ಸ್ವಾಮೀಜಿಗೆ ಕೆಣಕಿದ್ದೇ ಬಿತ್ತು ವ್ಯಕ್ತಿಗೆ ಭಾರಿ ದುಬಾರಿ; ಹಾಡು ಹಗಲೇ ಕುಸ್ತಿ ಆಖಾಡದಲ್ಲಿ ಚುಕ್ಕೆ ತೋರಿಸಿದರು ಸ್ವಾಮೀಜಿ…

ಯಾವುದೇ ವ್ಯಕ್ತಿ ಆತ ಧರಿಸಿಕೊಳ್ಳುವ ಉಡುಪಿನಿಂದ ಆತ ಇದೇ ರೀತಿ ಇದ್ದಾನೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಇದೇ ತಪ್ಪು ಮಾಡಿ ಜಮಾಯಿಸಿದ ಜನರ ಎದುರು ತೀವ್ರ ಮುಖಭಂಗವನ್ನು ಅನುಭವಿಸಿದ್ದಾನೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ತುಂಬಿದ ಜನರ ಮಧ್ಯ ಮೈದಾನದಲ್ಲಿ ಕುಸ್ತಿಯ ಸ್ಪರ್ಧೆ ನಡೆದಿದೆ. ಮೈದಾನದ ಸುತ್ತಲೂ ಸಾಕಷ್ಟು ಜನರು ಜಮಾಯಿಸಿದ್ದಾರೆ. ಏತನ್ಮಧ್ಯೆ ಜುಬ್ಬಾ ಮತ್ತು ಪಂಚೆ ತೊಟ್ಟ ಸ್ವಾಮೀಜಿಯೊಬ್ಬರು ಕೈಯಲ್ಲಿ ಮೈಕ್ ಹಿಡಿದು ಜನರಿಗೆ ಸಂಬೋಧಿಸಲು ಶುರುಮಾಡುತ್ತಾರೆ. ಅದೇ ಸಮಯಕ್ಕೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಯಾವುದೇ ವಿಚಾರ ಮಾಡದೆ ಮೈಕಿನಲ್ಲಿ ಸಂಬೋಧಿಸುತ್ತಿರುವ ಸ್ವಾಮೀಜಿಗೆ ತಲೆಯ ಮೇಲೆ ಹೊಡೆಯಲು ಶುರು ಮಾಡುತ್ತಾನೆ. ತಲೆ ಮೇಲೆ ಹೊಡೆಯುತ್ತಿರುವ ವ್ಯಕ್ತಿ ಮೊದಲು ಪೈಲ್ವಾನ್ ಇದ್ದಂತೆ ಕಂಡು ಬರುತ್ತದೆ. ಹೀಗಾಗಿ ಪೈಲ್ವಾನ್ ತನ್ನ ಬಲವನ್ನು ತೋರಿಸಲು ಜುಬ್ಬಾ ಪಂಚೆ ತೊಟ್ಟ ವ್ಯಕ್ತಿಗೆ ಒಂದೇಸವನೆ ಹೊಡೆಯಲು ಶುರುಮಾಡುತ್ತಾನೆ. ಆದರೂ ಸ್ವಾಮೀಜಿ ಸಹನೆಯನ್ನು ತೆಗೆದುಕೊಂಡು ಯಾವುದೇ ರೀತಿಯ ಪ್ರತಿಕಾರ ಮಾಡುವುದಿಲ್ಲ. ಕಿರುಕುಳ ಕೊಡುತ್ತಿರುವ ವ್ಯಕ್ತಿ ಇದರ ದುರುಪಯೋಗ ಮಾಡಿಕೊಂಡು ಸ್ವಾಮೀಜಿಗೆ ಮತ್ತಷ್ಟು ಕಿರುಕುಳ ನೀಡಲು ಮುಂದಾಗುತ್ತಾನೆ. ಒಟ್ಟಿನಲ್ಲಿ ಪಂಚೆಯುಟ್ಟು ಸ್ವಾಮೀಜಿ ತರಹ ಕಾಣುವ ವ್ಯಕ್ತಿಗೆ ಪೈಲ್ವಾನ್ ತುಂಬಾ ಹಗುರವಾಗಿ ಕಾಣುತ್ತಾನೆ. ಆದರೆ ಇದು ಬಹಳ ಹೊತ್ತು ನಡೆಯುವ ಹಾಗಿರಲಿಲ್ಲ. ಪಂಚೆಯುಟ್ಟ ವ್ಯಕ್ತಿಯ ಸಹನೆ ಮೀರಿದಾಗ ಮಾತ್ರ ಕಿರುಕುಳ ನೀಡುವ ವ್ಯಕ್ತಿಗೆ ಇದು ತುಂಬಾ ದುಬಾರಿಯಾಗಿ ಪರಿಣಮಿಸುತ್ತದೆ. ಸ್ವಾಮೀಜಿಯ ಹಾಗೆ ಕಂಡುಬರುವ ವ್ಯಕ್ತಿ ಕಿರುಕುಳ ನೀಡುತ್ತಿರುವ ಪೈಲ್ವಾನ್ ಗೆ ಕ್ಷಣದಲ್ಲಿ ಎತ್ತಿ ತಿರುತಿರುಗಿಸಿ ಗಾಳಿಯಲ್ಲಿ ಸುತ್ತಾಡಿಸಿ ಎರಡು ಮೂರು ಸಲ ನೆಲಕ್ಕೆ ಅಪ್ಪಳಿಸಿದಾಗ ಪೈಲ್ವಾನನ ದಿಕ್ಕು ತಪ್ಪುತ್ತದೆ. ಮತ್ತು ಅಲ್ಲಿಂದ ಮೊದಲು ಹೇಗಾದರೂ ಮಾಡಿ ಓಡಿ ಹೋಗಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲ ಭವಿಷ್ಯದಲ್ಲಿ ಇನ್ನು ಮುಂದೆ ಯಾವ ಸ್ವಾಮೀಜಿಯ ತಂಟೆಗೂ ಹೋಗುವುದಿಲ್ಲ ಇದು ನಿಜ.

ವಿಡಿಯೋ ನೋಡಿ

ಪ್ರಸ್ತುತ ವೀಡಿಯೊವನ್ನು ಯುಟ್ಯೂಬ್ ನಲ್ಲಿ Dev ke shorts ಹೆಸರಿನ ಚಾನೆಲ್ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಒಂದೇ ಒಂದು ತಿಂಗಳ ಹಿಂದೆ ಪೋಸ್ಟ್ ಮಾಡಲಾಗಿದ್ದು ಇಲ್ಲಿಯವರೆಗೆ 41 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಲ್ಲದೆ 1.6 ಮಿಲಿಯನ್ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ನೇಟಿಜನ್ಸ್ ಗಳು ಸ್ವಾಮೀಜಿಯ ಈ ರೂಪ ನೋಡಿ ಶಾಕ್ ಆಗಿದ್ದಾರೆ. ಮತ್ತು ಕಿರುಕುಳ ನೀಡಿದ ವ್ಯಕ್ತಿಗೆ ಸರಿಯಾಗಿ ಪಾಠ ಕಲಿಸಿದ್ದಕ್ಕೆ ಸ್ವಾಮೀಜಿಯನ್ನು ತಮ್ಮ ಕಮೆಂಟುಗಳಲ್ಲಿ ಪ್ರಶಂಸಿಸಿದ್ದಾರೆ.