ಹನ್ನೊಂದು ಗಂಟೆಗೆ 12 ನೇ ತರಗತಿಯ ಪರೀಕ್ಷೆ, ಮುಂಜಾನೆ ತಂದೆಯ ಮೃತ್ಯು; ಕೊನೆಯವರೆಗೆ ತಾಳ್ಮೆ ಕಳೆದುಕೊಳ್ಳದೆ ಗಣೇಶ…………!!!!

ಕಾಗಲ್,: ಅಂದು ಅಂದರೆ ದಿನಾಂಕ 11 ಮಾರ್ಚ ರಂದು 11 ಗಂಟೆಗೆ 12ನೇ ತರಗತಿಯ ಬೋರ್ಡ್ ಪರೀಕ್ಷೆ ಇತ್ತು. ಇದರ ಸಲುವಾಗಿ ಗಣೇಶ ಕಾಂಬಳೆ ಅಭ್ಯಾಸ ಮಾಡಿ ಪರೀಕ್ಷೆಯ ಸಿದ್ಧಪಡಿಸುತ್ತಿದ್ದರು. ತನ್ನ ಕುಟುಂಬವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಶಿಕ್ಷಣವು ಒಂದು ಆಯ್ಕೆ ಎಂದು ಅವರು ತಿಳಿದಿದ್ದರು. ಇವರ ತಂದೆ ಮಹಾದೇವ ಕಾಂಬಳೆ ನಗರಪಾಲಿಕೆಯಲ್ಲಿ ಕ್ಲೀನರ್ ಆಗಿದ್ದರು. ಗಣೇಶ ಪ್ರತಿದಿನ ತನ್ನ ತಂದೆಯ ಕಷ್ಟವನ್ನು ನೋಡುತ್ತಿದ್ದನು. ಆದರೆ ಪರೀಕ್ಷೆಯ ಬೆಳಗಿನ ಜಾವ ಇದ್ದಕ್ಕಿದ್ದಂತೆ ತಂದೆಯ ಸಾವಿನ ಸುದ್ದಿ ಕೇಳಿ ಹೃದಯ ಕಲಕಿತು.

“ತುಂಬಾ ಅಭ್ಯಾಸ ಮಾಡು… ದೊಡ್ಡ ವ್ಯಕ್ತಿ ಆಗು” ಎಂದು ಸದಾ ಪ್ರೋತ್ಸಾಹಿಸುತ್ತಿದ್ದ ತಂದೆ ತನ್ನನ್ನು ತೊರೆದು ಹೋದ ದುಃಖ ಆತನಿಗೆ ಸಹಿಸಲಾಗಲಿಲ್ಲ. ಅಂತಹದರಲ್ಲಿ ಜೀವನದಲ್ಲಿ ಮಹತ್ವದ ಘಟ್ಟ ಅಂದರೆ 12 ನೇ ತರಗತಿಯ ಪರೀಕ್ಷೆ. ಆದರೂ ಸಹ ಆತನು ತನ್ನ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ಒಂದೆಡೆ ತಂದೆಯ ಸಾವು ಮತ್ತೊಂದೆಡೆ ಮಹತ್ವದ ಪರೀಕ್ಷೆ ಏನು ಮಾಡಬೇಕೆಂದು ಅರಿಯದೆ ಆತನು ತನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡು, ತಂದೆಯ ಸಾವಿನಿಂದ ಮನನೊಂದ ಅವರು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪೇಪರ್ ಕೊಟ್ಟರು. ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಕೊನೆಯ ಪ್ರಶ್ನೆಯನ್ನು ಪರಿಹರಿಸುವಾಗ ಅವರ ಕಣ್ಣಲ್ಲಿ ನೀರು ತುಂಬಿ ಬಂದವು. ಪರೀಕ್ಷೆಯನ್ನು ಬರೆದ ನಂತರ, ಅವರು ತಮ್ಮ ತಂದೆಯ ಅಂತ್ಯಕ್ರಿಯೆಯ ವಿಧಿಗಳನ್ನು ಮಾಡಿದರು. ಇದು ಮಹಾರಾಷ್ಟ್ರ ರಾಜ್ಯದ ಕೋಲ್ಹಾಪುರ್ ಜಿಲ್ಲೆಯ ಕಾಗಲ್ ತಾಲೂಕಿನ ಮುರಗುಡದ ಊರಿನಲ್ಲಿ ನಡೆದ ಒಂದು ಅಹಿತಕರ ಘಟನೆಯಾಗಿದೆ.

ಮಹಾದೇವ ಕಾಂಬಳೆ ಅವರು ತಮ್ಮ ಮಗುವಿನ ಶಿಕ್ಷಣಕ್ಕಾಗಿ ಕಷ್ಟಪಡುತ್ತಿದ್ದರು. ಹೀಗಾಗಿ ಕೆಲಸ ಮಾಡುತ್ತಲೇ ಸಣ್ಣ, ದೊಡ್ಡ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಕ್ಕಳು ಯಾವುದೇ ಕೊರತೆಯನ್ನು ಅನುಭವಿಸಬಾರದು ಎಂಬುದು ಇದರ ಹಿಂದಿರುವ ಪ್ರಯತ್ನ. 64 ನೇ ವಯಸ್ಸಿನಲ್ಲಿ ಗುರುವಾರ ಬೆಳಗ್ಗೆ ಹೃದಯಾ#ಘಾತ ನಿರ್ಮಾಣವಾಯಿತು. ಕೂಡಲೇ ಅವರನ್ನು ಕೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಅವರು ಮೃತಪಟ್ಟರು. ಆದರೆ ಗಣೇಶನಿಗೆ ಈ ಕೊರಗು ಬಹಳ ದುಃಖ ತಂದಿತು. ಗಣೇಶನು ಶಿವರಾಜ್ ಕಾಲೇಜಿನಲ್ಲಿ 12ನೇ ತರಗತಿ ಓದುತ್ತಿದ್ದರು.

ಬೆಳಿಗ್ಗೆ ಗಣೇಶನ ಫಿಸಿಕ್ಸ್ ಪೇಪರ್ ಇತ್ತು. ಪರೀಕ್ಷೆಗೆ ಹೋಗುವ ಮುನ್ನವೇ ತಂದೆಯ ಸಾವಿನ ಸುದ್ದಿ ಕೇಳಿ ಗಣೇಶ ದಿಗ್ಭ್ರಮೆಗೊಂಡರು. ಅಷ್ಟರಲ್ಲಿ ಕಾಲೇಜು ಅಧ್ಯಾಪಕರು ಅವರನ್ನು ಸಮಾಧಾನಪಡಿಸಿ ಪೇಪರ್ ಕೊಡುವಂತೆ ಹೇಳಿದರು. ಅವರು ಮೂರು ಗಂಟೆಗಳ ಕಾಲ ತಮ್ಮ ಭೌತಿಕಶಾಸ್ತ್ರ ಪೇಪರ ಪರಿಹರಿಸಿದರು. ಅಲ್ಲಿಯವರೆಗೆ ತಂದೆಯ ಅಂತ್ಯಕ್ರಿಯೆಯನ್ನು ಮುಂದೂಡಲಾಯಿತು. ಪರೀಕ್ಷೆ ಮುಗಿದ ಮೇಲೆ ಮನೆಗೆ ತೆರಳಿ ತನ್ನ ಅಪ್ಪನ ಚಿತೆಯ ಮೇಲೆ ತಲೆಯಿಟ್ಟು ಅಳತೊಡಗಿದರು ತದನಂತರ ಅವರ ಅಂತ್ಯಕ್ರಿಯೆ ಮಾಡಿದರು.

ಇಂದಿನ ಕಾಲದಲ್ಲಿ ಶಿಕ್ಷಣಕ್ಕೆ ತುಂಬಾ ಮಹತ್ವವಿದೆ, ಶಿಕ್ಷಣದಿಂದ ಏನನ್ನು ಸಹ ಸಾಧಿಸಬಹುದು ಎಂದು ಅರಿತ ಈ ವ್ಯಕ್ತಿ ತನ್ನ ತಂದೆಯ ಸಾವಿನ ಸುದ್ದಿ ಕೇಳಿಯೂ ಸಹ ತನ ಧೈರ್ಯ, ತಾಳ್ಮೆ ಕಳೆದುಕೊಳ್ಳದೆ ಪರೀಕ್ಷೆ ಬರೆದರು ಇವರ ಈ ಸಾಹಸಕ್ಕೆ ಯಶಸ್ಸು ದೊರೆಯಲಿ, ಅವರ ಪರೀಕ್ಷೆಯ ಫಲಿತಾಂಶ ಚೆನ್ನಾಗಿ ಬರಲಿ, ಅವರು ತಮ್ಮ ತಂದೆಯ ಆಸೆ ಪೂರೈಸುವ ಶಕ್ತಿ ಆ ದೇವರು ಇವರಿಗೆ ನೀಡಲಿ ಎಂದು ಹಾರೈಸೋಣ.