ಹಾರ್ದಿಕ್ ಪಾಂಡ್ಯ ಬಳಿಯಲ್ಲಿದ್ದ 5 ಕೋಟಿ ಮೌಲ್ಯದ 2 ಗಡಿಯಾರಗಳನ್ನು ವಶಪಡಿಸಿಕೊಂಡ ಕಸ್ಟಮ್ ಅಧಿಕಾರಿ!

ಕರೊನಾ ಮಹಾಮಾರಿಯಿಂದಾಗಿ ಟಿ-20 ವಿಶ್ವಕಪ್ ಯುಎಇಯಲ್ಲಿ ಆಯೋಜನೆ ಮಾಡಲಾಗಿತ್ತು. ಐಸಿಸಿ ಈ ವಿಶ್ವಕಪ್ ನಿಂದ ಹೊರಗೆ ಬಿದ್ದಾಗ ಹಾರ್ದಿಕ್ ಪಾಂಡ್ಯಾಸಹ ಭಾರತೀಯ ತಂಡ ನಿನ್ನೆ ರಾತ್ರಿ ಮರಳಿ ತಾಯ್ನಾಡಿಗೆ ಬಂದರು. ಆದರೆ ವಿಮಾನ ನಿಲ್ದಾಣದಲ್ಲಿ ತಲುಪುತ್ತಿದ್ದಂತೆಯೇ ಕಸ್ಟಮ್ ಅಧಿಕಾರಿ ಹಾರ್ದಿಕ್ ಪಾಂಡ್ಯಾಯವರ ಬಳಿಯಲ್ಲಿದ್ದ ಸುಮಾರು ಐದು ಕೋಟಿ ಮೌಲ್ಯ ಹೊಂದಿದ ಎರಡು ಗಡಿಯಾರಗಳನ್ನು ತಮ್ಮ ವಶಪಡಿಸಿಕೊಂಡಿದ್ದಾರೆ.

ಹಾರ್ದಿಕ ಪಾಂಡ್ಯ ಹತ್ತಿರ ಈ ಗಡಿಯಾರದ ಕುರಿತು ಯಾವುದೇ ಇನವಾಯಿಸ್ ಇದ್ದಿರಲಿಲ್ಲ. ಹಾಗೆಯೇ ಪಾಂಡ್ಯಾ ಈ ಗಡಿಯಾರದ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ ಎಂಬುದು ತಿಳಿದು ಬಂದಿದೆ.

ಟಿ-20 ವಿಶ್ವಕಪ್ 2021 ರ ಸ್ಪರ್ಧೆಯಲ್ಲಿ ಭಾರತೀಯ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದೆ. ಇದರಿಂದ ಭಾರತೀಯ ತಂಡದ ಪ್ರದರ್ಶನ “ಸೂಪರ್-12” ನಲ್ಲಿಯೇ ಮುಕ್ತಾಯ ವಾಯಿತು. ಈ ಸ್ಪರ್ಧೆಯಿಂದ ಹೊರಗೆ ಬಿದ್ದ ಭಾರತೀಯ ತಂಡ ನಿನ್ನೆ ರಾತ್ರಿ ತಡವಾಗಿ ತಾಯ್ನಾಡಿಗೆ ಮರಳಿತು. ಈ ಸಮಯದಲ್ಲಿ ಕಸ್ಟಮ್ ಅಧಿಕಾರಿಗೆ ಹಾರ್ದಿಕ್ ಪಾಂಡ್ಯ ಅವರ ಬಳಿ 5 ಕೋಟಿ ಮೌಲ್ಯ ಹೊಂದಿದ ಎರಡು ಗಡಿಯಾರಗಳು ದೊರೆತವು. ಆದರೆ, ಹಾರ್ದಿಕ್ ಅವರ ಹತ್ತಿರ ಈ ಗಡಿಯಾರಗಳ ಕುರಿತು ಯಾವುದೇ ಪಾವತಿ ಇರಲಿಲ್ಲ. ಹಾಗೆಯೇ ಹಾರ್ದಿಕ್ ಈ ಗಡಿಯಾರಗಳು ಕಸ್ಟಮ್ ವಸ್ತುವಿನಲ್ಲಿ ಸಮಾವೇಶ ಸಹ ಮಾಡಿರಲಿಲ್ಲ. ಇದರಿಂದ ಅಲ್ಲಿಯ ಕಸ್ಟಮ್ ಅಧಿಕಾರಿಗಳು ಹಾರ್ದಿಕ ಅವರ ಐದು ಕೋಟಿ ಮೌಲ್ಯದ ಎರಡು ಗಡಿಯಾರಗಳನ್ನು ತಮ್ಮ ವಶಪಡಿಸಿಕೊಂಡಿದ್ದಾರೆ.