ಹಸಿರು ಬನಸಿರಿಯಲ್ಲಿ ಗರಿಗೆದರಿದ ನವಿಲಿನ 14 ಸೆಕೆಂಡುಗಳ ಸಂಚಲನ ನೋಡಿ ಈ ವೈರಲ್ ವಿಡಿಯೋದಲ್ಲಿ….
ವನ್ಯಜೀವಿಗಳ ನೃತ್ಯವೆಂದಾಗ ಮೊದಲು ಕಣ್ಣಮುಂದೆ ನಿಲ್ಲುವುದು ನವಿಲು. ನವಿಲಿನ ಸುಂದರವಾದ ಮೋಹಕ ನೃತ್ಯಕ್ಕೆ ಮನಸೋಲದವರು ಯಾರು?
ಐಎಫ್ಎಸ್ ಅಧಿಕಾರಿಯಾದ ಸುಶಾಂತ್ ನಂದಾ ಅವರು ಟ್ವಿಟರ್ನಲ್ಲಿ ಹಚ್ಚ ಹಸಿರಿನಿಂದ ತುಂಬಿದ ಕಾಡಿನಲ್ಲಿ ಗರಿಗೆದರಿದ ನವಿಲಿನ ಸಂಚಲನದ ವಿಡಿಯೋ ಒಂದು ಶೇರ್ ಮಾಡಿದ್ದಾರೆ. ನವಿಲಿನ ಮೋಹಕವಾದ ಈ ಚಲನವಲನವನ್ನು ನೋಡಲು ನಿಜಕ್ಕೂ ಎರಡು ಕಣ್ಣುಗಳು ಸಾಲವು. ವಿಡಿಯೋದಲ್ಲಿ ಕೇಳಿಬರುವ ತಿಳಿಯಾದ ಕಿವಿಗೆ ಇಂಪು ನೀಡುವ ಸಂಗೀತವು ವಿಡಿಯೋಗೆ ವಿಶಿಷ್ಟವಾದ ಮೆರಗು ತಂದಿದೆ. ವಿಡಿಯೋದ ಕ್ಯಾಪ್ಷನ್ ನಲ್ಲಿ ಸುಶಾಂತ್ ನಂದಾ ಅವರು “I believe in God, only I spell it Nature” ಎಂದು ಬರೆದಿದ್ದಾರೆ.
ಇದೀಗ ಸಾಯಂಕಾಲದಲ್ಲಿಯೇ ಅಪ್ಲೋಡ್ ಮಾಡಿದ ಈ ವಿಡಿಯೋವನ್ನು ನೇಟಿಜನ್ಸ್ ಗಳು ಸಾವಿರಾರು ಬಾರಿ ನೋಡಿ ಅನೇಕ ರೀತಿಯ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ನೋಡಿ ಈ ವಿಡಿಯೋ…
“I believe in God, only I spell it Nature”
🎥:Wildlover pic.twitter.com/4UyjBF5KOS
— Susanta Nanda IFS (@susantananda3) April 11, 2022