Articles

ಚಿತ್ರದಲ್ಲೇನಿದೆ ನಿಮಗೆ ಗುರುತಿಸಲು ಸಾಧ್ಯವೇ? IFS ಅಧಿಕಾರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿ ಕೇಳಿದ್ದಾರೆ ಈ ಪ್ರಶ್ನೆ…

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ವಿಶೇಷ ಮತ್ತು ವಿಚಿತ್ರ ಫೋಟೋಗಳು ಶೇರ್ ಆಗುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವೊಂದು ಫೋಟೋಗಳು ನೋಡಿದರೆ ತಲೆಯಲ್ಲಿ ನಿಶ್ಚಿತವಾಗಿಯೂ ಹುಳ ಸೇರುತ್ತವೆ. ಸದ್ಯ ಐಎಫ್ಎಸ್ ಆಫೀಸರ್ ಆದ ಸುರೇಂದ್ರ ಮೇಹರಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮುಖಾಂತರ ಒಂದು ಜೀವಿಯ ಅವಯವದ ಚಿತ್ರವನ್ನು ಶೇರ್ ಮಾಡಿ ಪ್ರಶ್ನೆಯೊಂದನ್ನು ಹಾಕಿದ್ದಾರೆ. ಪ್ರಸ್ತುತ ಚಿತ್ರವನ್ನು ತೋರಿಸಿ ಇದು ಯಾವ ಪ್ರಾಣಿಯ ಅವಯವವಾಗಿದೆ ಎಂದು ಕೇಳಿದ್ದಾರೆ.

ಮಿತ್ರರೇ ನಿಮಗೆ ಏನಾದರೂ ಗೊತ್ತಾಗುತ್ತಾ ಪ್ರಸ್ತುತ ಚಿತ್ರದಲ್ಲಿ ಯಾವ ಪ್ರಾಣಿಯ ಅವಯವ ಇದೆ ಅಂತ.

ನೋಡಿ ಈ ಪೋಸ್ಟ್…

https://twitter.com/surenmehra/status/1560449203301908480?ref_src=twsrc%5Etfw%7Ctwcamp%5Etweetembed%7Ctwterm%5E1560449203301908480%7Ctwgr%5E3feff15e6ed56e67b8fc8645e9dde02b916c22c0%7Ctwcon%5Es1_c10&ref_url=https%3A%2F%2Fndtv.in%2Fzara-hatke%2Fcan-you-guess-the-animal-ifs-officer-shares-pic-of-jaws-asks-netizens-for-answer-3284346

ಐಎಫ್ಎಸ್ ಆಫೀಸರ್ ಅವರು ಯಾವುದೋ ಒಂದು ಪ್ರಾಣಿಯ ತುಂಬಾ ಕ್ಲೋಸ್ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಕಾಣಿಸುವ ಭಾಗ ಯಾವ ಪ್ರಾಣಿಯದ್ದಾಗಿದೆ ಎಂಬುದರ ಬಗ್ಗೆ ಪ್ರಶ್ನೆಯನ್ನು ಹಾಕಿದ್ದಾರೆ. ವೈರಲ್ ಆಗುತ್ತಿರುವ ಈ ಫೋಟೋವನ್ನು ನೋಡಿ ನೆಟ್ಟಿಗರು ಅನೇಕ ರೀತಿಯ ಕಮೆಂಟ್ಗಳನ್ನು ರಿಪ್ಲೈ ಮಾಡುತ್ತಿದ್ದಾರೆ. ಈ ಫೋಟೋ ಮೊದಲ ಬಾರಿಗೆ ನೋಡಿದ ನಂತರ ಪ್ರಸ್ತುತ ಜೀವಿಯನ್ನು ಗುರುತಿಸುವುದು ತುಂಬಾ ಕಷ್ಟವಾಗುತ್ತಿದೆ. ಇವರು ಯಾವಾಗಲೂ ತಮ್ಮ ಟ್ವಿಟರ್ ಅಕೌಂಟ್ ನಿಂದ ಪ್ರಾಣಿಗಳ ವಿಶೇಷ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಐಎಫ್ಎಸ್ ಸುರೇಂದ್ರ ಮೇಹರಾ ಅವರು ಭಾರತೀಯ ಅರಣ್ಯ ಇಲಾಖೆಯಲ್ಲಿ 1999 ರಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಚಿತ್ರವನ್ನು ನೋಡಿ ಕೆಲವರು ಹಾವಿನ ಹಲ್ಲುಗಳೆಂದರೆ, ಇನ್ನೂ ಕೆಲವರು ಮೊಸಳೆಯ ಹಲ್ಲುಗಳು ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಮೇಹರಾ ಅವರು ಆ ಪ್ರಾಣಿಯ ಫೋಟೋವನ್ನೇ ಶೇರ್ ಮಾಡಿ ಪ್ರಸ್ತುತ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ಅವರು ಶೇರ್ ಮಾಡಿದ ಫೋಟೋದಲ್ಲಿ ಮೊಸಳೆ ಕಂಡು ಬರುತ್ತಿದೆ.

https://twitter.com/surenmehra/status/1562280830478610432?ref_src=twsrc%5Etfw%7Ctwcamp%5Etweetembed%7Ctwterm%5E1562280830478610432%7Ctwgr%5E3feff15e6ed56e67b8fc8645e9dde02b916c22c0%7Ctwcon%5Es1_c10&ref_url=https%3A%2F%2Fndtv.in%2Fzara-hatke%2Fcan-you-guess-the-animal-ifs-officer-shares-pic-of-jaws-asks-netizens-for-answer-3284346

Leave a Comment

Your email address will not be published. Required fields are marked *