ಸ್ಯಾನಿಟೈಜರ್ ನಲ್ಲಿಯ ‘ಈ’ ರಸಾಯನ ಮಾಡುವದು ನಮ್ಮ ಆರೋಗ್ಯಕ್ಕೆ ದೊಡ್ಡ ಹಾನಿ, ಯಾವುದು ತಿಳಿದುಕೊಳ್ಳಿ..

ಚೈನಾದ ಕೋವಿಡ್ ವೈರಸ್ ಜಗತ್ತಿನ ತುಂಬೆಲ್ಲ ಜನರ ಸಾವಿಗೆ ಕುತ್ತು ತಂದು ನಂತರ ಭಾರತದಲ್ಲಿಯೂ ಬಂದು ಆರು ತಿಂಗಳುಗಳೇ ಕಳೆದವು. ಇನ್ನುವರೆಗೆ ಈ ಔಷಧೀಯ ಮೇಲೆ ಯಾವುದೇ ವ್ಯಾಕ್ಸಿನ್ ವನ್ನು ಯಾರಿಗೂ ಕಂಡು ಹಿಡಿಯಲಾಗಿಲ್ಲ. ಜಗತ್ತಿನಾದ್ಯಂತ ಪ್ರಯತ್ನಗಳು ಮಾತ್ರ ಹಗಲು ರಾತ್ರಿ ನಡೆದೇ ಇವೆ.

ಸದ್ಯಕ್ಕೆ ಇದರಿಂದ ಬಚಾವ್ ಆಗಲು ಇದ್ದ ಮಾರ್ಗಗಳು ಮುಖ್ಯವಾಗಿ ಬರೀ ಮೂರೇ. ಅವುಗಳನ್ನೇ ಪದೇ ಪದೇ ಎಲ್ಲರಿಂದ ಹೇಳಲಾಗುತ್ತಿದೆ.

  1. ಸಾಮಾಜಿಕ ಅಂತರ

2.ಮುಖಕ್ಕೆ ಮಾಸ್ಕ್ ಉಪಯೋಗ

  1. ಸಮಯ ಸಮಯಕ್ಕೆ ಸ್ಯಾನಿಟೈಜರ್ ಬಳಕೆ.

ಈ ಮೇಲಿನ ಮೂರರ ಯೋಗ್ಯವಾದ ಉಪಯೋಗದಿಂದ ನಾವು ನಮ್ಮನ್ನು ಕೊರೊನದಿಂದ ರಕ್ಷಿಸಿಕೊಳ್ಳಬಹುದು. ಆದರೆ ಇವುಗಳಲ್ಲಿ ಸ್ಯಾನಿಟೈಜರ್ ನ ಅತೀಯಾದ ಬಳಕೆಯಿಂದ ಶರೀರಕ್ಕೆ ಹಾನಿಯಾಗುವದು ಎಂಬ ವರದಿಯೊಂದು ಬಂದಿದೆ. ಇನ್ನು ಸ್ಯಾನಿಟೈಜರ್ ನಮಗೆ ಯಾವ ರೀತಿಯಾಗಿ ಮಾರಕವಾಗಿದೆ ಎಂಬುದನ್ನು ಇಲ್ಲಿ ನೋಡೋಣ.

ಸ್ಯಾನಿಟೈಜರ್ ನಲ್ಲಿರುವ ಮಿಥೇನಾಲ್ ಹೆಸರಿನ ರಾಸಾಯನಿಕ ಪದಾರ್ಥವು ತುಂಬಾ ಭ ಯಾನಕವಾಗಿದೆ. ಇಲ್ಲಿಯವರೆಗೆ ಇದನ್ನು ಕುಡಿದು ಮೂರು ಜನ ಸಾವನ್ನಪ್ಪಿದ್ದಾರೆ. ಒಬ್ಬನು ಕುರುಡನಾಗಿದ್ದಾನೆ.

ಅತಿಯಾದ ಸ್ಯಾನಿಟೈಜರ್ ಬಳಕೆಯಿಂದ ನಮ್ಮ ದೇಹಕ್ಕೆ ಈ ಕೆಳಗಿನ ಅಪಾಯಗಳು ಸಂಭವಿಸುವವು.

ವಾಕರಿಕೆ, ವಾಂತಿ, ತಲೆತಿರುಗುವಿಕೆ, ಚಡಪಡಿಕೆ, ದೃಷ್ಟಿ ಮಂದವಾಗುವುದು, ತಾತ್ಕಾಲಿಕ ಕುರುಡುತನವು ಸಹಿತ ಬರಬಹುದು. ಶರೀರದ ವ್ಯವಸ್ಥೆಯನ್ನು ಅಸಮತೋಲನ ಮಾಡುವದು. ಈ ವಿಷಾರಿಯಾದ ರಸಾಯನ ದೇಹದ ರಂಧ್ರಗಳಿಂದಲೂ ಒಳಗೆ ಹೋಗುವದು. ದೇಹದ ವ್ಯವಸ್ಥೆಗಳಿಗೆ ಹೆಚ್ಚಿನ ಹಾನಿಯನ್ನು ಉಂಟು ಮಾಡುತ್ತದೆ. ಇದರಿಂದ ಒಮ್ಮೊಮ್ಮೆ ಮನುಷ್ಯನು ತನ್ನ ಜೀವವನ್ನು ಕಳೆದುಕೊಳ್ಳಬಹುದು.

ಹಾಗಾದರೆ ಇದರಿಂದ ಬಚಾವಾಗಲು ತೆಗೆದುಕೊಳ್ಳುವ ಸೂಕ್ತ ಕ್ರಮಗಳು ಯಾವವು ಎಂಬುದನ್ನು ಗಮನಿಸಿ.

  • ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ.
  • ಯಾವುದೇ ಸ್ಯಾನಿಟೈಜರ್ ಯೂಜ್ ಮಾಡುವದಕ್ಕಿಂತ ಸಾಬೂನಿನ ನೀರಿನಿಂದಲೇ ಕೈ ತೊಳೆಯುವುದು ತುಂಬಾ ಉತ್ತಮ.
  • ಕೈ ತೊಳೆಯಲು ಸೋಪ್ ಮತ್ತು ನೀರು ಲಭ್ಯವಿಲ್ಲದಿದ್ದಾಗ ಮಾತ್ರ ಸ್ಯಾನಿಟೈಜರ್ ದ ಬಳಕೆಯನ್ನು ಮಾಡಿ.
  • ನಿಮ್ಮ ಸ್ಯಾನಿಟೈಜರ್ ನಲ್ಲಿ 60% ಆಲ್ಕೋಹಾಲ್ ಹೊಂದಿರಬೇಕು.
  • ಕೈಗವಜುಗಳನ್ನು ಧರಿಸುವದರಿಂದಲೂ ಸ್ಯಾನಿಟೈಜರ್ ಉಪಯೋಗದಿಂದ ಮುಕ್ತಿ ಪಡೆಯಬಹುದು, ಕೈಗವಜುಗಳ ಮೇಲೆ ಸ್ಯಾನಿಟೈಜರ್ ಉಪಯೋಗಿಸಿದರೂ ಕೈಗಳಿಗೆ ಮಾತ್ರ ಯಾವುದೇ ಹಾನಿಯಾಗುವದಿಲ್ಲ.