Articles

5G Service : ಭಾರತದಲ್ಲಿ ಅಕ್ಟೋಬರ್ ನಿಂದ 5G ಸೇವೆ ಪ್ರಾರಂಭ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿದರು ಮಾಹಿತಿ…

ಈಗಷ್ಟೇ 5G ಸ್ಪೆಕ್ಟ್ರಮ್ ಹರಾಜು ನಡೆಯಿತು. ಈ ಹರಾಜಿನಿಂದ ಸರಕಾರ ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಆದಾಯ ಕಲೆ ಹಾಕಿಕೊಂಡಿತು. ಈ ಮಹತ್ವದ ಹರಾಜಿನ ನಂತರ 5G ಸೇವೆ ಯಾವಾಗ ಪ್ರಾರಂಭವಾಗುವುದು ಎಂಬುದರ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಉತ್ತರವನ್ನು ನೀಡಿದ್ದಾರೆ.

ದೇಶದೆಲ್ಲಡೆ ಅಕ್ಟೋಬರ್ 12 ರಿಂದ 5G ಸೇವೆ ಪ್ರಾರಂಭವಾಗಲಿದೆ ಎಂದು ಅಶ್ವಿನಿ ವೈಷ್ಣವ್ ಅವರು ಇಂದು ಗುರುವಾರ ಮಾಹಿತಿ ನೀಡಿದ್ದಾರೆ. ಈ ಸೇವೆ ಪ್ರಾರಂಭವಾದ ನಂತರ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಕಡೆಯೂ ವಿಸ್ತರಿಸಲಾಗುವುದು. ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ದೇಶದ ತುಂಬಾ ಈ ಸೇವೆ ಸಂಪೂರ್ಣವಾಗಿ ನೀಡುವ ಉದ್ದೇಶ ಸರಕಾರ ಹೊಂದಿದೆ ಎಂದು ಉಚ್ಚರಿಸಿದ್ದಾರೆ. ಇದಕ್ಕಾಗಿ ಹಳ್ಳಿ ಮತ್ತು ಪಟ್ಟಣ ಎರಡೂ ಭಾಗಗಳ ಕಡೆಗೆ ಗಮನ ನೀಡುತ್ತಿದ್ದೇವೆ. ಇದಕ್ಕಾಗಿ ದೂರ ಸಂಚಾರ ಆಪರೇಟರ್ಗಳು ತುಂಬಾ ವೇಗವಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲ ಕಡೆಗೆ ಇನ್ಸ್ಟಾಲೇಶನ್ ಕೆಲಸ ಪೂರ್ಣವಾಗಿದೆ. ಹೀಗಾಗಿ ಒಟ್ಟಿನಲ್ಲಿ ಅಕ್ಟೋಬರ್ 12ರಿಂದ ಈ ಸೇವೆ ಪ್ರಾರಂಭವಾಗುವ ಉದ್ದೇಶ ಸಾಧ್ಯವಾಗಲಿದೆ. ಈ 5G ಸೇವೆ ಸರ್ವಸಾಮಾನ್ಯ ಜನತೆಗೂ ಕೈಗೆಟಕುವ ದರದಲ್ಲಿ ಇರುವಂತೆ ಸರಕಾರ ವಿಚಾರ ಮಾಡುತ್ತಿದೆ ಎಂದು ಹೇಳಿದರು.

ಈ 13 ಪಟ್ಟಣಗಳಲ್ಲಿ ಮೊದಲ ಸೇವೆ ಆರಂಭ.

ದೂರ ಸಂಚಾರ ವಿಭಾಗದಿಂದ ದೊರೆತ ಮಾಹಿತಿಯ ಪ್ರಕಾರ, ದೇಶದ ಈ 13 ಪಟ್ಟಣಗಳಲ್ಲಿ 5G ಸೇವೆ ಮೊದಲು ಆರಂಭವಾಗಲಿದೆ. ಅವುಗಳಲ್ಲಿ ಬೆಂಗಳೂರು ಅಹಮದಾಬಾದ್, ಚಂದಿಗರ್, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ ದೆಹಲಿ, ಲಖನೌ, ಜಾಮ್ ನಗರ್, ಗುರುಗ್ರಾಮ ಮತ್ತು ಗಾಂಧಿನಗರ ಸಮಾವೇಶವಾಗಿವೆ.

Leave a Comment

Your email address will not be published. Required fields are marked *