರದ ಆಭರಣಗಳನ್ನು ಕಪಾಟಿನಲ್ಲಿ ಕೂಡಿಟ್ಟಿದ್ದರು. ಲಾಕ್ಡೌನ್ ನಿಂದ ಆ ಕಪಾಟನ್ನು ತೆರೆದು ನೋಡುವ ಸಂದರ್ಭವೇ ಬಂದಿರಲಿಲ್ಲ. ಆದರೆ 3 ಜೂನ್ ರಂದು ಅವರ ಪತ್ನಿ ಆ ಕಪಾಟನ್ನು ತೆರೆದು ನೋಡಿದಾಗ ಅದರಲ್ಲಿ ಹಣ ಮತ್ತು ಆಭರಣ ಎರಡು ಇದ್ದಿರಲಿಲ್ಲ. ಮನೆಯಲ್ಲಿಯೇ ಯಾವುದೇ ವಸ್ತುವಿಗೆ ಧಕ್ಕೆ ಮಾಡದೆ ಕೇವಲ ಕಪಾಟಿನಲ್ಲಿದ್ದ ನಗದು ಮತ್ತು ಆಭರಣ ಇಲ್ಲದಂತಾಗಿವೆ ಎಂದು ತಿಳಿದು ಬಂದಾಗ ಅವಳು ಈ ಕಳ್ಳತನ ತಮ್ಮ ಮನೆಯಲ್ಲಿ ವಾಸಿಸುವ ಸದಸ್ಯರ ಪೈಕಿ ಯಾರಾದರೂ ಮಾಡಿರಬೇಕು ಎಂಬುದು ಅವಳ ಗಮನಕ್ಕೆ ಬಂದಿತು.

ಕೆಲವು ದಿನಗಳ ಹಿಂದೆ ಅವರ ಸಂಬಂಧಿಕರಲ್ಲಿಯ ಒಬ್ಬ ಮಹಿಳೆ ಮನೆಗೆ ಬಂದಿದ್ದಳು. ಅವಳಿಗೆ ವ್ಯಾಪಾರಿಯ ಪತ್ನಿ ಈ ಘಟನೆಯ ಕುರಿತು ಕೇಳಿದಾಗ ಏನೋ ಮುಚ್ಚಿಡುವಂತೆ ಉತ್ತರ ನೀಡಿದಳು. ಆಗ ಅವಳ ಮೇಲೆ ಸಂಶಯ ಬಂದು ಗಂಡನಿಗೆ ತಿಳಿಸಿದಳು. ಆಗ ಆಕೆಯ ಪತಿ ಮಹಿಳೆಯನ್ನು ವಿಚಾರಿಸಿದಾಗ ಸತ್ಯ ಹೊರಗಡೆ ಬಿದ್ದಿತು. ಈಕೆ ಮನೆಯಲ್ಲಿ ಕಳವು ಮಾಡಿ ಆಕೆಯ ಸ್ನೇಹಿತ ಅನಿಕೇತ್ ಸುರೇಂದ್ರ ಬುಬಣೆ ಹೆಸರಿನವನಿಗೆ ಕೊಡುತ್ತಿದ್ದಳು ಎಂದು ಹೇಳಿದಳು. ಆಗ ಪತ್ನಿ ಮತ್ತು ಪತಿ ಇಬ್ಬರು ಕೂಡಿ ಅನಿಕೇತನ ಜೊತೆಗೆ ಅವರ ಸಂಬಂಧಿಕರ ಜೊತೆ ಮಾತನಾಡಿ ಈ ಸಮಸ್ಯೆ ಬಗೆಹರಿಸಬೇಕು ಎಂಬ ಉದ್ದೇಶದಿಂದ ಆತನನ್ನು ಹುಡುಕಲು ಅವರ ಮನೆಗೆ ಹೋದರು ಆದರೆ ಆತ ಮನೆಯಲ್ಲಿರಲಿಲ್ಲ. ಆಗ ಬದಿಯಲ್ಲಿದ್ದ ಜನರಿಗೆ ಕೇಳಿದಾಗ ಆತನು ಕೆಲವು ದಿವಸಗಳಿಂದ ಮನೆಗೆ ಬಂದಿಲ್ಲ ಎಂಬುದು ತಿಳಿದು ಬಂದಿತು. ಆಗ ಅವರು ಬಿಬವೇವಾಡಿ ಪೊಲೀಸ್ ಸ್ಟೇಷನ್ ನಲ್ಲಿ ನಡೆದ ಘಟನೆಯ ಕುರಿತು ದೂರು ನೀಡಿದರು. ದೂರು ದಾಖಲಿಸಿದ ನಂತರ ಅಲ್ಲಿಯ ಮುಖ್ಯ ನಿರೀಕ್ಷಕರಾದ ಮುರಳೀಧರ ಖೋಕಲೆ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ತಪಾಸಣೆ ಮಾಡಿದರು. ನಂತರ ಆ ಮಹಿಳೆಯನ್ನು ಬಂಧಿಸಿ ಅವಳನ್ನು ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋದರು. ಪೊಲೀಸ್ ಅಧಿಕಾರಿಗಳು ಅನಿಕೇತ್ ಬುಬಣೆಯ ಶೋಧ ನಡೆಸುತ್ತಿದ್ದಾರೆ.
ಮನೆಯಲ್ಲಿ ಕಳ್ಳತನ ಮಾಡಿದ್ದು ಹೇಗೆ?

ಭಂಡಾರಿ ಮತ್ತು ಅವರ ಕುಟುಂಬ 31 ಮೇ ರಂದು ಕೋಥರೂಢ ನಲ್ಲಿದ್ದ ತಮ್ಮ ಸಂಬಂಧಿಕರ ಕಡೆಗೆ ಹೋಗಿದ್ದರು. ಅವರ ಜೊತೆಗೆ ಈ ಮಹಿಳೆ ಸಹ ಹೋಗಿದ್ದರು ಹೋಗುವಾಗ ಅನಿಕೇತನಿಗೆ ಮನೆ ಮತ್ತು ಲಾಕರ್ ಎರಡು ಕೀಲಿ ಕೈ ಮನೆಯ ಹೊರಗೆ ಇರುವ ಶೂ ಬಿಡುವ ಸ್ಥಳದಲ್ಲಿ ಇಟ್ಟಿದ್ದೇವೆ ಎಂದು ತಿಳಿಸಿದ್ದಳು. ಅಲ್ಲದೆ ಮಹಿಳೆ ಮನೆಯ ಹೊರಗಡೆ ಇದ್ದ ಸಿಸಿಟಿವಿ ಕ್ಯಾಮೆರಾದ ದಿಶೆಯನ್ನು ಬೇರೆ ಬದಿಗೆ ಮಾಡಿದ್ದಳು. ಏಕೆಂದರೆ ಮನೆಯ ಒಳಗಡೆ ಯಾರು ಹೋದರು ಅಥವಾ ಯಾರು ಬಂದರು ಎಂಬದು ಕಾಣಬಾರದು ಎಂಬ ಉದ್ದೇಶದಿಂದ ಈ ಕೆಲಸ ಮಾಡಿದ್ದಳು. ಅವರು ಊರಿಗೆ ಹೋದಾಗ ಮರುದಿವಸ ಅನಿಕೇತ್ ನು ಮನೆಯ ಬಾಗಿಲನ್ನು ತೆಗೆದು ಮನೆಯಲ್ಲಿಯ ಕಪಾಟ್ ನಲ್ಲಿರುವ ಒಂದು ಕೋಟಿ ರೂಪಾಯಿ ನಗದು, ಬಂಗಾರದ ಬಳೆ, ಬಂಗಾರದ ನಾಣ್ಯ, ಡೈಮಂಡ್ ಸೆಟ್, ಕಿವಿಯಲ್ಲಿಯ ಬಂಗಾರದ ಆಭರಣ ಎಲ್ಲ ತಗೆದುಕೊಂಡು ಓಡಿ ಹೋಗಿದ್ದಾನೆ. ಆತನಿಗಾಗಿ ಬಿಬವೇವಾಡಿ ಪೊಲೀಸ್ ಅಧಿಕಾರಿಗಳು ಅವನನ್ನು ಹುಡುಕುವ ಕಾರ್ಯ ನಡೆಸುತ್ತಿದ್ದಾರೆ.
ಇದಕ್ಕಿಂತ ಮುಂಚೆ ಇಬ್ಬರೂ ಕೂಡಿಕೊಂಡು ಆಕ್ಟೊಬರ್ 2019 ರಂದು 50 ಲಕ್ಷ ರೂಪಾಯಿ, ಜೂನ್ 2019 ರಂದು 3 ಲಕ್ಷ ರೂಪಾಯಿ ಲಾಕರ್ ನಿಂದ ಕಳವು ಮಾಡಿದ್ದರು. ಈ ಕಳವು ಮಾಡಿದ ನಂತರವೂ ಹಣ ಸಾಲದೆ ಇದ್ದಾಗ ಈ ಪ್ರಕಾರದ ದೊಡ್ಡ ಕಳವು ಮಾಡಿದ್ದಾರೆ.