ಹಾವು ಹಠಾತ್ ಅಟ್ಯಾಕ್ ಮಾಡಿದಾಗ ಬೆಕ್ಕಿನ ಪೀಕಲಾಟ ನೋಡಿ ಈ ವಿಡಿಯೋದಲ್ಲಿ…
ಅನೇಕ ಪ್ರಾಣಿಗಳ ಮಧ್ಯೆದಲ್ಲಿ ಮೊದಲಿನಿಂದಲೇ ಶತ್ರುತ್ವ ಸಾಗಿ ಬಂದಿದೆ. ಅವಗಳಲ್ಲಿ ವಿಶೇಷವಾಗಿ ಹಾವು – ಮುಂಗಸಿ, ಬೆಕ್ಕು – ಇಲಿ, ನಾಯಿ – ಮಂಗ, ನಾಯಿ – ಬೆಕ್ಕು ಹಾಗೂ ಹಾವು ಮತ್ತು ಬೆಕ್ಕು ಹೀಗೆ ಅನೇಕ ಪ್ರಾಣಿಗಳ ಹೆಸರು ಹೇಳಬಹುದು. ಹಾವನ್ನು ಕಂಡರೆ ಬೆಕ್ಕು ಸಹ ಯಾವತ್ತೂ ಸುಮ್ಮನೆ ಬಿಡುವುದೇ ಇಲ್ಲ. ಸದ್ಯ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ ಹಾವು ಮತ್ತು ಬೆಕ್ಕಿನ ವಿಡಿಯೋ ಒಂದು ಶೇರ್ ಮಾಡಲಾಗಿದ್ದು ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಒಂದು ಹಾವು ಮತ್ತು ಬೆಕ್ಕು ಕಂಡು ಬರುತ್ತಿದೆ. ಬೆಕ್ಕು ಹಾವಿಗೆ ಅಡ್ಡಲಾಗಿ ನಿಂತು ಅದಕ್ಕೆ ಮುಂದೆ ಬಿಡದೆ ನಿಧಾನವಾಗಿ ಮೂಸಿ ನೋಡುತ್ತಿದೆ. ಅದೇ ಸಮಯದಲ್ಲಿ ಹಾವು ಹಠಾತ್ ಬೆಕ್ಕಿನ ಮುಖದ ಮೇಲೆಯೇ ದಾಳಿ ಮಾಡಿದೆ. ಈ ದಾಳಿಗೆ ಬೆಕ್ಕು ಅಕ್ಷರಶಃ ಬೆಚ್ಚಿ ಬಿದ್ದು ಹವೆಯಲ್ಲಿ ಅಜಗಜಾಂತರವಾಗಿ ಎತ್ತರಕ್ಕೆ ಜಿಗಿದಿದೆ. ಈ ದೃಶ್ಯ ನೋಡಲು ನಿಜಕ್ಕೂ ಸೂಪರ್ ಆಗಿದೆ. ಬೆಕ್ಕು ಹಾವಿನ ದಾಳಿಗೆ ಒಮ್ಮೆಲೆ ತಬ್ಬಿಬ್ಬಾಗಿ ಏನು ಮಾಡಬೇಕೆಂದು ತೋಚದೇ ಆ ರೀತಿ ಹವೆಯಲ್ಲಿ ಜಂಪ್ ಮಾಡಿದೆ. ಜಂಪ್ ಮಾಡಿದ ನಂತರ ಮತ್ತೆ ತಿರುಗಿ ಅದೇ ಹಾವಿನ ಮೇಲೆ ಬೀಳಬೇಕಾ?
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವೀಡಿಯೋವನ್ನು ಸಾವಿರಾರು ಸಂಖ್ಯೆಯಲ್ಲಿ ನೆಟ್ಟಿಗರು ನೋಡುತ್ತಿದ್ದಾರೆ ಮತ್ತು ತಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ನಲ್ಲಿ ನೀಡುತ್ತಿದ್ದಾರೆ.